ರಾಹುಲ್ ಗಾಂಧಿ- ಎಸ್ ಜೈಶಂಕರ್ online desk
ದೇಶ

ದೇಶದೊಳಗೆ MEA ಸಭೆಯನ್ನು US ಘೋಷಣೆ ಮಾಡುವಂತಹ ಪರಿಸ್ಥಿತಿ ಯಾವಾಗ ಬಂತು?: ರೂಬಿಯೊ ಭಾರತ ಭೇಟಿ ಹಿನ್ನೆಲೆ ಕೇಂದ್ರಕ್ಕೆ ಕಾಂಗ್ರೆಸ್ ಪ್ರಶ್ನೆ

ತಾವು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು "ಗೊಂದಲ"ಕ್ಕೀಡಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಬಹುದು ಎಂದೂ ಅವರು ತಿಳಿಸಿದ್ದಾರೆ.

ಮುಂದಿನ ವಾರ ಮುಂಬೈನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಭಾರತ ಸರ್ಕಾರದ ಅಧಿಕಾರಿಗಳೊಂದಿಗೆ ನಡೆಸಲು ಉದ್ದೇಶಿಸಿರುವ ಸಭೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದ್ದಾರೆ.

ತಾವು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು "ಗೊಂದಲ"ಕ್ಕೀಡಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಬಹುದು ಎಂದೂ ಅವರು ತಿಳಿಸಿದ್ದಾರೆ.

ಅಮೆರಿಕದ ಪ್ರತಿನಿಧಿ ಸೆರ್ಜಿಯೊ ಗೋರ್, ರೂಬಿಯೊ ಮುಂಬೈನಲ್ಲಿ ಭಾರತ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಮತ್ತು "ಸಚಿವ ಡಾ. ಎಸ್. ಜೈಶಂಕರ್ ಅವರು ಅಲ್ಲಿ ಉಪಸ್ಥಿತರಿರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಹೇಳಿದ ಮರುದಿನವೇ ಕಾಂಗ್ರೆಸ್ ನಾಯಕರ ಈ ಹೇಳಿಕೆ ಹೊರಬಿದ್ದಿದೆ.

'ಎಕ್ಸ್' (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, "ರೂಬಿಯೊ ಅವರು ತಮ್ಮ ಉದ್ಯೋಗಿಯನ್ನು ಮುಂಬೈಗೆ ಕರೆಸಿಕೊಂಡಿದ್ದಾರೆ. ಮೋದಿ ಜೀ, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿರುವ ನಿಮ್ಮ ಅಧಿಕಾರಿಗಳಿಗೆ ಏನು ನಡೆಯುತ್ತಿದೆ ಎಂಬುದು ಅರ್ಥವಾಗದೆ ಗೊಂದಲದಲ್ಲಿದ್ದಾರೆ. ನೀವು ಬಹುಶಃ ಈ ಬಗ್ಗೆ ಸ್ಪಷ್ಟನೆ ನೀಡಬೇಕೇನೋ? ಅಥವಾ, ನಾನೇ ವಿವರಿಸಬೇಕೆಂದು ನೀವು ಬಯಸುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಸರ್ಕಾರ ಅಥವಾ ಬಿಜೆಪಿ ಕಡೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ರೂಬಿಯೊ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಅವರು ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್ ಘಟಕಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮುಂಬೈನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.

ಗುರುವಾರವಷ್ಟೇ ಕಾಂಗ್ರೆಸ್ ಪಕ್ಷ, ರೂಬಿಯೊ ಅವರ ಭಾರತ ಭೇಟಿಯ ವಿಷಯವನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಮುಂಬೈನಲ್ಲಿ ಅಮೆರಿಕದ ನಾಯಕರೊಂದಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ನಡೆಸಲಿರುವ "ರಹಸ್ಯ" ಭೇಟಿ (tryst) ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಏಕೆ ಮೌನ ವಹಿಸಿದೆ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ) ಜೈರಾಮ್ ರಮೇಶ್ ಅವರು, ರೂಬಿಯೊ ಅವರ ಮುಂಬೈ ಭೇಟಿಯ ಕುರಿತು ಸೆರ್ಜಿಯೊ ಗೋರ್ ಹೆಚ್ಚಿನ ವಿವರಗಳನ್ನು ನೀಡಿರುವುದು ಆಶ್ಚರ್ಯವೇನಲ್ಲ ಎಂದು ಹೇಳಿದ್ದರು.

"ರೂಬಿಯೊ ಅವರು ಮುಂಬೈನಲ್ಲಿ ಭಾರತ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದು ಅವರು ಹೇಳಿರುವುದು ಅಷ್ಟೇನೂ ಆಶ್ಚರ್ಯದ ಸಂಗತಿಯಲ್ಲ. ಆದರೆ, 'ಸಚಿವ ಡಾ. ಜೈಶಂಕರ್ ಅವರು ಇತರ ವ್ಯಕ್ತಿಗಳೊಂದಿಗೆ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ನಾವು ನಿರೀಕ್ಷಿಸುತ್ತೇವೆ' ಎಂದು ಅವರು ನೀಡಿರುವ ಹೇಳಿಕೆ ಮಾತ್ರ ಅತ್ಯಂತ ಅಸಾಮಾನ್ಯವಾಗಿದೆ," ಎಂದು ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಬರೆದಿದ್ದರು.

ಭಾರತದ ವಿದೇಶಾಂಗ ಸಚಿವರು ದೇಶದೊಳಗೆ ನಡೆಸುವ ಸಭೆಗಳ ಘೋಷಣೆಯನ್ನು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರರನ್ನು ಹೊರತುಪಡಿಸಿ ಬೇರೆ ಯಾರೋ ಮಾಡುವಂತಹ ಪರಿಸ್ಥಿತಿ ಯಾವಾಗ ಬಂತು? ಎಂದು ರಮೇಶ್ ಪ್ರಶ್ನಿಸಿದ್ದಾರೆ. 'ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಮ್'ನಲ್ಲಿ ನಡೆದ ಸಂವಾದದ ವೇಳೆ ಮಾತನಾಡಿದ ಗೋರ್, ರುಬಿಯೊ ಅವರು ಮುಂಬೈನಲ್ಲಿ ಭಾರತ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದು ತಿಳಿಸಿದರು. "ಸಚಿವ ಡಾ. ಎಸ್. ಜೈಶಂಕರ್ ಹಾಗೂ ದೆಹಲಿಯಿಂದ ಆಗಮಿಸಲಿರುವ ಇತರ ವ್ಯಕ್ತಿಗಳು ಮುಂಬೈನಲ್ಲಿ ರುಬಿಯೊ ಅವರನ್ನು ಭೇಟಿಯಾಗಲಿದ್ದಾರೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಅವರು ಹೇಳಿದರು.

ರುಬಿಯೊ ಅವರು ಮೊದಲು ಉಜ್ಬೇಕಿಸ್ತಾನ್‌ನ ಸಮರ್‌ಕಂಡ್ ನಗರಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಅಕ್ಟೋಬರ್ 17 ರಿಂದ 22 ರವರೆಗೆ ಅವರು ಮುಂಬೈ ಹಾಗೂ ಗುಜರಾತ್‌ನ ಜಾಮ್‌ನಗರಕ್ಕೆ ಪ್ರಯಾಣಿಸಲಿದ್ದಾರೆ ಎಂದು ಅದರಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರಿ ನೌಕರಿ ಅವಧಿ 10-15 ವರ್ಷಕ್ಕೆ ಲಿಮಿಟ್‌ ಮಾಡಿದ್ರೆ ಹೇಗೆ?: ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ ಕಲ್ಪಿಸಲು HDK ಹೊಸ ಚಿಂತನೆ!

Video: ʻಪ್ರೇಮದ ಊರಲಿʼ ಚಿತ್ರತಂಡವನ್ನು ಖುದ್ದು ಭೇಟಿ ಮಾಡಿದೆ, ಅವರ ಕಣ್ಣಲ್ಲಿ...! ರಾಕಿಂಗ್‌ ಸ್ಟಾರ್‌ ಯಶ್ ಹೇಳಿದ್ದೇನು?

‘ಈಜಿಪುರ ಫ್ಲೈಓವರ್ Roadstersಗಳಿಗಾಗಿಯೇ ನಿರ್ಮಿಸಿದ್ದು’: ಅಪೂರ್ಣ ಫ್ಲೈಓವರ್‌ ಕುರಿತು ಸರ್ಕಾರದ ವಿರುದ್ಧ ಟ್ರೋಲ್! Video

Sting Operation: 'ಪೊಲೀಸರಿಗೆ ಬೆದರಿಕೆ ಹಾಕಿಲ್ಲ, ನನ್ನಿಂದಲೇ ತನಿಖೆ ಆರಂಭಿಸಿ ಎಂದಿದ್ದೇನೆ': ಎಚ್‌.ಡಿ. ಕುಮಾರಸ್ವಾಮಿ

ಬಲಪ್ರಯೋಗದ ಮೂಲಕ ಆಳುವ ಸರ್ಕಾರ ಗೆಲ್ಲಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ನಟ ಇಮ್ರಾನ್ ಖಾನ್ ಗರ್ಲ್​​​ಫ್ರೆಂಡ್ ಲೇಖಾ ಕಿಡಿ