CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್ 
ದೇಶ

'ಭಾರತ ತೊರೆಯುವಂತೆ' ನೋಟಿಸ್ ಕಾನೂನು ಬಾಹಿರ: ಹೈಕೋರ್ಟ್‌ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಅಮೆರಿಕದ ಪ್ರಜೆಯಾಗಿರುವ ಮತ್ತು ಒಸಿಐ (OCI - ಸಾಗರೋತ್ತರ ಭಾರತೀಯ ನಾಗರಿಕ) ಕಾರ್ಡ್ ಹೊಂದಿರುವ ನಟ ಇಮ್ರಾನ್ ಖಾನ್ ಅವರು ಇದೀಗ ಮುಂಬೈ ಪೊಲೀಸರ ನೋಟಿಸ್ ಪ್ರಶ್ನಿಸಿ ಶನಿವಾರ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಮುಂಬೈನಲ್ಲಿ ಕಳೆದ ಶನಿವಾರ ನಡೆದ 'ಕಾಕ್ರೋಚ್ ಜನತಾ ಪಾರ್ಟಿ'(CJP) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್‌ ಅವರಿಗೆ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ.

ಅಮೆರಿಕದ ಪ್ರಜೆಯಾಗಿರುವ ಮತ್ತು ಒಸಿಐ (OCI - ಸಾಗರೋತ್ತರ ಭಾರತೀಯ ನಾಗರಿಕ) ಕಾರ್ಡ್ ಹೊಂದಿರುವ ನಟ ಇಮ್ರಾನ್ ಖಾನ್ ಅವರು ಇದೀಗ ಮುಂಬೈ ಪೊಲೀಸರ ನೋಟಿಸ್ ಪ್ರಶ್ನಿಸಿ ಶನಿವಾರ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಮ್ಮ ವಕೀಲರಾದ ಜುಲ್ಫಿಕರ್ ಮೆಮನ್ ಮತ್ತು 'ಎಂಝಡ್‌ಎಂ ಲೀಗಲ್'(MZM Legal) ಮೂಲಕ ಇಮ್ರಾನ್ ಖಾನ್ ಅವರು ಇಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಪೊಲೀಸರು ನೀಡಿದ ನೋಟಿಸ್ "ಕಾನೂನು ಬಾಹಿರ, ಅಸಮಂಜಸ, ಕಠೋರ ಮತ್ತು ಕಾನೂನಿನ ದೃಷ್ಟಿಯಲ್ಲಿ ದೋಷಪೂರಿತ" ಎಂದು ಹೇಳಿದ್ದಾರೆ.

ಈ ನೋಟಿಸ್ ಅನ್ನು ರದ್ದುಗೊಳಿಸುವಂತೆ ಹಾಗೂ ಮಧ್ಯಂತರ ಪರಿಹಾರವಾಗಿ ನೋಟಿಸ್ ಗೆ ತಡೆ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಒಸಿಐ (OCI) ಕಾರ್ಡ್ ಹೊಂದಿರುವ ವ್ಯಕ್ತಿಯೊಬ್ಬರು ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವ ಯಾವುದೇ ಅವಕಾಶ ಪ್ರಸ್ತುತ ಕಾನೂನು ಅಥವಾ ಶಾಸನಬದ್ಧ ನಿಯಮಗಳಲ್ಲಿ ಇಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇಥ್ನಾ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ, ತುರ್ತು ವಿಚಾರಣೆಗಾಗಿ ಈ ಅರ್ಜಿಯನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.

"ಯಾವುದೇ ಕಾರಣಗಳನ್ನು ನೀಡದೆ, ಪೂರಕ ಸಾಕ್ಷ್ಯಾಧಾರಗಳನ್ನು ಒದಗಿಸದೆ ಅಥವಾ ನಿರ್ದಿಷ್ಟ ಕಾನೂನು ಉಲ್ಲಂಘನೆಯನ್ನು ಉಲ್ಲೇಖಿಸದೆ ಈ ನೋಟಿಸ್ ನೀಡಲಾಗಿದೆ. ಯಾವುದೇ ವಿಚಾರಣೆ ನಡೆಸದೆ, ಕಾರಣ ಕೇಳುವ ನೋಟಿಸ್ (show-cause notice) ನೀಡದೆ ಅಥವಾ ಆರೋಪಿತ ಉಲ್ಲಂಘನೆಗಳ ಬಗ್ಗೆ ಪ್ರತಿಕ್ರಿಯಿಸಲು ಅರ್ಜಿದಾರರಿಗೆ (ಖಾನ್) ಅವಕಾಶವನ್ನೇ ನೀಡದೆ ಈ ನೋಟಿಸ್ ನೀಡಲಾಗಿದೆ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯ ವೇಳೆ ಇಮ್ರಾನ್ ಖಾನ್ ಅವರನ್ನು ಪೊಲೀಸರು ಅಲ್ಪಕಾಲ ವಶಕ್ಕೆ ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾನೇ ವಿಡಿಯೋ ಮಾಡಿದ್ದೇನೆಂದು ಕಿಂಗ್ ಪಿನ್ ಹೇಳಿದ್ದಾರೆ; ಇದನ್ನೆಲ್ಲ ನೋಡಿ ಸಿದ್ದರಾಮಯ್ಯ ರಕ್ತ ಕುದಿಯುತ್ತಿಲ್ವಾ?: HDK

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅ. 22ರ ವರೆಗೆ ಭಾರೀ ಮಳೆ; ಯೆಲ್ಲೊ ಅಲರ್ಟ್ ಘೋಷಣೆ

ಜೆ.ಡಿ. ವ್ಯಾನ್ಸ್ ಜೊತೆ ಮಾತುಕತೆ, ಕೆಲವೇ ಕ್ಷಣಗಳಲ್ಲಿ ವಜಾ: ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಟಿ ಜಕಾರಿಯಾ ದಿಢೀರ್ ಹುದ್ದೆಯಿಂದ ಇಳಿದಿದ್ದೇಕೆ?

ಪ್ರೇಮದ ಊರಲಿ, ಜೈಲರ್ 2 ಮುಂದೆ ಮಗ್ಗರಿಸಿದ 'ರಣಬಾಲಿ': ಮದುವೆ ಬಳಿಕ ಒಂದಾದ ವಿಜಯ್-ರಶ್ಮಿಕಾ ಜೋಡಿ ವಿಫಲ!

AI ಫೋಟೋ, ವಿಡಿಯೋ ವಿರುದ್ಧ ಸಿಡಿದೆದ್ದ ನಟಿ ನೇಹಾ ಶರ್ಮಾ; ಕಾನೂನು ಕ್ರಮದ ಎಚ್ಚರಿಕೆ