ದೆಹಲಿಯಲ್ಲಿ ಪ್ರತಿಭಟನೆಗಳ ಕಾಟಕ್ಕೆ ವ್ಯಾಪಾರಿಗಳಿಗೆ ಬರೋಬ್ಬರಿ ₹3,000 ಕೋಟಿ ನಷ್ಟ Express
ದೇಶ

ದೆಹಲಿಯಲ್ಲಿ ಪ್ರತಿಭಟನೆಗಳ ಕಾಟ: ವ್ಯಾಪಾರಿಗಳಿಗೆ ಬರೋಬ್ಬರಿ ₹3,000 ಕೋಟಿ ನಷ್ಟ ಎಂದ ವರ್ತಕರ ಸಂಘ

ದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನಡೆಸುತ್ತಿರುವ ಸರಣಿ ಪ್ರತಿಭಟನೆಗಳಿಂದಾಗಿ ವರ್ತಕರಿಗೆ ಭಾರಿ ನಷ್ಟ ಉಂಟಾಗಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನಡೆಸುತ್ತಿರುವ ಸರಣಿ ಪ್ರತಿಭಟನೆಗಳಿಂದಾಗಿ ವರ್ತಕರಿಗೆ ಭಾರಿ ನಷ್ಟ ಉಂಟಾಗಿದೆ. ದೆಹಲಿಯ ಪ್ರಮುಖ ವರ್ತಕರ ಸಂಘಟನೆಯಾದ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ನೀಡಿರುವ ವರದಿಯ ಪ್ರಕಾರ, ಅಕ್ಟೋಬರ್ ತಿಂಗಳಿನಲ್ಲಿ ನಡೆದಿರುವ ಪ್ರತಿಭಟನೆಗಳು ಹಾಗೂ ಪೊಲೀಸ್ ನಿರ್ಬಂಧಗಳಿಂದಾಗಿ ದೆಹಲಿಯ ವ್ಯಾಪಾರ ವಲಯಕ್ಕೆ ಇದುವರೆಗೆ ಬರೋಬ್ಬರಿ ₹3,000 ಕೋಟಿ ನಷ್ಟ ಸಂಭವಿಸಿದೆ. ಆ ಕುರಿತ ವರದಿ ಇಲ್ಲಿದೆ:

ದೆಹಲಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿ ಹಾಗೂ ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಚಿಲ್ಲರೆ ವ್ಯಾಪಾರದಲ್ಲಿ 1,800 ಕೋಟಿ, ಸಗಟು ವ್ಯಾಪಾರದಲ್ಲಿ 600 ಕೋಟಿ, ಹೋಟೆಲ್ ಮತ್ತು ಸೇವಾ ವಲಯದಲ್ಲಿ 300 ಕೋಟಿ, ಸಾರಿಗೆ ಮತ್ತು ಪ್ರವಾಸೋದ್ಯಮ ವಲಯದಲ್ಲಿ 180 ಕೋಟಿ ಹಾಗೂ ಅಸಂಘಟಿತ ವಲಯದಲ್ಲಿ 120 ಕೋಟಿ ನಷ್ಟವಾಗಿದೆ. ಅದರಲ್ಲೂ, ಅಕ್ಟೋಬರ್ 10ರ ಒಂದೇ ದಿನ ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸಿದ ಬೃಹತ್ ಪ್ರತಿಭಟನೆ ಮತ್ತು ಪೊಲೀಸರು ಮಾರುಕಟ್ಟೆಗಳನ್ನು ಬಂದ್ ಮಾಡಿಸಿದ ಕಾರಣ ಒಂದೇ ದಿನದಲ್ಲಿ ₹2,000 ಕೋಟಿ ಮೌಲ್ಯದ ವ್ಯಾಪಾರ ಸ್ಥಗಿತಗೊಂಡಿತ್ತು. ಜೊತೆಗೆ, ಅಕ್ಟೋಬರ್ 13 ರಿಂದ 16 ರವರೆಗೆ ಸೆಂಟ್ರಲ್ ದೆಹಲಿಯಲ್ಲಿ ವಿಧಿಸಲಾದ ರಸ್ತೆ ತಡೆ, ಮೆಟ್ರೋ ನಿಲ್ದಾಣಗಳ ಬಂದ್ ಮತ್ತು ಕನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಮುಚ್ಚಿದ್ದರಿಂದ ಈ 4 ದಿನಗಳಲ್ಲಿ ಹೆಚ್ಚುವರಿಯಾಗಿ ₹1,000 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ದೀಪಾವಳಿ ವೇಳೆಗೆ ₹10,000 ಕೋಟಿ ನಷ್ಟದ ಆತಂಕ!

ನವರಾತ್ರಿ, ರಾಮಲೀಲಾ ಮತ್ತು ದೀಪಾವಳಿ ಹಬ್ಬದ ಈ ಒಂದು ತಿಂಗಳು ದೆಹಲಿಯ ವರ್ತಕರು ಇಡೀ ವರ್ಷದ ಆದಾಯ ಗಳಿಸುವ ಪ್ರಮುಖ ಸಮಯವಾಗಿದೆ. ಒಂದು ವೇಳೆ ಪ್ರತಿಭಟನೆಗಳು ಹೀಗೆಯೇ ಪ್ರತಿ ವಾರ ಮುಂದುವರಿದರೆ, ದೀಪಾವಳಿ ವೇಳೆಗೆ ಒಟ್ಟು ವ್ಯಾಪಾರ ನಷ್ಟವು ₹10,000 ಕೋಟಿ ದಾಟಬಹುದು ಎಂದು CTI ಅಧ್ಯಕ್ಷ ಬ್ರಿಜೇಶ್ ಗೋಯಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದುವರೆದು, ಈ ನಷ್ಟದ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬ ಮುಗಿಯುವವರೆಗೆ ಸೆಂಟ್ರಲ್ ಡೆಲ್ಲಿ, ನವದೆಹಲಿ ಮತ್ತು ಲುಟ್ಯೆನ್ಸ್ ವಲಯದಲ್ಲಿ ಯಾವುದೇ ರೀತಿಯ ಧರಣಿ ಅಥವಾ ಪ್ರತಿಭಟನೆಗಳಿಗೆ ಸಂಪೂರ್ಣ ನಿಷೇಧ ಹೇರಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಪ್ರತಿಭಟನೆಗಳನ್ನು ನಡೆಸಲು ದೆಹಲಿಯ ಹೊರವಲಯಗಳಾದ ಬುರಾರಿ, ರೋಹಿಣಿ ಅಥವಾ ದ್ವಾರಕಾ ಭಾಗಗಳಲ್ಲಿ ಶಾಶ್ವತ ಜಾಗ ನಿಗದಿಪಡಿಸಬೇಕು. ಜೊತೆಗೆ ಅಕ್ಟೋಬರ್‌ನಲ್ಲಿ ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ಜಿಎಸ್‌ಟಿ, ವಿದ್ಯುತ್ ಮತ್ತು ನೀರಿನ ಬಿಲ್‌ಗಳಲ್ಲಿ ವಿನಾಯಿತಿ ನೀಡಿ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ವರ್ತಕರ ಸಂಘಟನೆಗಳು ಸರ್ಕಾರ ಮತ್ತು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾನೇ ವಿಡಿಯೋ ಮಾಡಿದ್ದೇನೆಂದು ಕಿಂಗ್ ಪಿನ್ ಹೇಳಿದ್ದಾರೆ; ಇದನ್ನೆಲ್ಲ ನೋಡಿ ಸಿದ್ದರಾಮಯ್ಯ ರಕ್ತ ಕುದಿಯುತ್ತಿಲ್ವಾ?: HDK

ಪ್ರೇಮದ ಊರಲಿ, ಜೈಲರ್ 2 ಮುಂದೆ ಮಗ್ಗರಿಸಿದ 'ರಣಬಾಲಿ': ಮದುವೆ ಬಳಿಕ ಒಂದಾದ ವಿಜಯ್-ರಶ್ಮಿಕಾ ಜೋಡಿ ವಿಫಲ!

AI ಫೋಟೋ, ವಿಡಿಯೋ ವಿರುದ್ಧ ಸಿಡಿದೆದ್ದ ನಟಿ ನೇಹಾ ಶರ್ಮಾ; ಕಾನೂನು ಕ್ರಮದ ಎಚ್ಚರಿಕೆ

ಅಭಿಜಿತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು; ಬಾಂಡ್‌ ಗೆ ಸಹಿ ಹಾಕಿಸಿ ಬಿಡುಗಡೆ

ಜಲಪಾತದಲ್ಲಿ ಮೋಜು-ಮಸ್ತಿ: ಜಾರಿಕೊಂಡು ಹೋಗಿ ಯುವತಿ ಸಾವು, ಸ್ನೇಹಿತರ ರಕ್ಷಣಾ ಪ್ರಯತ್ನವೂ ವಿಫಲ! Video