ನೂಡಲ್ಸ್ ತಿಂದು ಮಲಗಿದ್ದ ಒಂದೇ ಕುಟುಂಬದ ಐವರ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್ Online Desk
ದೇಶ

ನೂಡಲ್ಸ್ ತಿಂದು ಮಲಗಿದ್ದ ಒಂದೇ ಕುಟುಂಬದ ಐವರ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್: ಆಸ್ತಿ ಕಲಹದಿಂದ ಆತ್ಮಹತ್ಯೆ?

ಗ್ರೇಟರ್ ನೋಯ್ಡಾದಲ್ಲಿ ಒಂದೇ ಕುಟುಂಬದ ಐವರು ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾವುಗಳಿಗೆ ನೂಡಲ್ಸ್ ಸೇವನೆ ಕಾರಣವಲ್ಲ; ಬದಲಿಗೆ ತೀವ್ರ ಆಸ್ತಿ ಕಲಹದ ಹಿನ್ನೆಲೆಯಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಬಹಿರಂಗವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ): ಗ್ರೇಟರ್ ನೋಯ್ಡಾದ ರಬುಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾ ಶ್ರೀ ಪದಮ್ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಅದರಂತೆ, ಪ್ರಾಥಮಿಕ ತನಿಖೆಯಲ್ಲಿ ಆಹಾರ ವಿಷಪ್ರಾಶನದಿಂದ (ನೂಡಲ್ಸ್ ಸೇವನೆಯಿಂದ) ಸಾವು ಸಂಭವಿಸಿದೆ ಎಂದು ಶಂಕಿಸಲಾಗಿತ್ತಾದರೂ, ಪ್ರಸ್ತುತ ಇದು ನೂಡಲ್ಸ್ ಕಾರಣದಿಂದ ಆದ ಸಾವಲ್ಲ, ಬದಲಿಗೆ ಆಸ್ತಿ ಕಲಹದ ಹಿನ್ನೆಲೆಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಏನಿದು ಘಟನೆ?

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ರಬುಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಂಗ್ಲಾ ಶ್ರೀಪಾದಂ ಗ್ರಾಮದಲ್ಲಿ ಮಹೇಶ್ (37), ಅವರ ಪತ್ನಿ ಲಲಿತಾ (35), ಮತ್ತು ಅವರ ಮೂವರು ಮಕ್ಕಳಾದ ಲಡ್ಡು (11), ಮಿಷ್ಟಿ (7) ಹಾಗೂ ಸಾಕ್ಷತ್ (3) ಶನಿವಾರ ಬೆಳಿಗ್ಗೆ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದಕ್ಕೂ ಮುನ್ನ ಶುಕ್ರವಾರ ರಾತ್ರಿ ಈ ಕುಟುಂಬವು ಮಲಗುವ ಮುನ್ನ ಮ್ಯಾಗಿ ನೂಡಲ್ಸ್ ಹಾಗೂ ಚಹಾ ಸೇವಿಸಿತ್ತು. ಮರುದಿನ ಬೆಳಿಗ್ಗೆ ಎಲ್ಲರ ಬಾಯಲ್ಲಿ ನೊರೆ ಬಂದು ಮೃತಪಟ್ಟಿರುವುದು ಕಂಡುಬಂದಿದ್ದರಿಂದ, ಇದು ನೂಡಲ್ಸ್‌ನಿಂದ ಉಂಟಾದ ಆಹಾರ ವಿಷಪ್ರಾಶನ ಇರಬಹುದು ಎಂದು ಮೊದಲು ಶಂಕಿಸಲಾಗಿತ್ತು.

ತಿರುವು ನೀಡಿದ ವಾಯ್ಸ್ ನೋಟ್

ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರಿಗೆ ಮೃತ ಮಹೇಶ್ ಅವರ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದ್ದ ಒಂದು ಮಹತ್ವದ ವಾಯ್ಸ್ ನೋಟ್ ಲಭ್ಯವಾಗಿದೆ. ಅದರಲ್ಲಿ ಮಹೇಶ್ ಅವರು ತಮ್ಮ ಈ ದುಸ್ಥಿತಿಗೆ ಮತ್ತು ಆತ್ಮಹತ್ಯೆಯ ನಿರ್ಧಾರಕ್ಕೆ ತಮ್ಮ ಇಬ್ಬರು ಸಹೋದರಿಯರು ಹಾಗೂ ಭಾವನೇ ನೇರ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಆಸ್ತಿ ವಿವಾದವೇ ಕಾರಣ?

ಮುಂದುವರೆದು, ಸ್ಥಳೀಯರು ಹಾಗೂ ನೆರೆಹೊರೆಯವರ ವಿಚಾರಣೆಯಿಂದ ಆಸ್ತಿ ಹಂಚಿಕೆಯ ತೀವ್ರ ಕಲಹ ಬೆಳಕಿಗೆ ಬಂದಿದೆ. ಮಹೇಶ್ ಅವರ ತಾಯಿಯು ಇಡೀ ಮನೆ ಮತ್ತು ಜಮೀನಿನ ಆಸ್ತಿಯನ್ನು ಮಹೇಶ್ ಅವರ ಸಹೋದರಿಯರ ಹೆಸರಿಗೆ ವರ್ಗಾಯಿಸಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ, ಮಹೇಶ್ ಕುಟುಂಬಕ್ಕೆ ತಕ್ಷಣವೇ ಮನೆಯನ್ನು ಖಾಲಿ ಮಾಡುವಂತೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ತೀವ್ರ ಮನನೊಂದಿದ್ದ ಮಹೇಶ್, ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಹಾರದಲ್ಲಿ ವಿಷ ಬೆರೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಏತನ್ಮಧ್ಯೆ, ಮಹೇಶ್ ಅವರ ಭಾವ ನೀಡಿದ ದೂರಿನ ಆಧಾರದ ಮೇಲೆ ಮತ್ತು ಸಿಕ್ಕ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳಾದ ಇಬ್ಬರು ಸಹೋದರಿಯರು ಹಾಗೂ ಭಾವನನ್ನು ತಕ್ಷಣವೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ, ಐದೂ ಮೃತದೇಹಗಳ (ಮಹೇಶ್, ಪತ್ನಿ ಲಲಿತಾ ಮತ್ತು ಮೂವರು ಮಕ್ಕಳು) ಮರಣೋತ್ತರ ಪರೀಕ್ಷೆಯಲ್ಲಿ ವಿಷಪ್ರಾಶನವಾಗಿರುವ ಲಕ್ಷಣಗಳು ಪತ್ತೆಯಾಗಿವೆ. ಇದರ ನಡುವೆ, ನಿಖರವಾದ ವಿಷದ ಅಂಶವನ್ನು ಪತ್ತೆಹಚ್ಚಲು ವೈದ್ಯರು ದೇಹದ ಒಳಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Kolkata Durga Puja stampede ಕೇಸ್: ಪೂಜಾ ಸಮಿತಿ ಕಾರ್ಯದರ್ಶಿ ಸೇರಿ 7 ಮಂದಿ ಬಂಧನ; SIT ತನಿಖೆಗೆ ಆದೇಶ, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ..!

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಆಯೋಜಕರು ಸೇರಿ 12 ಮಂದಿ ವಶಕ್ಕೆ, ಮೃತರ ಕುಟುಂಬಕ್ಕೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ..!

CM ಡಿಕೆ.ಶಿವಕುಮಾರ್ ಭರವಸೆಗೂ ಜಗ್ಗದ ಕಬ್ಬು ಬೆಳೆಗಾರರು: ಹೋರಾಟ ಮುಂದುವರಿಸಲು ನಿರ್ಧಾರ..!

ತಲಕಾವೇರಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ: ಪವಿತ್ರ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು..!

ಗೂಗಲ್ ಮ್ಯಾಪ್ ನಂಬಿ ಕೆಟ್ಟ ಟೆಕ್ಕಿಗಳು: ಚೆನ್ನೈ ಬದಲು ಚಾಮರಾಜನಗರ ಸಮೀಪ ಹಳ್ಳಕ್ಕೆ ಬಿದ್ದ ಕಾರು