ಕೊಳಕು ಶೌಚಾಲಯ ಕಂಡರೆ ಫೋಟೋ ತೆಗೆಯಿರಿ, ₹1,000 ಬಹುಮಾನ ಗೆಲ್ಲಿ; AI Image
ದೇಶ

Clean Toilet Picture Challenge: ಕೊಳಕು ಶೌಚಾಲಯ ಕಂಡರೆ ಫೋಟೋ ತೆಗೆಯಿರಿ, ₹1,000 ಬಹುಮಾನ ಗೆಲ್ಲಿ; NHAI ಬಂಪರ್ ಆಫರ್!

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಕೊಳಕು ಶೌಚಾಲಯ ಕಂಡರೆ ಕೋಪ ಮಾಡಿಕೊಳ್ಳಬೇಡಿ, ಬದಲಿಗೆ ನಿಮ್ಮ ಮೊಬೈಲ್ ತೆಗೆದು ಒಂದು ಫೋಟೋ ಕ್ಲಿಕ್ಕಿಸಿ; ಯಾಕಂದ್ರೆ NHAI ನಿಮಗೆ ಬರೋಬ್ಬರಿ ₹1,000 ಗೆಲ್ಲುವ ಬಂಪರ್ ಆಫರ್ ನೀಡಿದೆ! ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಕೊಳಕು ಶೌಚಾಲಯ ಕಂಡರೆ ಕೋಪ ಮಾಡಿಕೊಳ್ಳಬೇಡಿ, ಬದಲಿಗೆ ನಿಮ್ಮ ಮೊಬೈಲ್ ತೆಗೆದು ಒಂದು ಫೋಟೋ ಕ್ಲಿಕ್ಕಿಸಿ; ಯಾಕಂದ್ರೆ NHAI ನಿಮಗೆ ಬರೋಬ್ಬರಿ ₹1,000 ಗೆಲ್ಲುವ ಬಂಪರ್ ಆಫರ್ ನೀಡಿದೆ!

ಹೌದು, ಹೆದ್ದಾರಿ ಪ್ರಯಾಣಿಕರ ಪ್ರಯಾಣವನ್ನು ಸುಖಕರವಾಗಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದು ರೋಮಾಂಚಕ ಜಾಗೃತಿ ಅಭಿಯಾನವನ್ನು ಶುರು ಮಾಡಿದೆ. ಅದುವೇ, ಇನ್ನು ಮುಂದೆ ಕೊಳಕು ಶೌಚಾಲಯಗಳನ್ನು ಪತ್ತೆಹಚ್ಚಿ ವರದಿ ಮಾಡುವ ಜಾಗೃತ ಪ್ರಯಾಣಿಕರಿಗೆ ಇಲಾಖೆಯೇ ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್ ಮೂಲಕ ಹಣದ ಬಹುಮಾನ ನೀಡಲು ಮುಂದಾಗಿದ್ದು, ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ:

ಬಹುಮಾನ ಸಿಗುವುದು ಹೇಗೆ?

ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್ ಯೋಜನೆಯಡಿಯಲ್ಲಿ ಟೋಲ್ ಪ್ಲಾಜಾಗಳಲ್ಲಿ ಕೊಳಕು ಶೌಚಾಲಯಗಳನ್ನು ಪತ್ತೆಹಚ್ಚಿ ವರದಿ ಮಾಡುವ ಸಾರ್ವಜನಿಕರಿಗೆ ₹1,000 ಬಹುಮಾನವನ್ನು ನೀಡುತ್ತಿದೆ. ಆದರೆ, ಈ ಯೋಜನೆಯಡಿ ಸಿಗುವ ₹1,000 ಬಹುಮಾನವನ್ನು ನಗದು ರೂಪದಲ್ಲಿ ನೀಡುವುದಿಲ್ಲ. ಬದಲಿಗೆ, ನಿಮ್ಮ ವಾಹನದ ಫಾಸ್ಟ್‌ಟ್ಯಾಗ್ ಖಾತೆಗೆ ₹1,000 ರೀಚಾರ್ಜ್ ಕ್ರೆಡಿಟ್ ಮಾಡುವ ಮೂಲಕ ನೀಡಲಾಗುತ್ತದೆ.

ದೂರು ಸಲ್ಲಿಸುವುದು ಹೇಗೆ? (ಹಂತ-ಹಂತದ ವಿಧಾನ)

  • ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ: ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ NHAI RajmargYatra ಆಪ್ ಅನ್ನು ಡೌನ್‌ಲೋಡ್ ಅಥವಾ ಅಪ್‌ಡೇಟ್ ಮಾಡಿಕೊಳ್ಳಿ.

  • ಫೋಟೋ ತೆಗೆದುಕೊಳ್ಳಿ: ನೀವು ಪ್ರಯಾಣಿಸುವಾಗ ಯಾವುದೇ ಟೋಲ್ ಪ್ಲಾಜಾದಲ್ಲಿ ಅಶುದ್ಧ ಅಥವಾ ಕೊಳಕು ಶೌಚಾಲಯ ಕಂಡುಬಂದರೆ, ಈ ಆಪ್ ಮೂಲಕವೇ ನೇರವಾಗಿ ಜಿಯೋ-ಟ್ಯಾಗ್ಡ್ ಮತ್ತು ಟೈಮ್-ಸ್ಟ್ಯಾಂಪ್ ಇರುವ ಸ್ಪಷ್ಟವಾದ ಫೋಟೋವನ್ನು ಕ್ಲಿಕ್ ಮಾಡಬೇಕು. (ಗ್ಯಾಲರಿಯಿಂದ ಹಳೆಯ ಅಥವಾ ಎಡಿಟ್ ಮಾಡಿದ ಫೋಟೋ ಅಪ್‌ಲೋಡ್ ಮಾಡಲು ಅವಕಾಶವಿಲ್ಲ).

  • ವಿವರಗಳನ್ನು ಭರ್ತಿ ಮಾಡಿ: ಫೋಟೋದೊಂದಿಗೆ ನಿಮ್ಮ ಹೆಸರು, ನಿಖರವಾದ ಸ್ಥಳ, ಮೊಬೈಲ್ ಸಂಖ್ಯೆ ಮತ್ತು ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಮಾಡಬೇಕು.

ಷರತ್ತುಗಳು ಅನ್ವಯ...

  • NHAI ವ್ಯಾಪ್ತಿಯ ಶೌಚಾಲಯಗಳು ಮಾತ್ರ: ಈ ಸೌಲಭ್ಯವು ಕೇವಲ NHAI ವ್ಯಾಪ್ತಿಗೆ ಒಳಪಡುವ ಮತ್ತು ಅವುಗಳಿಂದಲೇ ನಿರ್ವಹಿಸಲ್ಪಡುವ ಟೋಲ್ ಪ್ಲಾಜಾ ಶೌಚಾಲಯಗಳಿಗೆ ಮಾತ್ರ ಅನ್ವಯಿಸುತ್ತದೆ. ಹೆದ್ದಾರಿ ಬದಿಯ ಪೆಟ್ರೋಲ್ ಬಂಕ್‌ಗಳು, ಹೋಟೆಲ್‌ಗಳು ಅಥವಾ ಧಾಬಾಗಳಲ್ಲಿರುವ ಶೌಚಾಲಯಗಳು ಇದಕ್ಕೆ ಒಳಪಡುವುದಿಲ್ಲ.

  • ಮೊದಲು ಬಂದವರಿಗೆ ಆದ್ಯತೆ: ಒಂದು ನಿರ್ದಿಷ್ಟ ಶೌಚಾಲಯದ ಕುರಿತು ಒಂದು ದಿನದಲ್ಲಿ ಒಂದಕ್ಕಿಂತ ಹೆಚ್ಚು ದೂರುಗಳು ಬಂದರೆ, ಮೊದಲು ಸರಿಯಾದ ಫೋಟೋ ಅಪ್‌ಲೋಡ್ ಮಾಡಿದ ಮೊದಲ ಬಳಕೆದಾರರಿಗೆ ಮಾತ್ರ ಬಹುಮಾನ ನೀಡಲಾಗುತ್ತದೆ.

  • ಒಂದು ವಾಹನಕ್ಕೆ ಒಂದೇ ಅವಕಾಶ: ಇಡೀ ಯೋಜನೆಯ ಅವಧಿಯಲ್ಲಿ ಒಂದು ವಾಹನ ನೋಂದಣಿ ಸಂಖ್ಯೆಗೆ ಕೇವಲ ಒಂದು ಬಾರಿ ಮಾತ್ರ ₹1,000 ಬಹುಮಾನವನ್ನು ಪಡೆಯಲು ಅವಕಾಶವಿರುತ್ತದೆ.

  • ಪರಿಶೀಲನೆ: ನೀವು ಸಲ್ಲಿಸುವ ದೂರುಗಳನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮತ್ತು ಅಧಿಕಾರಿಗಳ ಮ್ಯಾನುವಲ್ ತಪಾಸಣೆಯ ಮೂಲಕ ಕಟ್ಟುನಿಟ್ಟಾಗಿ ಪರಿಶೀಲಿಸಿದ ಬಳಿಕವೇ ಬಹುಮಾನವನ್ನು ಅನುಮೋದಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Kolkata Durga Puja stampede ಕೇಸ್: ಪೂಜಾ ಸಮಿತಿ ಕಾರ್ಯದರ್ಶಿ ಸೇರಿ 7 ಮಂದಿ ಬಂಧನ; SIT ತನಿಖೆಗೆ ಆದೇಶ, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ..!

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಆಯೋಜಕರು ಸೇರಿ 12 ಮಂದಿ ವಶಕ್ಕೆ, ಮೃತರ ಕುಟುಂಬಕ್ಕೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ..!

CM ಡಿಕೆ.ಶಿವಕುಮಾರ್ ಭರವಸೆಗೂ ಜಗ್ಗದ ಕಬ್ಬು ಬೆಳೆಗಾರರು: ಹೋರಾಟ ಮುಂದುವರಿಸಲು ನಿರ್ಧಾರ..!

ತಲಕಾವೇರಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ: ಪವಿತ್ರ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು..!

ಗೂಗಲ್ ಮ್ಯಾಪ್ ನಂಬಿ ಕೆಟ್ಟ ಟೆಕ್ಕಿಗಳು: ಚೆನ್ನೈ ಬದಲು ಚಾಮರಾಜನಗರ ಸಮೀಪ ಹಳ್ಳಕ್ಕೆ ಬಿದ್ದ ಕಾರು