ಶಶಿ ತರೂರ್ 
ದೇಶ

ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಹೇಳಲು ನಾನು 'ಟ್ರಾವೆಲ್ ಏಜೆಂಟ್ ಅಲ್ಲ'; ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ: ಶಶಿ ತರೂರ್ ಆಕ್ರೋಶ

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ರಾಹುಲ್ ವಿದೇಶಕ್ಕೆ ತೆರಳಿದ್ದೇಕೆ ಎಂದು ವರದಿಗಾರರು ಪ್ರಶ್ನಿಸಿದಾಗ, ಕಾಂಗ್ರೆಸ್ ಸಂಸದರೂ ಆಗಿರುವ ಶಶಿ ತರೂರ್ ಅವರು ಕೇರಳದ ರಾಜಧಾನಿಯಲ್ಲಿದ್ದರು.

ತಿರುವನಂತಪುರಂ: ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಕ್ರಿಯೆಯ (SIR) ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವಾಗ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಿದ್ದೇಕೆ ಎಂದು ಕೇಳಲಾದ ಪ್ರಶ್ನೆಗೆ, ತಾನು 'ಯಾವುದೇ ಟ್ರಾವೆಲ್ ಏಜೆಂಟ್ ಅಲ್ಲ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಬುಧವಾರ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸದ ಕುರಿತು ಬಿಜೆಪಿ ಟೀಕೆ ವ್ಯಕ್ತಪಡಿಸಿದ ಬೆನ್ನಲ್ಲೇ ತರೂರ್ ಈ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ವೇಳೆ 'ಸುಳ್ಳುಗಳನ್ನು ಪ್ರಚಾರ ಮಾಡಿ, ಕೂಗಾಡಿ' ದಣಿದ ರಾಹುಲ್, ಈಗ ರಜೆಯ ಮೇಲೆ ತೆರಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ರಾಹುಲ್ ವಿದೇಶಕ್ಕೆ ತೆರಳಿದ್ದೇಕೆ ಎಂದು ವರದಿಗಾರರು ಪ್ರಶ್ನಿಸಿದಾಗ, ಕಾಂಗ್ರೆಸ್ ಸಂಸದರೂ ಆಗಿರುವ ಶಶಿ ತರೂರ್ ಅವರು ಕೇರಳದ ರಾಜಧಾನಿಯಲ್ಲಿದ್ದರು.

'ನಾನು ಟ್ರಾವೆಲ್ ಏಜೆಂಟ್ ಅಲ್ಲ. ಆ ಪ್ರಶ್ನೆಯನ್ನು ನನಗೆ ಕೇಳುವುದರಲ್ಲಿ ಅರ್ಥವಿಲ್ಲ. ನಾನು ದೆಹಲಿಯನ್ನು ಬಿಟ್ಟು ಈಗ ಇಲ್ಲಿಗೆ ಏಕೆ ಬಂದೆ? ಪ್ರತಿಯೊಬ್ಬ ವ್ಯಕ್ತಿಗೂ ಕೆಲವು ಜವಾಬ್ದಾರಿಗಳಿರುತ್ತವೆ. ಹಾಗಾಗಿ, ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ' ಎಂದು ತರೂರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ: ತಾಯಿ ಚಾಮುಂಡೇಶ್ವರಿಗೆ CM ಡಿಕೆ ಶಿವಕುಮಾರ್ ಪುಷ್ಪಾರ್ಚನೆ

ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಆನೆ: ರೊಚ್ಚಿಗೆದ್ದ ಸೋಮಣ್ಣನ ಆಕ್ರೋಶಕ್ಕೆ ದಿಕ್ಕಾಪಾಲಾಗಿ ಓಡಿದ ಜನ, Video

'ನೀವು Gen Z ಗಳೇ ಅಲ್ಲ.. ಬೇರೆ ದೇಶಗಳಲ್ಲಿ ಬೆಂಕಿ ಹಚ್ಚೋದನ್ನು ನೋಡುತ್ತಿದ್ದೇವೆ': CJP ನಾಯಕರಿಗೆ ಹೈಕೋರ್ಟ್ ತಪರಾಕಿ!

ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ; ಜ್ಞಾನೇಶ್ ಕುಮಾರ್ ವಜಾಗೊಳಿಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

76 ವರ್ಷಗಳ ದಾಖಲೆ ಮುರಿದ Temba Bavuma; ಮೊಹಮ್ಮದ್ ಅಜರುದ್ದೀನ್ ವರ್ಲ್ಡ್ ರೆಕಾರ್ಡ್ ಕೂಡ ಪತನ!