ಟೈಗರ್‌ ಶ್ರಾಫ್‌ 
ದೇಶ

ಗುಂಡಿನ ದಾಳಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಟೈಗರ್‌ ಶ್ರಾಫ್‌ ಅಲ್ಲ ಶೂಟರ್ ಗಳ ಟಾರ್ಗೆಟ್; ಮತ್ತೊಬ್ಬ ಸೆಲೆಬ್ರಿಟಿ ಹತ್ಯೆಗೆ ಸ್ಕೆಚ್!

ಆರಂಭದಲ್ಲಿ ದುಷ್ಕರ್ಮಿಗಳ ಟಾರ್ಗೆಟ್‌ ಟೈಗರ್‌ ಶ್ರಾಫ್‌ ಆಗಿರಲೇ ಇಲ್ಲ. ಬೇರೆ ಪ್ರಭಾವಿಯೊಬ್ಬರ ಹತ್ಯೆಗೆ ಅವರು ಆಗಮಿಸಿದ್ದರು ಎನ್ನಲಾಗಿದೆ. ಆದರೆ ಬಿಗಿಯಾದ ಭದ್ರತೆಯ ಕಾರಣದಿಂದಾಗಿ ಆ ಸೆಲೆಬ್ರಿಟಿಯನ್ನು ಸಮೀಪಿಸಲು ಸಾಧ್ಯವಾಗಲಿಲ್ಲ.

ಮುಂಬಯಿ: ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌ ಸಿಕ್ಕಿದ್ದು, ಶೂಟರ್‌ಗಳ ಗುರಿ ಬೇರೊಬ್ಬ ಪ್ರಭಾವಿಯಾಗಿದ್ದರು ಎಂದು ಕ್ರೈಂ ಬ್ರಾಂಚ್ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ಮತ್ತೊಬ್ಬ ಪ್ರಮುಖ ಸೆಲೆಬ್ರಿಟಿಯನ್ನು ಗುರಿಯಾಗಿಸಲು ಯೋಜಿಸಿದ್ದರು ಎಂದು 'ಎಎನ್‌ಐ' (ANI) ವರದಿ ಮಾಡಿದೆ.

ಮಹಾರಾಷ್ಟ್ರದ ಮುಂಬೈಯ ಜುಹು ಪ್ರದೇಶದಲ್ಲಿ ಅಕ್ಟೋಬರ್‌ 18ರಂದು ಟೈಗರ್‌ ಶ್ರಾಫ್‌ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಪ್ರಾಣಾಪಾಯದಿಂದ ಟೈಗರ್‌ ಶ್ರಾಫ್‌ ಸ್ವಲ್ಪದರಲ್ಲೇ ಪಾರಾಗಿದ್ದು, ಅವರ ಚಾಲಕ ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಾರಿಯಾಗಿದ್ದ ಮೂವರು ಶೂಟರ್ಸ್‌ ರಾಜಸ್ಥಾನದ ಕೋಟಾದಲ್ಲಿ ಸೆರೆ ಸಿಕ್ಕಿದ್ದು, ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಪ್ರಕರಣದ ಬಗ್ಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಆರಂಭದಲ್ಲಿ ದುಷ್ಕರ್ಮಿಗಳ ಟಾರ್ಗೆಟ್‌ ಟೈಗರ್‌ ಶ್ರಾಫ್‌ ಆಗಿರಲೇ ಇಲ್ಲ. ಬೇರೆ ಪ್ರಭಾವಿಯೊಬ್ಬರ ಹತ್ಯೆಗೆ ಅವರು ಆಗಮಿಸಿದ್ದರು ಎನ್ನಲಾಗಿದೆ. ಆದರೆ ಬಿಗಿಯಾದ ಭದ್ರತೆಯ ಕಾರಣದಿಂದಾಗಿ ಆ ಸೆಲೆಬ್ರಿಟಿಯನ್ನು ಸಮೀಪಿಸಲು ಸಾಧ್ಯವಾಗದಿದ್ದಾಗ, ಆರೋಪಿಗಳು ಟೈಗರ್ ಶ್ರಾಫ್ ಅವರನ್ನು ಸುಲಭ ಗುರಿಯೆಂದು ಭಾವಿಸಿ, ಅವರತ್ತ ಗಮನ ಹರಿಸಿದರು.

ಸೆರೆಸಿಕ್ಕ ದಾಳಿಕೋರರಾದ ರೆಹಾನ್‌ ಆಲಿಯಾಸ್‌ ಸುಕ್ಕಾ, ಹೃತಿಕ್‌ ಕುರ್ಮಿ ಆಲಿಯಾಸ್‌ ರೋಷನ್‌ ಮತ್ತು ಅಪ್ರಾಪ್ತ ವಯಸ್ಕ ವಿಚಾರಣೆ ವೇಳೆ ಈ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ತಮ್ಮ ಟಾರ್ಗೆಟ್‌ ಟೈಗರ್‌ ಶ್ರಾಫ್‌ ಆಗಿರಲಿಲ್ಲ. ತಾವು ವಿಐಪಿ ಒಬ್ಬರ ಹತ್ಯೆಗೆ ಬಂದಿದ್ದಾಗಿ ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿದೆ.

ಪ್ರಭಾವಿ ವ್ಯಕ್ತಿಯ ಚಲನವಲನ ನಿರೀಕ್ಷಿಸಿದ ಶೂಟರ್‌ಗಳಿಗೆ ಅವರನ್ನು ಹತ್ಯೆ ಮಾಡಲು ಸಾಧ್ಯವಿಲ್ಲ ಎನ್ನುವ ವಾಸ್ತವ ಅರಿವಿಗೆ ಬಂತು. ಹೀಗಾಗಿ ಅವರು ಟೈಗರ್‌ ಶ್ರಾಫ್‌ ಮೇಲೆ ದಾಳಿ ನಡೆಸಲು ಮುಂದಾದರು. ಅಭಿಮಾನಿಯೊಬ್ಬರು ಹಂಚಿಕೊಂಡ ರೀಲ್ಸ್‌ನಲ್ಲಿ ಟೈಗರ್‌ ಶ್ರಾಫ್‌ ಅವರಿಗೆ ಬೆಂಗಾವಲು ಪಡೆ ಇಲ್ಲ ಎನ್ನುವುದನ್ನು ಅವರು ಅವರಿತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಟೈಗರ್‌ ಶ್ರಾಫ್‌ ಮೇಲೆ ದಾಳಿ ನಡೆಸಲು ನಿರ್ಧರಿಸಿದ ಬಳಿಕ ಶೂಟರ್ಸ್‌ ನಿರಂತರವಾಗಿ ಅವರ ಮೇಲೆ ನಿಗಾ ಇರಿಸಿದರು. ಟೈಗರ್‌ ಶ್ರಾಫ್‌ ಮತ್ತು ಅಭಿಮಾನಿಗಳ ಇನ್‌ಸ್ಟಾಗ್ರಾಂ ಪೇಜ್‌ ಗಮನಿಸುತ್ತಿದ್ದರು. ಟೈಗರ್‌ ಶ್ರಾಫ್‌ ಅವರನ್ನು ಹತ್ಯೆಗೈದು ಬಾಲಿವುಡ್‌ ಅನ್ನು ಬೆದರಿಸುವ ಉದ್ದೇಶ ಅವರಿಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.‌ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ವರದಿಗಳ ಪ್ರಕಾರ, ಆರೋಪಿಗಳನ್ನು ರಾತ್ರೋರಾತ್ರಿ ಮುಂಬೈಗೆ ಕರೆದೊಯ್ಯುವ ಮೂಲ ಯೋಜನೆಯನ್ನು ಬದಲಾಯಿಸಿದ ಮುಂಬೈ ಪೊಲೀಸರು, ಅವರನ್ನು ಕೋಟಾದಲ್ಲೇ ಇರಿಸಲು ನಿರ್ಧರಿಸಿದರು. ರೈಲ್ವೆ ಕಾಲೋನಿ ಪೊಲೀಸ್ ಠಾಣೆಯ ಎಸ್‌ಎಚ್‌ಒ (SHO) ರಾಮ್‌ಸ್ವರೂಪ್ ಮೀನಾ ಅವರು, ಮೂವರು ಆರೋಪಿಗಳಿಗೆ 48 ಗಂಟೆಗಳ ಟ್ರಾನ್ಸಿಟ್ ರಿಮಾಂಡ್ ನೀಡಲಾಗಿದ್ದು, ಮಹಾರಾಷ್ಟ್ರ ಪೊಲೀಸರು ಅವರನ್ನು ಮುಂಬೈಗೆ ಕರೆದೊಯ್ಯುತ್ತಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲರೂ ಒಟ್ಟಾಗಿ ಸೇರಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು: ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಸಚಿವರಿಗೆ ಸೂಚನೆ; ಸಿಎಂ

ಅಲ್ಬೇನಿಯಾದಲ್ಲಿ ಭ್ರಷ್ಟ ಪ್ರಧಾನಿ ಎಡಿ ರಾಮಗೆ ಸುಪ್ರೀಂ ಕೋರ್ಟ್ ಸಹಾಯ; ಜನಾಕ್ರೋಶದಿಂದ ಬೆಂಕಿ; ಭಾರತಕ್ಕೂ ಇದೊಂದು ಪಾಠ: ಸಂಜಯ್ ರಾವತ್

ಭಾರತ 'ಶಕ್ತಿಯುತ, ಪ್ರಭಾವಶಾಲಿ' ರಾಷ್ಟ್ರ; 21ನೇ ಶತಮಾನ ರೂಪಿಸಲು ಭಾರತ-ಅಮೆರಿಕ ಬಾಂಧವ್ಯ ನೆರವು: US ಸಚಿವ ರೂಬಿಯೊ

"ಅವರನ್ನು ಸೋಲಿಸಲೇಬೇಕು": ಭಾರತದ "ಶತ್ರುಗಳ" ವಿರುದ್ಧ ಹೋರಾಡಲು ಪ್ರಧಾನಿ ಮೋದಿ ದಸರಾ ಕರೆ

ನ್ಯಾಯಾಂಗ ಬಂಧನದ ವಿರುದ್ಧ ಸಿಜೆಪಿಯ ಸೌರವ್, ಅಶುತೋಷ್ ಹೈಕೋರ್ಟ್‌ ಗೆ ಮೊರೆ