ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಂದಿಗೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ Online Desk
ದೇಶ

ಚುನಾವಣಾ ಆಯೋಗದೊಳಗೆ ತೀವ್ರ ಮುಸುಕಿನ ಗುದ್ದಾಟ: ಹಿರಿಯ ಅಧಿಕಾರಿಯ ವಿರುದ್ಧ ಇಬ್ಬರು ಚುನಾವಣಾ ಆಯುಕ್ತರ ದೂರು; ಕೇಂದ್ರ ಹೇಳಿದ್ದೇನು?

ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಭಾರತೀಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಚುನಾವಣಾ ಆಯುಕ್ತರು ನೀಡಿದ್ದ ದೂರುಗಳ ಮೇಲೆ ಸಚಿವ ಸಂಪುಟ ಸಚಿವಾಲಯವು ಯಾವುದೇ ಕ್ರಮ ಕೈಗೊಂಡಿಲ್ಲ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಮತ ಕಳ್ಳತನದ ಆರೋಪಗಳ ವಿರುದ್ಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ವಜಾಗೆ ಆಗ್ರಹಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆಗಳ ನಡುವೆಯೇ, ಚುನಾವಣಾ ಆಯೋಗಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿವಾದ ಭುಗಿಲೇದಿದ್ದು, ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಮನೀಶ್ ಗರ್ಗ್ ವಿರುದ್ಧ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು  ಕೇಂದ್ರ ಸಚಿವ ಸಂಪುಟ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಈ ಬೆನ್ನಲ್ಲೇ, ಆರ್‌ಟಿಐ ಮೂಲಕ, ಚುನಾವಣಾ ಆಯುಕ್ತರು ನೀಡಿದ್ದ ದೂರುಗಳ ಮೇಲೆ ಸಚಿವ ಸಂಪುಟ ಸಚಿವಾಲಯವು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಪತ್ತೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ಚುನಾವಣೆ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಹಿರಿಯ ಉಪ ಚುನಾವಣಾ ಆಯುಕ್ತ ಮನೀಶ್ ಗರ್ಗ್ (IAS) ಅವರ ಕಾರ್ಯವೈಖರಿ ಮತ್ತು ನಿಯಮ ಉಲ್ಲಂಘನೆಗಳ ವಿರುದ್ಧ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ದೂರು ನೀಡಿದ್ದರು. ಈ ಕುರಿತು ಮಾಹಿತಿ ಹಕ್ಕು ಕಾರ್ಯಕರ್ತರಾದ ನಿವೃತ್ತ ಕಮೋಡೋರ್ ಲೋಕೇಶ್ ಬಾಟ್ರಾ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸಚಿವ ಸಂಪುಟ ಸಚಿವಾಲಯವು, "ಇಬ್ಬರು ಆಯುಕ್ತರು ನೀಡಿದ ದೂರುಗಳು ಅವರ ವೈಯಕ್ತಿಕ ಸಾಮರ್ಥ್ಯದಲ್ಲಿ ಬಂದಿವೆಯೇ ಹೊರತು, ಇಡೀ ಚುನಾವಣಾ ಆಯೋಗದಿಂದ ಬಂದ ಅಧಿಕೃತ ಸಂವಹನವಾಗಿಲ್ಲ. ಹಾಗಾಗಿ, ಅದರ ಪ್ರತಿಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಗಮನಕ್ಕೆ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಮುಂದಿನ ದಾಖಲೆಗಾಗಿ ರವಾನಿಸಿರುವುದಾಗಿ ತಿಳಿಸಿದೆ. ಈ ಮೂಲಕ ಚುನಾವಣಾ ಆಯೋಗವು ಒಂದು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದೆ. ಆಯೋಗದಿಂದ ಒಟ್ಟಾರೆ ನಿರ್ಧಾರ ಅಥವಾ ಅಧಿಕೃತ ಪತ್ರ ಬಾರದ ಹೊರತು, ಕಾರ್ಯಾಂಗವು ಈ ಹಂತದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಮತ್ತು ಇದು ಹಸ್ತಕ್ಷೇಪ ಎಂದು ಪರಿಗಣಿತವಾಗಬಹುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಹಾಗಾದ್ರೆ, ದೂರಿನಲ್ಲೇನಿತ್ತು?

ಜುಲೈ 2026 ರಲ್ಲಿ ಮನೀಶ್ ಗರ್ಗ್ ಅವರು ಆಯೋಗದ ಅಥವಾ ಇತರ ಆಯುಕ್ತರ ಪೂರ್ವಾನುಮತಿ ಇಲ್ಲದೆ, ಹಿರಿಯ ಅಧಿಕಾರಿಗಳ ನಡುವಿನ ಕೆಲಸದ ಹಂಚಿಕೆಯನ್ನು ಏಕಪಕ್ಷೀಯವಾಗಿ ಬದಲಾಯಿಸಿದ್ದರು. ಇದರಿಂದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಕೈಬಿಡುವಿಕೆ ಹಾಗೂ ಐಟಿ ವಿಭಾಗದ ಮೇಲಿನ ಉಸ್ತುವಾರಿಯ ಅಧಿಕಾರ ಕೇಂದ್ರಿಕೃತಗೊಳ್ಳುವ ಸಾಧ್ಯತೆ ಇತ್ತು. ಇದು ಚುನಾವಣಾ ಆಯುಕ್ತರ ಕಾಯ್ದೆ, 2023ರನಿಯಮಾವಳಿಗಳ ಉಲ್ಲಂಘನೆ ಎಂದು ಸಂಧು ಮತ್ತು ಜೋಶಿ ಆಕ್ಷೇಪಿಸಿದ್ದರು. ಆದಾಗ್ಯೂ, ಈ ವಿವಾದಾತ್ಮಕ ಆದೇಶಗಳನ್ನು ಜಾರಿಗೊಳಿಸಲಾಗಿಲ್ಲ ಮತ್ತು ಆಯುಕ್ತರ ಸೂಚನೆಯ ಮೇರೆಗೆ ಇವುಗಳನ್ನು ಹಿಂಪಡೆಯಲಾಗಿದೆ ಎಂದು ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದಲ್ಲಿ 43.82 ಲಕ್ಷ SIR ನೋಟಿಸ್‌ ವಿಚಾರಣೆ ಪೂರ್ಣ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ

ಪುತ್ತೂರು ಟಿಕೆಟ್ ಪಡೆಯಲು ಬ್ಲ್ಯಾಕ್‌ಮೇಲ್‌ ಯತ್ನ; ಸಿದ್ದರಾಮಯ್ಯ ಸ್ಟಿಂಗ್ ನಲ್ಲಿ ಕಾಂಗ್ರೆಸ್ ನವರ ಕೈವಾಡ: ಯತೀಂದ್ರ ಹೊಸ ಬಾಂಬ್; Video

ಪಂಜಾಬ್‌ನಲ್ಲಿ ಮಾದಕವಸ್ತು ಸೇವಿಸುತ್ತಿರುವ ಬಾಲಕನ ವಿಡಿಯೋ ವೈರಲ್: ತೀವ್ರ ಆತಂಕ

ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ BCCI ಆಸ್ತಿ ಎಷ್ಟು ಕೋಟಿ? ಆಸ್ಟ್ರೇಲಿಯಾ, ಪಾಕ್ ಬೋರ್ಡ್ ಗಳ ಸಂಪತ್ತಿಗಿಂತ 11 ಪಟ್ಟು ಹೆಚ್ಚಳ!

ದೆಹಲಿ: SIR ವಿರುದ್ಧ ಇಸಿಐ ಪ್ರಧಾನ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ, ಹಲವಾರು ಪ್ರತಿಭಟನಾಕಾರರ ಬಂಧನ! Video