ಹಿಮಾಂಶು ಭಾವು 
ದೇಶ

ಹರಿಯಾಣದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ Himanshu Bhau ಅಮೆರಿಕಾದಲ್ಲಿ ಬಂಧನ..!

ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಪ್ರತಿಸ್ಪರ್ಧಿ ಎಂದು ಹೇಳಲಾಗುವ ಹಿಮಾಂಶು ಭಾವುವನ್ನು ಲಾಸ್ ವೇಗಾಸ್‌ನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ನವದೆಹಲಿ: ಭಾರತೀಯ ತನಿಖಾ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಹರಿಯಾಣದ ಕುಖ್ಯಾತ, ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಹಿಮಾಂಶು ಭಾವು ಅಮೆರಿಕಾದಲ್ಲಿ ಸಿಕ್ಕಿಬಿದ್ದಿದ್ದಾನೆ.

ಅಮೆರಿಕಾದ ಲಾಸ್ ವೇಗಾಸ್‌ನಲ್ಲಿ ಅಲ್ಲಿನ ಭದ್ರತಾ ಸಂಸ್ಥೆಗಳು ಹಿಮಾಂಶು ಹಾಗೂ ಆತನ ಆಪ್ತ ನೀರಜ್ ಫರೀದ್‌ಪುರಿಯಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.

ಕೆಲವು ವರ್ಷಗಳ ಹಿಂದೆ ಭಾರತದಿಂದ ಪರಾರಿಯಾಗಿದ್ದ ಹಿಮಾಂಶು ಭಾವು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಮೆರಿಕಾ ಪ್ರವೇಶಿಸಿದ್ದ. "ಹಿಮಾಂಶು ಸಿಗ್ರೋಹಾ" ಎಂಬ ನಕಲಿ ಹೆಸರಿನ ಪಾಸ್‌ಪೋರ್ಟ್ ಬಳಸಿ ಅಮೆರಿಕಾದಲ್ಲಿ ತಲೆಮರೆಸಿಕೊಂಡಿದ್ದ. ಈತನ ಸಹಚರ ನೀರಜ್ ಕೂಡ "ನೀರಜ್ ಕೌಶಿಕ್" ಎಂಬ ನಕಲಿ ಗುರುತಿನೊಂದಿಗೆ ವಾಸಿಸುತ್ತಿದ್ದ.

ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಪ್ರತಿಸ್ಪರ್ಧಿ ಎಂದು ಹೇಳಲಾಗುವ ಹಿಮಾಂಶು ಭಾವುವನ್ನು ಲಾಸ್ ವೇಗಾಸ್‌ನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ), ಭಾರತದ ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಹರಿಯಾಣ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಭಾಗವಹಿಸಿದ್ದವು ಎಂದು ವರದಿಯಾಗಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಹಿಮಾಂಶು ಭಾವು ಮತ್ತು ನೀರಜ್ ಕೌಶಿಕ್ ಇಬ್ಬರನ್ನೂ ನೆವಾಡಾ ರಾಜ್ಯದ ಹೆಂಡರ್ಸನ್‌ನಲ್ಲಿರುವ ಹೆಂಡರ್ಸನ್ ಬಂಧನ ಕೇಂದ್ರದಲ್ಲಿ ವಲಸೆ ಅಧಿಕಾರಿಗಳ ವಶದಲ್ಲಿ ಇರಿಸಲಾಗಿದೆ. ಇಬ್ಬರನ್ನೂ ಭಾರತಕ್ಕೆ ವಾಪಸ್ ಕರೆತರಲು ಭಾರತೀಯ ತನಿಖಾ ಸಂಸ್ಥೆಗಳು ಅಮೆರಿಕದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ ಎನ್ನಲಾಗಿದೆ.

ಇವರನ್ನು ಭಾರತಕ್ಕೆ ಕರೆತರಲು ಗಡಿಪಾರು ಪ್ರಕ್ರಿಯೆ ಸೇರಿದಂತೆ ಔಪಚಾರಿಕ ಹಸ್ತಾಂತರದ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಯಾವ ಪ್ರಕ್ರಿಯೆ ಅನುಸರಿಸಬೇಕು ಎಂಬುದು ಬಂಧನಕ್ಕೆ ಸಂಬಂಧಿಸಿದ ಕಾನೂನು ಆಧಾರ, ಅಮೆರಿಕದ ವಲಸೆ ಪ್ರಕ್ರಿಯೆಗಳು ಹಾಗೂ ಭಾರತ ಮತ್ತು ಅಮೆರಿಕದ ಕಾನೂನುಗಳ ಅಗತ್ಯತೆಗಳನ್ನು ಅವಲಂಬಿಸಿರುತ್ತದೆ.

ಹರಿಯಾಣ ಮೂಲದ ಹಿಮಾಂಶು ಭಾವು ಹಿಂಸಾತ್ಮಕ ಅಪರಾಧಗಳು ಮತ್ತು ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದ ಅಪರಾಧ ಜಾಲವನ್ನು ನಿರ್ವಹಿಸುತ್ತಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದಾನೆ. ಭಾರತದಲ್ಲಿ ಆತನ ವಿರುದ್ಧ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಸುಲಿಗೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಿವೆ ಎಂದು ಹೇಳಲಾಗಿದೆ.

ಆತನ ಅಪರಾಧ ಜಾಲವು ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ವಿವಿಧ ಘಟನೆಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ವರದಿಯಾಗಿದೆ. ವ್ಯಾಪಾರಿಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳು ಈ ಜಾಲದ ಗುರಿಯಾಗಿದ್ದರು ಎಂಬ ಆರೋಪಗಳೂ ಇವೆ.

ಪಶ್ಚಿಮ ದೆಹಲಿಯ ಬರ್ಗರ್ ಕಿಂಗ್ ಮಳಿಗೆಯೊಳಗೆ ನಡೆದ ಗುಂಡಿನ ದಾಳಿ ಮತ್ತು ಹತ್ಯೆ, ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಹಾಗೂ ನಾರಾಯಣ ಮತ್ತು ತಿಲಕ್ ನಗರದಲ್ಲಿನ ಕಾರು ಮಾರಾಟ ಮಳಿಗೆಗಳ ಮೇಲೆ ನಡೆದ ಗುಂಡಿನ ದಾಳಿಗಳಿಗೂ ಈ ಗ್ಯಾಂಗ್‌ನ ಹೆಸರು ಮಾಧ್ಯಮ ವರದಿಗಳಲ್ಲಿ ತಳುಕು ಹಾಕಿಕೊಂಡಿದೆ.

ಆದರೆ, ಹಿಮಾಂಶು ಭಾವು ಮತ್ತು ಆತನ ಸಹಚರರನ್ನು ಭಾರತಕ್ಕೆ ಯಾವಾಗ ಕರೆತರಲಾಗುತ್ತದೆ ಎಂಬ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಅವರ ವಿರುದ್ಧದ ಆರೋಪಗಳ ಕುರಿತ ಕಾನೂನು ಪ್ರಕ್ರಿಯೆ ಮುಂದುವರಿಯಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮತ್ತೆ ಚೀನಾ ಕ್ಯಾತೆ, ಗಲ್ವಾನ್ ರೀತಿಯ ಸಂಘರ್ಷ; ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಮತ್ತೆ ಮುಖಾಮುಖಿ?

ಅಂತ್ಯಕ್ರಿಯೆ ವೇಳೆ ಚರ್ಚ್‌ಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ: 7 ಮಂದಿ ಸಾವು, 34 ಜನರಿಗೆ ಗಾಯ; Video

ಮೈಸೂರಿನಲ್ಲಿ ದುರಂತ: ನೀರಿನ ಪಂಪ್‌ ಸ್ವಚ್ಛಗೊಳಿಸುವಾಗ ವಿದ್ಯುತ್‌ ಶಾಕ್‌, ರಾಜಸ್ಥಾನ ಮೂಲದ ಯುವಕ ಸಾವು,Video

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್‌ ಅಲರ್ಟ್‌: ಅ.31ರೊಳಗೆ ಪರಿಶೀಲನೆ ಪೂರ್ಣಗೊಳಿಸಿ, ಗಡುವು ವಿಸ್ತರಣೆ ಇಲ್ಲ!