ದಿಗ್ವಿಜಯ್ ಸಿಂಗ್ 
ದೇಶ

'ನಾನು ಸನಾತನ ಧರ್ಮವನ್ನು ಬೆಂಬಲಿಸುತ್ತೇನೆ, ಆದರೆ ಹಿಂದುತ್ವನಲ್ಲ' - ದಿಗ್ವಿಜಯ್ ಸಿಂಗ್

ಕುರಾನ್ ಬಗ್ಗೆಯೂ ಪ್ರಸ್ತಾಪಿಸಿದ ಸಿಂಗ್, ನಾನು ಅದನ್ನು ಓದಿರುವುದಾಗಿ ಹೇಳಿದರು. 'ಕಾಫಿರ್' ಎಂಬ ಪದವು ಯಾವುದೇ ಧರ್ಮವನ್ನು ಅನುಸರಿಸದ ಮತ್ತು 'ಅಧರ್ಮ'ವನ್ನು ಆಚರಿಸುವ ವ್ಯಕ್ತಿಯನ್ನು ಸೂಚಿಸುತ್ತದೆ ಎಂದರು.

ಶಾಜಾಪುರ: ನಾನು ಸನಾತನ ಧರ್ಮವನ್ನು ಬೆಂಬಲಿಸುತ್ತೇನೆ, ಆದರೆ ಹಿಂದುತ್ವವನ್ನಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಭಾನುವಾರ ಹೇಳಿದ್ದಾರೆ. ಹಿಂದುತ್ವ ಎಂಬ ಪದವನ್ನು ವಿನಾಯಕ ದಾಮೋದರ ಸಾವರ್ಕರ್ ಸೃಷ್ಟಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ನನ್ನ ತಾಯಿ ನನ್ನಗೆ ಸನಾತನ ಧರ್ಮದ ಬಗ್ಗೆ ಕಲಿಸಿದ್ದಾರೆ. ಸನಾತನ ಧರ್ಮವು ಪ್ರೀತಿ, ವಾತ್ಸಲ್ಯ ಮತ್ತು ಕರುಣೆಯನ್ನು ಒಳಗೊಂಡಿದೆ ಎಂದು ಹೇಳಿದರು. ನಾನು ಸನಾತನ ಧರ್ಮವನ್ನು ಬೆಂಬಲಿಸುತ್ತೇನೆ, ಆದರೆ ಹಿಂದುತ್ವವನ್ನಲ್ಲ. ಈ ಪದವನ್ನು ಸಾವರ್ಕರ್ ಸೃಷ್ಟಿಸಿದ್ದಾರೆ. ಹಿಂದುತ್ವಕ್ಕೂ ಸಮಾನತೆಗೂ ಯಾವುದೇ ಸಂಬಂಧವಿಲ್ಲ," ಎಂದು ಸಿಂಗ್ ಸ್ಪಷ್ಟಪಡಿಸಿದರು.

ಕುರಾನ್ ಬಗ್ಗೆಯೂ ಪ್ರಸ್ತಾಪಿಸಿದ ಸಿಂಗ್, ನಾನು ಅದನ್ನು ಓದಿರುವುದಾಗಿ ಹೇಳಿದರು. 'ಕಾಫಿರ್' ಎಂಬ ಪದವು ಯಾವುದೇ ಧರ್ಮವನ್ನು ಅನುಸರಿಸದ ಮತ್ತು 'ಅಧರ್ಮ'ವನ್ನು ಆಚರಿಸುವ ವ್ಯಕ್ತಿಯನ್ನು ಸೂಚಿಸುತ್ತದೆ ಎಂದರು.

ಇದು ರಾಜಕೀಯ ಕಾರ್ಯಕ್ರಮವಾಗಿದ್ದರೆ, ಕೇವಲ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಭಾಗವಹಿಸುತ್ತಿದ್ದರು. ಎಲ್ಲಾ ಧರ್ಮಗಳ ಜನರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ನಾನು ಬಯಸುತ್ತೇನೆ," ಎಂದು ಸಿಂಗ್ ತಿಳಿಸಿದರು.

'ಸತ್ಯ ಸನಾತನ ಸ್ವಾಭಿಮಾನ ಯಾತ್ರೆ'ಯಲ್ಲಿ ಸಿಂಗ್ ಶಾಜಾಪುರದಲ್ಲಿದ್ದಾಗ ಈ ಹೇಳಿಕೆಗಳನ್ನು ನೀಡಿದ್ದಾರೆ. ಈ ಯಾತ್ರೆಯು ಈ ವಾರ ಉಜ್ಜಯಿನಿಯಲ್ಲಿ ಪ್ರಾರಂಭವಾಗಿದ್ದು, ಅಯೋಧ್ಯೆಯಲ್ಲಿ ಮುಕ್ತಾಯಗೊಳ್ಳಲಿದೆ. ಇಲ್ಲಿಂದ ಈ ಯಾತ್ರೆಯು ರಾಜಗಢ ಜಿಲ್ಲೆಯತ್ತ ಸಾಗಲಿದೆ.'ಸತ್ಯ ಸನಾತನ ಸ್ವಾಭಿಮಾನ ಯಾತ್ರೆ'ಯು ರಾಜಕೀಯೇತರ ಕಾರ್ಯಕ್ರಮವಾಗಿದೆ ಎಂದು ಸಿಂಗ್ ಹೇಳಿದರು.

ಇದು ರಾಜಕೀಯ ಕಾರ್ಯಕ್ರಮವಾಗಿದ್ದರೆ, ಕೇವಲ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಭಾಗವಹಿಸುತ್ತಿದ್ದರು. ಎಲ್ಲಾ ಧರ್ಮಗಳ ಜನರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ನಾನು ಬಯಸುತ್ತೇನೆ," ಎಂದು ಸಿಂಗ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ': ಪಾಟ್ನಾ ಕಾರ್ಯಕ್ರಮದಲ್ಲಿ ಖರ್ಗೆ ವಿವಾದಾತ್ಮಕ ಹೇಳಿಕೆ; ಭುಗಿಲೆದ್ದ ಆಕ್ರೋಶ, Video

ಖರ್ಗೆ ಭಾಷಣದ ವೇಳೆ 'ಮೋದಿ ಎಲ್ಲೂ ಹೋಗಲ್ಲ ಎಂದ ವ್ಯಕ್ತಿ: ಕಾಂಗ್ರೆಸ್ ಕಾರ್ಯಕರ್ತರಿಂದ ಹಿಗ್ಗಾಮುಗ್ಗ ಥಳಿತ, Video

ಕೊಚ್ಚಿ: ನ್ಯಾಯಾಧೀಶರ ಅಪ್ರಾಪ್ತ ಮಗ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ: 55 ವರ್ಷದ ವ್ಯಕ್ತಿ ಸಾವು!

ಸ್ಟಿಂಗ್‌ ಆಪರೇಷನ್: ಒತ್ತಡಕ್ಕೆ ಮಣಿದು ನಾನು ಸುಳ್ಳು ಹೇಳಿದ್ದೆ, ಸಿದ್ದರಾಮಯ್ಯರನ್ನ ಭೇಟಿಯೇ ಆಗಿಲ್ಲ- ಮುಸುಕುಧಾರಿ ಮಹಿಳೆ!

ಸುಖೋಯ್, ತೇಜಸ್, ಕಿರಣ್: ವಾರಣಾಸಿಯಲ್ಲಿ ಅದ್ಭುತ ವಾಯು ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ! Video