ರಾಹುಲ್ ಗಾಂಧಿ 
ದೇಶ

ನಿಮ್ಮ ವ್ಯಾಪಾರ ನಡಿಬೇಕಾದ್ರೆ ಮೋದಿಗೆ ಹೇಳಿ ಜ್ಞಾನೇಶ್‌ನನ್ನು ವಜಾಗೊಳಿಸಲು: 30 ಸೆಕೆಂಡಿನಲ್ಲಿ ಪ್ರತಿಭಟನೆ ನಿಲ್ಲುತ್ತೆ; ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ರಾಜಧಾನಿ ದೆಹಲಿಯ ವ್ಯಾಪಾರಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ್ದು ಕೇಂದ್ರ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದರು.

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ರಾಜಧಾನಿ ದೆಹಲಿಯ ವ್ಯಾಪಾರಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ್ದು ಕೇಂದ್ರ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದರು. ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸುವ, ರಸ್ತೆಗಳನ್ನು ಮುಚ್ಚುವ ಮತ್ತು ಇಡೀ ರಾಜಧಾನಿಯ ಮೇಲೆ ದಿಗ್ಬಂಧನ ಹೇರುವ ಮೂಲಕ ಸರ್ಕಾರ ವ್ಯಾಪಾರ ಮತ್ತು ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಮತ ಕಳ್ಳತನದ ಆರೋಪ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ತಕ್ಷಣವೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಹೇಳಿ ನಂತರ 30 ಸೆಕೆಂಡುಗಳಲ್ಲಿ ಪ್ರತಿಭಟನೆಗಳನ್ನು ಹಿಂಪಡೆಯುತ್ತೇವೆ ಎಂದು ರಾಹುಲ್ ಗಾಂಧಿ ವ್ಯಾಪಾರಿಗಳಿಗೆ ಒತ್ತಾಯಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ದೆಹಲಿ ವ್ಯಾಪಾರಿಗಳನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಅವರ ನೋವು ಮತ್ತು ಕಳವಳಗಳನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಸರ್ಕಾರ ಮೆಟ್ರೋವನ್ನು ಸ್ಥಗಿತಗೊಳಿಸಿದೆ, ರಸ್ತೆಗಳನ್ನು ಮುಚ್ಚಿದೆ ಮತ್ತು ರಾಜಧಾನಿಯನ್ನು ಸ್ಥಗಿತಗೊಳಿಸಿತ್ತು. ಮತಕಳ್ಳತನದಿಂದ ಯಾವುದೂ ಸುರಕ್ಷಿತವಲ್ಲ. ನಿಮ್ಮ ಅಂಗಡಿ, ನಿಮ್ಮ ಉಳಿತಾಯ, ನಿಮ್ಮ ಮಕ್ಕಳ ಭವಿಷ್ಯ. ಆರೋಪಿ 4ನೇ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಮೋದಿ ಅವರಿಗೆ ಹೇಳಿ, ಪ್ರತಿಭಟನೆಗಳು 30 ಸೆಕೆಂಡುಗಳಲ್ಲಿ ಕೊನೆಗೊಳ್ಳುತ್ತವೆ ಎಂದು ಟ್ವೀಟಿಸಿದ್ದಾರೆ.

ಇದಕ್ಕೂ ಮುನ್ನ ವ್ಯಾಪಾರಿಗಳು, ಪ್ರತಿಭಟನೆಗಳನ್ನು ನಿಲ್ಲಿಸುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ್ದರು. ಪ್ರತಿಭಟನೆಗಳು ಮತ್ತು ಬಂದ್‌ಗಳಿಂದಾಗಿ ವ್ಯವಹಾರದಲ್ಲಿನ ಅಡಚಣೆಗಳನ್ನು ಉಲ್ಲೇಖಿಸಿ, ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಉದ್ದೇಶಿತ ಇಂಡಿ ಕೂಟದ ರ್ಯಾಲಿಯನ್ನು ಮುಂದೂಡುವಂತೆ ವ್ಯಾಪಾರ ಮತ್ತು ಕೈಗಾರಿಕಾ ಮಂಡಳಿ ರಾಹುಲ್ ಗಾಂಧಿಯನ್ನು ವಿನಂತಿಸಿತು.

ಈ ಪ್ರತಿಭಟನೆಯು ದೀಪಾವಳಿ ಶಾಪಿಂಗ್ ಋತುವಿನಲ್ಲಿ ಸುಮಾರು 10,000 ಕೋಟಿ ಮೌಲ್ಯದ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು ಎಂದು ವ್ಯಾಪಾರಿಗಳ ಸಂಘ ಹೇಳಿದೆ. ಈ ವರ್ಷ ಧನ್ತೇರಸ್ ನವೆಂಬರ್ 6ರಂದು, ದೀಪಾವಳಿ ನವೆಂಬರ್ 8 ರಂದು ಮತ್ತು ಭಾಯಿ ದೂಜ್ ನವೆಂಬರ್ 10 ರಂದು ಎಂದು ವ್ಯಾಪಾರಿಗಳ ಸಂಘ ಪತ್ರದಲ್ಲಿ ಬರೆದಿದೆ. ಜನರು ಒಂದು ವಾರ ಮುಂಚಿತವಾಗಿ ಹಬ್ಬಗಳಿಗೆ ಶಾಪಿಂಗ್ ಪ್ರಾರಂಭಿಸುತ್ತಾರೆ. ದೆಹಲಿಯಲ್ಲಿ ಮಾತ್ರ, ಧಂತೇರಸ್ ಮತ್ತು ದೀಪಾವಳಿಯ ಸಮಯದಲ್ಲಿ, ಚಿನ್ನ, ಬೆಳ್ಳಿ, ಪಾತ್ರೆಗಳು, ಎಲೆಕ್ಟ್ರಾನಿಕ್ಸ್, ಬಟ್ಟೆ, ಒಣ ಹಣ್ಣುಗಳು, ಸಿಹಿತಿಂಡಿಗಳು, ಆಟೋಮೊಬೈಲ್‌ಗಳು ಮತ್ತು ಉಡುಗೊರೆ ವಸ್ತುಗಳು ಸುಮಾರು ₹25,000 ಕೋಟಿಗಳಷ್ಟು ವಹಿವಾಟು ನಡೆಸುತ್ತವೆ, ಇದು ದೆಹಲಿಯ ಆರ್ಥಿಕತೆಯ ಬೆನ್ನೆಲುಬಾಗಿದೆ.

ಈಗಾಗಲೇ ಕೋಟಿ ಮೌಲ್ಯದ ನಷ್ಟ

ಸಿಟಿಐ ಪ್ರಕಾರ, ಹಬ್ಬಗಳಿಗೆ ಸ್ವಲ್ಪ ಮೊದಲು ಮಾರುಕಟ್ಟೆಗಳು ಸಾಮಾನ್ಯವಾಗಿ ಗ್ರಾಹಕರಿಂದ ತುಂಬಿರುತ್ತವೆ. ಆದ್ದರಿಂದ ವ್ಯಾಪಾರಿಗಳು ರ್ಯಾಲಿಯ ಸಮಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಾರೆ. ನಡೆಯುತ್ತಿರುವ ಪ್ರತಿಭಟನೆಗಳು ಸಾರ್ವಜನಿಕ ಜೀವನ ಮತ್ತು ವ್ಯವಹಾರ ಎರಡರ ಮೇಲೂ ತೀವ್ರ ಪರಿಣಾಮ ಬೀರುತ್ತಿವೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಅಕ್ಟೋಬರ್ ತಿಂಗಳಲ್ಲಿ, ಕನ್ನಾಟ್ ಪ್ಲೇಸ್, ಇಂಡಿಯಾ ಗೇಟ್ ಮತ್ತು ಮಧ್ಯ ದೆಹಲಿಯಲ್ಲಿ ವಿವಿಧ ರ್ಯಾಲಿಗಳು, ಪ್ರತಿಭಟನಾ ಮೆರವಣಿಗೆಗಳು ಮತ್ತು ರಸ್ತೆ ಮುಚ್ಚುವಿಕೆಯಿಂದಾಗಿ ವ್ಯಾಪಾರಿಗಳು ಈಗಾಗಲೇ ಸುಮಾರು 3,000 ಕೋಟಿಗಳಷ್ಟು ಭಾರಿ ನಷ್ಟವನ್ನು ಅನುಭವಿಸಿದ್ದಾರೆ ಎಂದು ಸಂಘಟನೆಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: 2018ರ ಮಾನನಷ್ಟ ಮೊಕದ್ದಮೆ ಕೇಸ್ ವಜಾಗೊಳಿಸಿದ ಸುಲ್ತಾನ್‌ಪುರ ಕೋರ್ಟ್..!

ಸಂಸತ್ ಭವನದ ನಾರ್ತ್ ಬ್ಲಾಕ್‌ನಲ್ಲಿ ಅಗ್ನಿ ಅವಘಡ; ಬೆಂಕಿ ನಂದಿಸಲು ಸ್ಥಳಕ್ಕೆ ಧಾವಿಸಿದ 6 ಅಗ್ನಿಶಾಮಕ ವಾಹನ!

ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ 'ಅರ್ನಾಬ್' ಚಂಡಮಾರುತ, ತೀವ್ರ ಸ್ವರೂಪ, 3 ದಿನ ಮಳೆ ಸಾಧ್ಯತೆ IMD

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ: ಆ್ಯಂಬುಲೆನ್ಸ್ ಗೆ ಹಾನಿ; ಹಲವರಿಗೆ ಗಾಯ..! Video

ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಖರ್ಗೆ ತೋರಿದ ಸಣ್ಣತನ ಕ್ಷಮಾರ್ಹವಲ್ಲ: ಕುಮಾರಸ್ವಾಮಿ ತರಾಟೆ!