ಕಚೋರಿ ತಿನ್ನಲು ಹೋದ ಉದ್ಯಮಿಗೆ 20 ಲಕ್ಷ ರೂ ನಷ್ಟ 
ದೇಶ

20 ರೂ ಕಚೋರಿ ತಿನ್ನಲು ಹೋಗಿ 20 ಲಕ್ಷ ರೂ ಕಳೆದುಕೊಂಡ ಭೂಪ; ಕಳ್ಳರ ಕೈಚಳಕಕ್ಕೆ ಉದ್ಯಮಿ ಬೇಸ್ತು! Video

ರಾಜಸ್ತಾನ ಜೈಪುರದ ನಹರ್‌ಗಢ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಸುಮಾರು 4 ಗಂಟೆಗೆ ಈ ಘಟನೆ ನಡೆದಿದ್ದು, ಉದ್ಯಮಿ ಕಚೋರಿ ತಿನ್ನುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಕಳ್ಳರು ಹಣವಿದ್ದ ಬ್ಯಾಗ್‌ ಎಗರಿಸಿ ಪರಾರಿ..

ಜೈಪುರ: ಉದ್ಯಮಿಯೊಬ್ಬರ ಬಾಯಿಚಪಲ ಅವರಿಗೆ ಭಾರಿ ನಷ್ಟ ಮಾಡಿದ್ದು, ಕಚೋರಿ ತಿನ್ನಲು ಹೋಗಿ ಬರೊಬ್ಬರಿ 20 ಲಕ್ಷ ರೂ ಹಣ ಕಳೆದುಕೊಂಡ ಘಟನೆ ನಡೆದಿದೆ.

ರಾಜಸ್ತಾನ ಜೈಪುರದ ನಹರ್‌ಗಢ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಸುಮಾರು 4 ಗಂಟೆಗೆ ಈ ಘಟನೆ ನಡೆದಿದ್ದು, ಉದ್ಯಮಿ ಕಚೋರಿ ತಿನ್ನುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಕಳ್ಳರು ಹಣವಿದ್ದ ಬ್ಯಾಗ್‌ ಎಗರಿಸಿ ಪರಾರಿಯಾಗಿದ್ದಾರೆ.

ಈ ಕಳವು ಪ್ರಕರಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಉದ್ಯಮಿಯ ಬಾಯಿಚಪಲ

ಮೂಲಗಳ ಪ್ರಕಾರ ಚಂಪಾಲಾಲ್‌ ಎಂಬ ಉದ್ಯಮಿ 20 ಲಕ್ಷ ರೂ ನಗದು ಇದ್ದ ಬ್ಯಾಗ್ ನೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಬಾಯಿಚಪಲ ಮತ್ತು ಹಸಿವು ನೀಗಿಸಿಕೊಳ್ಳಲು ತಮ್ಮ ಸ್ಕೂಟರ್ ನಿಲ್ಲಿಸಿ ಕಚೋರಿ ತಿನ್ನಲು ನಿಂತಿದ್ದಾರೆ.

ಉದ್ಯಮಿ ತಿಂಡಿ ತಿನ್ನುವುದರಲ್ಲಿ ನಿರತರಾಗಿದ್ದಾಗ ಮತ್ತೊಂದು ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಪಕ್ಕದಲ್ಲಿ ಬಂದು ನಿಂತಿದ್ದಾರೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಕ್ಷಣಾರ್ಧದಲ್ಲಿ ಹಣವಿದ್ದ ಬ್ಯಾಗ್‌ ಕಿತ್ತುಕೊಂಡು ಸಹಚರನೊಂದಿಗೆ ಪರಾರಿಯಾಗಿದ್ದಾನೆ.

ಕಚೋರಿ ಕೈಯಲ್ಲಿಟ್ಟುಕೊಂಡೇ ಕಳ್ಳರ ಬೆನ್ನಟ್ಟಿದ ಉದ್ಯಮಿ!

ಸಿಸಿಟಿವಿ ದೃಶ್ಯಗಳಲ್ಲಿ ಉದ್ಯಮಿ ಸ್ಕೂಟರ್‌ ಮೇಲೆ ಕುಳಿತು ಆರಾಮವಾಗಿ ಕಚೋರಿ ತಿನ್ನುತ್ತಿರುವುದು ಕಾಣಿಸುತ್ತದೆ. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಪಕ್ಕದಲ್ಲಿ ನಿಲ್ಲಿಸುತ್ತಾರೆ. ಹಿಂಬದಿ ಕುಳಿತಿದ್ದ ವ್ಯಕ್ತಿ ಹಣದ ಬ್ಯಾಗ್‌ ಕಸಿದುಕೊಂಡು ಕ್ಷಿಪ್ರವಾಗಿ ಪರಾರಿಯಾಗುತ್ತಾನೆ.

ಇದನ್ನು ಗಮನಿಸಿದ ಚಂಪಾಲಾಲ್‌ ಕೈಯಲ್ಲಿದ್ದ ಕಚೋರಿಯನ್ನು ಹಿಡಿದುಕೊಂಡೇ ಕಳ್ಳರ ಬೆನ್ನಟ್ಟಿದ್ದಾರೆ. ಸ್ಥಳೀಯರೂ ಅವರ ನೆರವಿಗೆ ಧಾವಿಸಿ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಇಬ್ಬರೂ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಹೆಲ್ಮೆಟ್‌ ಧರಿಸಿದ್ದ ಕಳ್ಳರಿಗಾಗಿ ಪೊಲೀಸರ ಹುಡುಕಾಟ

ಘಟನೆಗೆ ಸಂಬಂಧಿಸಿದಂತೆ ಚಂಪಾಲಾಲ್‌ ನೀಡಿದ ದೂರಿನ ಆಧಾರದ ಮೇಲೆ ನಹರ್‌ಗಢ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಹೆಲ್ಮೆಟ್‌ ಧರಿಸಿದ್ದರಿಂದ ಅವರ ಗುರುತು ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗೋಕರ್ಣದ ತದಡಿ ಬಂದರಿನಲ್ಲಿ ಭೀಕರ ದುರಂತ; ಬೋಟ್‌ನಲ್ಲಿ ಉಸಿರುಗಟ್ಟಿ ಮೂವರು ಮೀನುಗಾರರು ಸಾವು!

ಸ್ವಪಕ್ಷದೊಳಗೆ ಖರ್ಗೆ ವಿರುದ್ಧ ಆಕ್ರೋಶ: ಹಿರಿತನ ಶೋಭೆ, ಆದರೆ ಭಾಷೆ ಸಭ್ಯತೆ ಮೀರಬಾರದು - ಪೃಥ್ವಿರಾಜ್ ಚವಾಣ್

ಕಾಂಗ್ರೆಸ್ ಗೆ ಮುಖಭಂಗ: ಬ್ಯಾಲೆಟ್ ಪೇಪರ್ ಮೂಲಕ ನಡೆದ MLC ಚುನಾವಣೆಯಲ್ಲಿ 4 ಸ್ಥಾನ NDA ತೆಕ್ಕೆಗೆ!

MLC Election: ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ BJPಯ ಶಶೀಲ್‌ ನಮೋಶಿ ಜಯಭೇರಿ; ಕಾಂಗ್ರೆಸ್‌ನ ಮಟ್ಟೂರುಗೆ ಮುಖಭಂಗ!

ನಡು ರಸ್ತೆಯಲ್ಲೇ ಯುವತಿಯ ಎದೆ ಮುಟ್ಟಿ, ಬಟ್ಟೆ ಎಳೆದ ದುಷ್ಕರ್ಮಿ; ಅಪಹರಣಕ್ಕೆ ಯತ್ನಿಸಿದವನಿಗೆ 'ಧರ್ಮದೇಟು'! Video