ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ X/@sanjaygaikwad34
ದೇಶ

ರೈತರ ಶವಗಳನ್ನು ಪ್ರಾಣಿಗಳಿಗೆ ಹಾಕಿ: ಆತ್ಮಹತ್ಯೆ ಮಾಡಿಕೊಂಡ ರೈತರ ಅಂತ್ಯಕ್ರಿಯೆಗೆ ಹೋಗ್ಬೇಡಿ ಎಂದ ಶಿಂಧೆ ಬಣದ ಶಾಸಕ; ಸಂಜಯ್ ಗಾಯಕ್ವಾಡ್ ಹೇಳಿಕೆಗೆ ಭಾರಿ ಆಕ್ರೋಶ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಶಾಸಕ ಸಂಜಯ್ ಗಾಯಕ್ವಾಡ್ ಅವರು, "ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಅಂತ್ಯಕ್ರಿಯೆಗಳಲ್ಲಿ ಯಾರೂ ಭಾಗವಹಿಸಬಾರದು" ಎಂದು ಹೇಳುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬುಲ್ಧಾನಾ (ಮಹಾರಾಷ್ಟ್ರ): ಸಾಲದ ಸುಳಿ, ಬೆಳೆ ನಷ್ಟ, ಬೆಲೆ ಕುಸಿತ, ನೀರಾವರಿ ಕೊರತೆಯಂತಹ ಸಮಸ್ಯೆಗಳಿಂದ ತೀವ್ರ ಹತಾಶೆಗೊಳ್ಳುವ ರೈತರು, ಬೇರೆ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ರೈತರ ಆತ್ಮಹತ್ಯೆ ಬಗ್ಗೆ ಮಾತನಾಡುವ ಬರದಲ್ಲಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಶಾಸಕ ಸಂಜಯ್ ಗಾಯಕ್ವಾಡ್, ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಅಂತ್ಯಕ್ರಿಯೆಗಳಲ್ಲಿ ಯಾರೂ ಭಾಗವಹಿಸಬಾರದು ಎಂದು ಹೇಳುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದಾರೆ. ಬುಲ್ಧಾನಾ ಕ್ಷೇತ್ರದ ಶಾಸಕರಾಗಿರುವ ಇವರು, ರೈತರು ಇಂತಹ ತೀವ್ರ ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಈ ಹೇಳಿಕೆ ನೀಡಿರುವುದಾಗಿ ಸಮರ್ಥಿಸಿಕೊಂಡಿದ್ದರೂ, ಇದಕ್ಕೆ ಸಾರ್ವಜನಿಕ ವಲಯ ಹಾಗೂ ರೈತ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಇತ್ತೀಚೆಗೆ ವಂಚಿತ್ ಬಹುಜನ ಅಘಾಡಿಯ (VBA) ಮುಖ್ಯಸ್ಥ ಹಾಗೂ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ರೈತರನ್ನು ಉದ್ದೇಶಿಸಿ ನೀಡಿದ್ದ "ನಾ ಲಾಯಕ್" ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ, ಶಾಸಕ ಸಂಜಯ್ ಗಾಯಕ್ವಾಡ್, "ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಅಂತ್ಯಕ್ರಿಯೆಗೆ ಯಾರೂ ಹೋಗಬಾರದು ಎಂದು ನಾನು ಹೇಳುತ್ತೇನೆ. ಶವವನ್ನು ಹಾಗೇ ಬಿಟ್ಟಾಗ ಅದನ್ನು ಪ್ರಾಣಿಗಳು ತಿಂದರೆ ಏನಾಗುತ್ತದೆ ಎಂಬುದು ಜನರಿಗೆ ಅರ್ಥವಾಗುತ್ತದೆ. ಆ ನಂತರ ಯಾವುದೇ ರೈತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ" ಎಂಬ ವಿಚಿತ್ರ ತರ್ಕ ಮುಂದಿಟ್ಟಿದ್ದಾರೆ.

ಮುಂದುವರೆದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಪತ್ನಿ ಮತ್ತು ಮಕ್ಕಳನ್ನು ತೀವ್ರ ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಮದುವೆಯಾಗುವಾಗ ಏಳು ಜನ್ಮಗಳ ಕಾಲ ಜೊತೆಯಾಗಿರುವ ಭರವಸೆ ನೀಡಿ, ಅರ್ಧದಲ್ಲೇ ಇಂತಹ ನಿರ್ಧಾರ ಕೈಗೊಳ್ಳುವುದು ತಪ್ಪು ಎಂದು ವಾದಿಸಿದ ಅವರು, ರೈತರಿಗೆ ಏನಾದರೂ ಸಮಸ್ಯೆಗಳಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಸರ್ಕಾರಕ್ಕೆ, ತಮ್ಮ ಭಾಗದ ಶಾಸಕರಿಗೆ ಅಥವಾ ಸಂಸದರಿಗೆ ಪತ್ರ ಬರೆದು ಕಷ್ಟಗಳನ್ನು ತಿಳಿಸಬೇಕು. ನಾವೆಲ್ಲರೂ ಒಟ್ಟಾಗಿ ಸಹಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಈ ಬೆನ್ನಲ್ಲೇ, ರೈತ ಮುಖಂಡ ರವಿಕಾಂತ್ ತುಪ್ಕರ್ ತೀವ್ರವಾಗಿ ಖಂಡಿಸಿದ್ದು, "ರೈತರು ಸಂತೋಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಬದಲಿಗೆ ಬೆಳೆ ನಷ್ಟ, ಸಾಲದ ಹೊರೆ ಮತ್ತು ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಬೇರೆ ದಾರಿಯಿಲ್ಲದೆ ಈ ನಿರ್ಧಾರ ಕೈಗೊಳ್ಳುತ್ತಾರೆ" ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಈ ಕೂಡಲೇ ರೈತರ ಕ್ಷಮೆಯಾಚಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೇರೆಯವರಿಗೆ ಉಪದೇಶ ನೀಡುವುದು ನಿಲ್ಲಿಸಿ; ವಾರಾಣಸಿ, ನಾಗ್ಪುರ ಬಿಜೆಪಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ ತಿರುಗೇಟು

KPSC: ರಾಜ್ಯ ಸರ್ಕಾರಕ್ಕೆ ಭಾರಿ ಶಾಕ್; ಸುಪ್ರೀಂ ನಲ್ಲಿ 2022 ರ ವಿಶೇಷ ಕಾಯ್ದೆ ರದ್ದು! 362 ಕೆಎಎಸ್ ಅಧಿಕಾರಿಗಳ ನೌಕರಿಗೆ ಕುತ್ತು!

ಇಸ್ರೇಲ್ ಚುನಾವಣೆ ಫಲಿತಾಂಶ: ಬಹುಮತ ಪಡೆಯುವಲ್ಲಿ ನೆತನ್ಯಾಹು, ಗಾಡಿ ಐಸೆನ್‌ಕೋಟ್‌ ವಿಫಲ, ಮೈತ್ರಿ ಅಗತ್ಯ!

'ನಾಸೀರುದ್ದೀನ್ ಶಾ ಸೈದ್ಧಾಂತಿಕ ಒಲವುಗಳನ್ನು ನಾನು ತಪ್ಪಾಗಿ ಅರ್ಥೈಸಿದ್ದೆ: ಅವರೊಬ್ಬ ಅಪಾಯಕಾರಿ ದಿಮಾಗಿ ನಕ್ಸಲ್, ವಿನಾಶಕಾರಿ ಚಿಂತಕ'

ವಿದೇಶದಲ್ಲಿರುವ ಭಾರತೀಯರು ಉದ್ಯೋಗವಿಲ್ಲದೆ ಭಾರತಕ್ಕೆ ಮರಳಲು ಎಷ್ಟು ಹಣ ಬೇಕು? (ಹಣಕ್ಲಾಸು)