ರಾಹುಲ್ ಗಾಂಧಿ - ನಿರ್ಮಲಾ ಸೀತಾರಾಮನ್ 
ದೇಶ

IDBI ಮಾರಾಟ: ಕಾಂಗ್ರೆಸ್, ಬ್ಯಾಂಕುಗಳನ್ನು ತನ್ನ "ಖಾಸಗಿ ಜಾಗೀರನ್ನಾಗಿ" ಮಾಡಿಕೊಂಡಿತ್ತು; ರಾಹುಲ್ ಗಾಂಧಿಗೆ ನಿರ್ಮಲಾ ತಿರುಗೇಟು

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಾಪನೆಯಾದ ಐಡಿಬಿಐ ಬ್ಯಾಂಕ್ ಅನ್ನು ಮೋದಿ ಸರ್ಕಾರ ಮಾರಾಟ ಮಾಡಲು ಮುಂದಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟೀಕೆಗೆ ಪ್ರತಿಕ್ರಿಯಿಸಿದ ಸೀತಾರಾಮನ್.

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ತನ್ನ "ಖಾಸಗಿ ಜಾಗೀರನ್ನಾಗಿ" ದುರ್ಬಳಕೆ ಮಾಡಿಕೊಂಡಿತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಾಪನೆಯಾದ ಐಡಿಬಿಐ ಬ್ಯಾಂಕ್ ಅನ್ನು ಮೋದಿ ಸರ್ಕಾರ ಮಾರಾಟ ಮಾಡಲು ಮುಂದಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟೀಕೆಗೆ ಪ್ರತಿಕ್ರಿಯಿಸಿದ ಸೀತಾರಾಮನ್, 1976 ರಲ್ಲಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಅಧ್ಯಕ್ಷ ಆರ್ ಕೆ ತಲ್ವಾರ್ ಅವರನ್ನು ತೆಗೆದುಹಾಕುವುದು ಸೇರಿದಂತೆ ಕಾಂಗ್ರೆಸ್ ಆಳ್ವಿಕೆಯಲ್ಲಿ ಬ್ಯಾಂಕಿಂಗ್‌ನಲ್ಲಿ ರಾಜಕೀಯ ಹಸ್ತಕ್ಷೇಪದ ಹಲವಾರು ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.

ಸಂಜಯ್ ಗಾಂಧಿಗೆ ಸಂಬಂಧಿಸಿದ ಕಂಪನಿಗೆ ಸಾಲ ನೀಡುವ ನಿಯಮಗಳನ್ನು ಸಡಿಲಿಸಲು ನಿರಾಕರಿಸಿದ ನಂತರ ತಲ್ವಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಹಣಕಾಸು ಸಚಿವೆ, ವಿಡಿಯೋಕಾನ್, ವಿನ್‌ಸಮ್, ಎಬಿಜಿ ಶಿಪ್‌ಯಾರ್ಡ್ ಮತ್ತು ಕಿಂಗ್‌ಫಿಷರ್ ಸೇರಿದಂತೆ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕ ಹೊಂದಿರುವ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ಐಡಿಬಿಐ ಬ್ಯಾಂಕ್ ಸಾಲ ನೀಡುವಂತೆ ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ.

ನಿಯಮಗಳನ್ನು ಗಾಳಿಗೆ ತೂರಿ, ಕೇವಲ ಫೋನ್ ಕರೆಗಳ ಮೂಲಕ ಆಪ್ತರಿಗೆ ಬೇಕಾಬಿಟ್ಟಿ ಸಾಲ ನೀಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿತ್ತು ನಿರ್ಮಲಾ ಸೀತಾರಾಮನ್ ದೂರಿದ್ದಾರೆ.

ಈ ಸಾಲಗಳು ತರುವಾಯ ವಸೂಲಾಗದ ನಷ್ಟದ ಸಾಲಗಳಾಗಿ (NPA) ಪರಿವರ್ತನೆಯಾಗಿ, ಐಡಿಬಿಐ ಬ್ಯಾಂಕ್ ಅಧೋಗತಿಗೆ ಇಳಿದ ಸ್ಥಿತಿಯಲ್ಲಿ ನಮಗೆ ಹಸ್ತಾಂತರವಾಯಿತು ಎಂದು ಸಚಿವೆ ವಿವರಿಸಿದ್ದಾರೆ.

1980 ರ ದಶಕದಲ್ಲಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಸಂಪುಟದಲ್ಲಿ ಹಣಕಾಸು ರಾಜ್ಯ ಸಚಿವರಾಗಿದ್ದ ಬಿ. ಜನಾರ್ದನ ಪೂಜಾರಿ ಅವರ ಅವಧಿಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ಯಾಂಕ್ ಸಿಬ್ಬಂದಿಗೆ ಮಿತಿಮೀರಿ ಸಾಲ ಹಂಚುವಂತೆ ಒತ್ತಡ ಹೇರಲಾಗಿತ್ತು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ವೃತ್ತಿಪರ ನಿರ್ವಹಣೆ, ವಿವೇಚನಾಯುಕ್ತ ಸಾಲ ಪದ್ಧತಿಗಳು ಮತ್ತು 25,000 ಕೋಟಿ ರೂ.ಗಳಿಗೂ ಹೆಚ್ಚಿನ ಮರು ಬಂಡವಾಳೀಕರಣದ ಮೂಲಕ ಬ್ಯಾಂಕನ್ನು ಪುನರುಜ್ಜೀವನಗೊಳಿಸಿದೆ. ಪ್ರಸ್ತಾವಿತ ಕಾರ್ಯತಂತ್ರದ ಹೂಡಿಕೆಯಲ್ಲಿ ಎಲ್ಲಾ ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆ ಎಂದು ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೆಂಗಳೂರು: ಡೇಟಿಂಗ್​ಗಾಗಿ ಯುವತಿ ಬುಕ್ ಮಾಡಿದ ಯುವಕ; ಮನೆಗೆ ಬಂದಿದ್ದು ಟ್ರಾನ್ಸಜೆಂಡರ್! ಮುಂದೆ ಆಗಿದ್ದೇನು?

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ದೋಷಾರೋಪಣೆ ದಿಢೀರ್ ಮುಂದೂಡಿದ INDIA!

2027ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 'ಏಕರೂಪ ನಾಗರಿಕ ಸಂಹಿತೆ' ಜಾರಿಗೆ- ಅಮಿತ್ ಶಾ ಭರವಸೆ

ನ್ಯಾಯಾಂಗ ನಿಂದನೆ ಆರೋಪ: CJP ನಾಯಕ ಸೌರವ್ ದಾಸ್ ಹಿನ್ನೆಲೆ ಕುರಿತು ತನಿಖೆ, passport-Aadhaar card ರದ್ದು ಕೋರಿ PIL; ಕೇಂದ್ರ ಸರ್ಕಾರಕ್ಕೆ Madras ಹೈಕೋರ್ಟ್ ನೋಟಿಸ್..!

ಬದರಿನಾಥದಿಂದ ಡೆಹ್ರಾಡೂನ್ ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ! ಆರು ಮಂದಿ ಸಾವನ್ನಪ್ಪಿರುವ ಸಾಧ್ಯತೆ