ಸಿಎಂ ವಿಜಯ್ 
ದೇಶ

ತಮಿಳುನಾಡು ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಐದು ವರ್ಷ ವಯೋಮಿತಿ ಸಡಿಲಿಕೆ ಘೋಷಿಸಿದ CM ವಿಜಯ್

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಮನವಿಗಳಿಗೆ ಸ್ಪಂದಿಸಿ, ಮುಖ್ಯಮಂತ್ರಿ ವಿಜಯ್ ಅವರು ಈ ವಯೋಮಿತಿ ಸಡಿಲಿಕೆ ಮಾಡಿ ಆದೇಶಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಗಿಫ್ಟ್ ನೀಡಿದ್ದು, ಸರ್ಕಾರಿ ಉದ್ಯೋಗಗಳಿಗೆ ವಯೋಮಿತಿಯಲ್ಲಿ ಐದು ವರ್ಷ ಸಡಿಲಿಕೆ ಘೋಷಿಸಿದ್ದಾರೆ. ಈ ಆದೇಶವು ಐದು ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಮನವಿಗಳಿಗೆ ಸ್ಪಂದಿಸಿ, ಮುಖ್ಯಮಂತ್ರಿ ವಿಜಯ್ ಅವರು ಈ ವಯೋಮಿತಿ ಸಡಿಲಿಕೆ ಮಾಡಿ ಆದೇಶಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

"ಈ ವಯೋಮಿತಿ ಸಡಿಲಿಕೆಯು, ಈಗಾಗಲೇ ಅಸ್ತಿತ್ವದಲ್ಲಿರುವ ವಯೋಮಿತಿ ಸಡಿಲಿಕೆ ನಿಯಮಗಳ ಜೊತೆಗೆ ಹೆಚ್ಚುವರಿಯಾಗಿ ಅನ್ವಯಿಸುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

'ಗ್ರೂಪ್-1' (Group I) ಸೇವೆಗಳಿಗೆ ಪ್ರಸ್ತುತ ವಯೋಮಿತಿಯು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 32 ವರ್ಷ ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 37 ವರ್ಷ ಇದೆ. ಈಗ ಘೋಷಿಸಲಾದ 5 ವರ್ಷಗಳ ಸಡಿಲಿಕೆಯೊಂದಿಗೆ, ಈ ವಯೋಮಿತಿಗಳು ಕ್ರಮವಾಗಿ 37 ಮತ್ತು 42 ವರ್ಷಕ್ಕೆ ಹೆಚ್ಚಾಗಲಿದೆ.

ಅದೇ 'ಗ್ರೂಪ್-1' ಸೇವೆಗಳಿಗೆ, ವಿಶೇಷಚೇತನ (ಸಾಮಾನ್ಯ ವರ್ಗ) ಅಭ್ಯರ್ಥಿಗಳಿಗೆ ಪ್ರಸ್ತುತ ವಯೋಮಿತಿ 42 ವರ್ಷಗಳು ಮತ್ತು ವಿಶೇಷಚೇತನ (ಮೀಸಲಾತಿ ವರ್ಗ) ಅಭ್ಯರ್ಥಿಗಳಿಗೆ 47 ವರ್ಷ ಇದೆ. ಈ ವಯೋಮಿತಿ ಸಡಿಲಿಕೆಯ ನಂತರ, ಈ ಮಿತಿಗಳು ಕ್ರಮವಾಗಿ 47 ಮತ್ತು 52 ವರ್ಷಕ್ಕೆ ಹೆಚ್ಚಾಗಲಿದೆಎಂದು ಪ್ರಕಟಣೆ ತಿಳಿಸಿದೆ.

'ಗ್ರೂಪ್-2' (Group II) ಮತ್ತು 'ಗ್ರೂಪ್-2ಎ' (Group IIa) ಸೇವೆಗಳಿಗೆ ಸಂಬಂಧಿಸಿದಂತೆ, ಪ್ರಸ್ತುತ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿ ಇಲ್ಲ; ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ 30 ವರ್ಷ ಮತ್ತು ವಿಶೇಷಚೇತನ (ಸಾಮಾನ್ಯ ವರ್ಗ) ಅಭ್ಯರ್ಥಿಗಳಿಗೆ 40 ವರ್ಷ ಇದೆ. ಈ ಸಡಿಲಿಕೆಯ ನಂತರ, ಸಾಮಾನ್ಯ ವರ್ಗದ ಅಭ್ಯರ್ಥಿಗಳ ವಯೋಮಿತಿ 35 ವರ್ಷ ಮತ್ತು ವಿಶೇಷಚೇತನ (ಸಾಮಾನ್ಯ ವರ್ಗ) ಅಭ್ಯರ್ಥಿಗಳಿಗೆ 45 ವರ್ಷಕ್ಕೆ ಹೆಚ್ಚಾಗಲಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬದರಿನಾಥದಿಂದ ಡೆಹ್ರಾಡೂನ್ ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ! ಬೆಂಗಳೂರು ಮೂಲದ ಐವರು ಪ್ರಯಾಣಿಕರು ಸೇರಿದಂತೆ ಆರು ಮಂದಿ ಸಾವು, VIDEO

Karnataka Rajyotsava Award 2026: ನಟ ಅಶೋಕ್ ಸೇರಿದಂತೆ ಈ ಬಾರಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ!

ಶಕ್ತಿ ಯೋಜನೆಯಿಂದ ತುಂಬಾ loss; KSRTC, BMTC ಡೀಸೆಲ್ ಗೂ ಕಾಸಿಲ್ಲಾ- CM DK Shivakumar

ಭಾಗವತ್ ಭೇಟಿ ಬೆನ್ನಲ್ಲೇ ಅಮೆರಿಕದಲ್ಲಿ 'RSS ಫ್ರೆಂಡ್ಸ್‌' ನೋಂದಣಿ; 'ವಿದೇಶಿ ಏಜೆಂಟ್' ಆಗಿ ಸಂಘ ರಿಜಿಸ್ಟರ್!

IDBI ಮಾರಾಟ: ಕಾಂಗ್ರೆಸ್, ಬ್ಯಾಂಕುಗಳನ್ನು ತನ್ನ "ಖಾಸಗಿ ಜಾಗೀರನ್ನಾಗಿ" ಮಾಡಿಕೊಂಡಿತ್ತು; ರಾಹುಲ್ ಗಾಂಧಿಗೆ ನಿರ್ಮಲಾ ತಿರುಗೇಟು