ಪ್ರಧಾನಿ ನರೇಂದ್ರ ಮೋದಿ  
ದೇಶ

ಕೊನೆಯ ಉಸಿರು ಇರುವವರೆಗೂ ಜನರ ಸೇವೆ ಮಾಡುತ್ತೇನೆ: ಪ್ರಧಾನಿ ನರೇಂದ್ರ ಮೋದಿ; Video

ಗುಜರಾತ್‌ನ ಬನಸ್ಕಾಂಠಾ ಜಿಲ್ಲೆಯ ಭಿಲ್ಡಿಯಲ್ಲಿ ದೇಶೀಯ ಜಾನುವಾರು ಸಂತಾನೋತ್ಪತ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜನಸೇವೆಯ ಬಗ್ಗೆ ತಮ್ಮ ಬದ್ಧತೆ ಅಚಲವಾಗಿರಲಿದೆ ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಮೋದಿ ಕಾ ಬಾಪ್ ಭೀ ಜಾಯೇಗಾ’ (ಮೋದಿಯ ಅಪ್ಪನೂ ಹೋಗಬೇಕಾಗುತ್ತದೆ) ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕೆಲವೇ ದಿನಗಳ ಬಳಿಕ, ತಮ್ಮ ಕೊನೆಯ ಉಸಿರಿರುವವರೆಗೂ ದೇಶದ ಜನರ ಸೇವೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‌ನ ಬನಸ್ಕಾಂಠಾ ಜಿಲ್ಲೆಯ ಭಿಲ್ಡಿಯಲ್ಲಿ ದೇಶೀಯ ಜಾನುವಾರು ಸಂತಾನೋತ್ಪತ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜನಸೇವೆಯ ಬಗ್ಗೆ ತಮ್ಮ ಬದ್ಧತೆ ಅಚಲವಾಗಿರಲಿದೆ, ಜೀವನದ ಕೊನೆಯ ಕ್ಷಣದವರೆಗೂ ಜನರ ಸೇವೆಯಲ್ಲಿ ತೊಡಗಿರುತ್ತೇನೆ’ ಎಂದು ಹೇಳಿದರು.

ಪ್ರತಿಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ದೇಶ ಸಂಕಷ್ಟ ಎದುರಿಸುತ್ತಿರುವಾಗ ಕೆಲವರು ಅದರಲ್ಲಿ ಸಂತೋಷ ಕಾಣುತ್ತಿದ್ದಾರೆ. ತಮ್ಮ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು.

ಇರಾನ್ ಯುದ್ಧ ಆರಂಭವಾದ ಬಳಿಕ ರೈತರಿಗೆ ರಸಗೊಬ್ಬರದ ಕೊರತೆ ಎದುರಾಗಲಿದೆ ಹಾಗೂ ಜನರಿಗೆ ಅಡುಗೆ ಅನಿಲ ಸಿಲಿಂಡರ್‌ಗಳು ಸಿಗುವುದಿಲ್ಲ ಎಂಬ ವದಂತಿಗಳನ್ನು ಹರಡಲಾಯಿತು ಎಂದು ದೂರಿದರು.

ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಆದ್ಯತೆ ನೀಡಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಏರಿಕೆಯ ಹೊರೆಯನ್ನು ರೈತರ ಮೇಲೆ ಬೀಳದಂತೆ ನೋಡಿಕೊಂಡಿದೆ ಎಂದು ಮೋದಿ ಹೇಳಿದರು.

‘ಜಾಗತಿಕ ಅನಿಶ್ಚಿತತೆಯ ನಡುವೆ ರಸಗೊಬ್ಬರಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಯಿತು. ಆದರೆ, ನಮ್ಮ ಸರ್ಕಾರ ಆ ಬೆಲೆ ಏರಿಕೆಯ ಹೊರೆಯನ್ನು ರೈತರ ಮೇಲೆ ಬೀಳಲು ಅವಕಾಶ ನೀಡಲಿಲ್ಲ’ ಎಂದು ತಿಳಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಕೇಂದ್ರ ಸರ್ಕಾರವು ಸಣ್ಣ ರೈತರಿಗೆ 4.5 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವು ವಿತರಿಸಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಈ ಪ್ರದೇಶದಲ್ಲಿ 14 ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ದೋಷಾರೋಪಣೆ ದಿಢೀರ್ ಮುಂದೂಡಿದ INDIA!

ನ್ಯಾಯಾಂಗ ನಿಂದನೆ ಆರೋಪ: CJP ನಾಯಕ ಸೌರವ್ ದಾಸ್ ಹಿನ್ನೆಲೆ ಕುರಿತು ತನಿಖೆ, passport-Aadhaar card ರದ್ದು ಕೋರಿ PIL; ಕೇಂದ್ರ ಸರ್ಕಾರಕ್ಕೆ Madras ಹೈಕೋರ್ಟ್ ನೋಟಿಸ್..!

ಭೂತಾನ್‌ನಲ್ಲಿ ಹಿಮನದಿ ಸ್ಫೋಟ: ಭಾರತದ ಗಡಿ ರಾಜ್ಯಗಳಲ್ಲಿ ದಿಢೀರ್ ಪ್ರವಾಹ ಭೀತಿ, ಬಂಗಾಳ-ಅಸ್ಸಾಂನಲ್ಲಿ ಹೈ ಅಲರ್ಟ್ ಘೋಷಣೆ

ನಟ ಧನ್ವೀರ್‌ಗೆ ಹೆಚ್ಚಿದ ಸಂಕಷ್ಟ: ಮೂರು ಠಾಣೆಗಳಲ್ಲಿ ಎಫ್‌ಐಆರ್ ದಾಖಲು, ವಿಚಾರಣೆಗೆ ಹಾಜರಾಗಲು ಪೊಲೀಸರ ನೋಟಿಸ್

ಅಮೆರಿಕದ ನಾರ್ತ್ ಡಕೋಟಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ!