ಕರ್ವಾ ಚೌತ್ ದಿನವೇ ಪ್ರಿಯಕರನ ಜೊತೆ ಸಿಕ್ಕಬಿದ್ದ ಪತ್ನಿದೆ ಧರ್ಮದೇಟು 
ದೇಶ

ಕರ್ವಾ ಚೌತ್ ದಿನವೇ ಪ್ರಿಯಕರನ ಜೊತೆ ಸೆ*, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ 'ಧರ್ಮದೇಟು'! Video

ಉತ್ತರ ಪ್ರದೇಶದ ಮಥುರಾದ ಮಥುರಾದ ಬಸಂತ್ ವಿಹಾರ್ ಕಾಲನಿಯಲ್ಲಿ ಈ ಭಾರೀ ಹೈಡ್ರಾಮಾ ನಡೆದಿದ್ದು, ಪತ್ನಿಯನ್ನು ಪ್ರಿಯಕರನ ಜೊತೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಪತಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾನೆ.

ಮಥುರಾ: ಕರ್ವಾ ಚೌತ್ ಹಬ್ಬದ ದಿನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾಳೆ ಎಂಬ ಆರೋಪದ ಮೇರೆಗೆ ಪತಿ ಮಹಾಶಯ ಪತ್ನಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಮಥುರಾದ ಮಥುರಾದ ಬಸಂತ್ ವಿಹಾರ್ ಕಾಲನಿಯಲ್ಲಿ ಈ ಭಾರೀ ಹೈಡ್ರಾಮಾ ನಡೆದಿದ್ದು, ಪತ್ನಿಯನ್ನು ಪ್ರಿಯಕರನ ಜೊತೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಪತಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾನೆ. ಬಳಿಕ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಹಿಳೆಯರು ಪರಸ್ಪರ ಕೂದಲು ಹಿಡಿದು ಎಳೆದಾಡಿ ಹೊಡೆದಾಡಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮನೋಜ್ ಎಂಬಾತ ತನ್ನ ಪತ್ನಿ ಅಂಜು, ಸಂಜಯ್ ಅಲಿಯಾಸ್ ಗೀತಮ್ ಎಂಬ ವ್ಯಕ್ತಿಯನ್ನು ಭೇಟಿಯಾಗಲು ತೆರಳಿದ್ದಾಳೆ ಎಂದು ಆರೋಪಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಮನೋಜ್ ತನ್ನ ಕುಟುಂಬದ ಕೆಲವರೊಂದಿಗೆ ಸ್ಥಳಕ್ಕೆ ಧಾವಿಸಿ ಪತ್ನಿ ಹಾಗೂ ಆಕೆಯ ಜೊತೆಗಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಾನೆ.

ಈ ವೇಳೆ ಮಾತಿಗೆ ಮಾತು ಬೆಳೆದು ಎರಡೂ ಕುಟುಂಬಗಳ ನಡುವೆ ವಾಗ್ವಾದ ಆರಂಭವಾಗಿದೆ. ಬಳಿಕ ಮಹಿಳೆಯರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಮನೋಜ್‌ನ ಅತ್ತಿಗೆ ಮತ್ತು ಅಂಜು ಒಬ್ಬರನ್ನೊಬ್ಬರು ತಳ್ಳಾಡಿ ನೆಲಕ್ಕೆ ಬಿದ್ದಿದ್ದಾರೆ. ನಂತರ ಇಬ್ಬರೂ ಪರಸ್ಪರ ಕೂದಲು ಹಿಡಿದು ಎಳೆದಾಡುತ್ತಾ ಹೊಡೆದಾಡಿಕೊಂಡಿದ್ದಾರೆ.

ಈ ಜಗಳದ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಇಬ್ಬರು ಮಹಿಳೆಯರು ನೆಲದ ಮೇಲೆ ಬಿದ್ದುಕೊಂಡೇ ಪರಸ್ಪರ ಹೊಡೆದಾಡುತ್ತಿರುವುದು ಕಂಡುಬಂದಿದೆ.

ಜಗಳ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಕುಟುಂಬದ ಇತರ ಸದಸ್ಯರು ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಲು ಹರಸಾಹಸ ಪಡಬೇಕಾಯಿತು. ಕೊನೆಗೆ ಕುಟುಂಬಸ್ಥರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಧ್ಯಪ್ರವೇಶಿಸಿ ಮನೋಜ್ ಮತ್ತು ಅಂಜುವನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ, ಪೊಲೀಸರು ಬರುವಷ್ಟರಲ್ಲಿ ಸಂಜಯ್ ಸ್ಥಳದಿಂದ ಪರಾರಿಯಾಗಿದ್ದಾನೆ.

15ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ

ಮನೋಜ್ ಮತ್ತು ಅಂಜು ಕಳೆದ 15 ವರ್ಷಗಳಿಂದ ವಿವಾಹವಾಗಿದ್ದು, ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಪತ್ನಿ ಸಂಜಯ್‌ನನ್ನು ಭೇಟಿಯಾಗಲು ತೆರಳುವಾಗ ನಾಲ್ವರು ಮಕ್ಕಳನ್ನು ಮನೆಯಲ್ಲೇ ಒಂಟಿಯಾಗಿ ಬಿಟ್ಟು ಹೋಗಿದ್ದಳು ಎಂದು ಮನೋಜ್ ಆರೋಪಿಸಿದ್ದಾನೆ. ಅಲ್ಲದೆ, ಈ ಹಿಂದೆಯೂ ಇಬ್ಬರೂ ಭೇಟಿಯಾಗುತ್ತಿದ್ದರು ಎಂದು ದೂರಿದ್ದಾನೆ.

"ಸಂಜಯ್ ಜೊತೆ ಸಮಯ ಕಳೆಯಲು ಆಕೆ ನಮ್ಮ ನಾಲ್ವರು ಮಕ್ಕಳನ್ನು ಮನೆಯಲ್ಲೇ ಒಂಟಿಯಾಗಿ ಬಿಟ್ಟು ಹೋಗಿದ್ದಳು. ಈ ಹಿಂದೆಯೂ ಇಬ್ಬರೂ ಭೇಟಿಯಾಗಿದ್ದರು. ಈ ಬಾರಿ ಆಕೆ ಆತನನ್ನು ಭೇಟಿಯಾಗಲು ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರಿಂದಲೇ ನಾನು ಅವರನ್ನು ಹಿಡಿದೆ" ಎಂದು ಮನೋಜ್ ಹೇಳಿದ್ದಾನೆ.

ಡಿವೋರ್ಸ್ ಗೆ ಅರ್ಜಿ

ಇನ್ನು, ದಂಪತಿ ನಡುವೆ ಈಗಾಗಲೇ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮನೋಜ್ ತಿಳಿಸಿದ್ದಾನೆ. ಅಲ್ಲದೆ, ತನ್ನ ಆಸ್ತಿಯಲ್ಲಿ ಅರ್ಧ ಪಾಲು ನೀಡುವಂತೆ ಅಂಜು ಬೇಡಿಕೆ ಇಟ್ಟಿದ್ದಾಳೆ ಎಂದೂ ಆರೋಪಿಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕನ್ನಡ ಬಾವುಟದ ವಿನ್ಯಾಸ ಬದಲು: ಹಳದಿ-ಕೆಂಪು ಕನ್ನಡ ಧ್ವಜಕ್ಕೆ ಮತ್ತೊಂದು ಬಣ್ಣ, ಮಧ್ಯದಲ್ಲಿ ರಾಜ್ಯ ಲಾಂಛನ; ಡಿಕೆಶಿ ಮಹತ್ವದ ಘೋಷಣೆ

71ನೇ ಕನ್ನಡ ರಾಜ್ಯೋತ್ಸವ: ನಾಡದೇವತೆ ಭುವನೇಶ್ವರಿಗೆ ಪುಷ್ಪಾರ್ಚನೆ; ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆ.ಶಿವಕುಮಾರ್

INDIA ಕೂಟದ ಬೃಹತ್ ರ‍್ಯಾಲಿಗೆ ರಾಮಲೀಲಾ ಮೈದಾನ ಸಜ್ಜು: ದೆಹಲಿಗೆ ರಾಜಕೀಯ ನಾಯಕರ, ಬೆಂಬಲಿಗರ ಆಗಮನ

ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ, ಆತ್ಮಗೌರವ: ಕನ್ನಡದ ಕಂಪು ಜಗದಗಲ ಪಸರಿಸಲಿ; ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿದ ಸಿಎಂ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಶಿಕ್ಷೆ ಕೊಡಿಸಿದ್ದ ತನಿಖಾಧಿಕಾರಿಗಳು ಸೇರಿ ರಾಜ್ಯ 6 ಅಧಿಕಾರಿಗಳಿಗೆ ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ!