ಗೆಳೆಯನ ಮೇಲಿನ ಪ್ರೀತಿಗೆ ತಂದೆಯ ಗೆಳೆಯನ ಮನೆಯಲ್ಲೇ ಕನ್ನ Online Desk
ದೇಶ

ಲವರ್‌ಗೆ ಬೈಕ್ ಕೊಡಿಸಲು ಚಿನ್ನ ಕದ್ದ ಕಾಲೇಜು ಯುವತಿ! ಅಪ್ಪನ ಸ್ನೇಹಿತನ ಮನೆಯಲ್ಲೇ 72 ಗ್ರಾಂ ಒಡವೆ ಕದ್ದ ಯುವತಿ ಅಂದರ್

ತನ್ನ ಬಾಯ್‌ಫ್ರೆಂಡ್‌ಗೆ ದುಬಾರಿ ಬೈಕ್ ಕೊಡಿಸಲು ತಂದೆಯ ಸ್ನೇಹಿತನ ಮನೆಯಿಂದಲೇ ಒಂಬತ್ತು ಪವನ್ ಚಿನ್ನಾಭರಣ ಕದ್ದ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಾಲೇಜು ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪೊಲ್ಲಾಚಿ (ತಮಿಳುನಾಡು): ತನ್ನ ಗೆಳೆಯನ ಮಗಳು ತನ್ನ ಮಗಳು ಅಲ್ಲವೇ ಎಂದು ಯೋಚನೆ ಮಾಡಿದ್ದೇ ತಪ್ಪಾಯಿತು; ಯಾಕಂದ್ರೆ, ಹೀಗೆ ಗೆಳೆಯನ ಮೇಲಿನ ಅಪಾರ ಪ್ರೀತಿ, ಗೌರವದಿಂದ ಆತನ ಮಗಳನ್ನು ತನ್ನ ಸ್ವಂತ ಮಗಳಂತೆ ಭಾವಿಸಿ ಆಸರೆ ನೀಡಿದ ಆ ವ್ಯಕ್ತಿಯ ಮನೆಯಲ್ಲೇ ಚಿನ್ನಾಭರಣ ಎಗರಿಸಿ ಈಗ ಅಂದರ್ ಆಗಿದ್ದಾಳೆ. ಅದರಲ್ಲೂ, ಕದ್ದ ಚಿನ್ನ ಮಾರಿ ಬೈಕ್ ಖರೀದಿಸಿ, ಆ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಜೋಡಿ ಸಿಕ್ಕಿಬಿದ್ದರ ಕುರಿತ ರೋಚಕ ಮಾಹಿತಿ ಇಲ್ಲಿದೆ.

ಏನಿದು ಘಟನೆ?

ತಮಿಳುನಾಡಿನ ಕೊಯಮತ್ತೂರು (ಕೋವೈ) ಜಿಲ್ಲೆಯ ಸರ್ಕಾರಿ ಕಲಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ ಓದುತ್ತಿರುವ 19 ವರ್ಷದ ಆರ್‌ ಜಾಯ್ ಪ್ರಿನ್ಸಿ, ಆಗಸ್ಟ್ 16 ರಂದು ತನ್ನ ತಂದೆಯ ಸ್ನೇಹಿತರಾದ, ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಸಮೀಪದ ಊಂಜವೇಲಂಪಟ್ಟಿಯ ನಿವಾಸಿ ತಮಿಳ್‌ಸೆಲ್ವನ್ ಎಂಬುವವರ ಮನೆಗೆ ಹೋಗಿದ್ದಳು. ಆದರೆ, ಆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಬೀರುವಿನಲ್ಲಿದ್ದ 72 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದಿದ್ದಾಳೆ. ಇನ್ನು, ಕದ್ದ ಒಡವೆಯನ್ನು ಪೊಲ್ಲಾಚಿಯ ಜ್ಯುವೆಲ್ಲರಿ ಶಾಪ್‌ ಒಂದರಲ್ಲಿ ಮಾರಾಟ ಮಾಡಿ ಬರೋಬ್ಬರಿ ₹2.5 ಲಕ್ಷ ನಗದು ಪಡೆದುಕೊಂಡಿದ್ದಾಳೆ. ಅದರಲ್ಲೂ, ಆ ಹಣದಿಂದ ತನ್ನ ಬಾಯ್‌ಫ್ರೆಂಡ್ ಜಗನ್ ಶಿವ (25) ಎಂಬಾತನಿಗೆ ದುಬಾರಿ ಬೆಲೆಯ ಕೆಟಿಎಂ ಡ್ಯೂಕ್ ಬೈಕ್ ಖರೀದಿಸಿ ಸರ್ಪ್ರೈಸ್ ಗಿಫ್ಟ್ ನೀಡಿದ್ದಾಳೆ.

ಹಾಗಾದ್ರೆ, ಸಿಕ್ಕಿಬಿದ್ದಿದ್ದು ಹೇಗೆ?

ಬೀರುವಿನಲ್ಲಿದ್ದ ಒಡವೆ ಕಾಣೆಯಾಗಿರುವುದನ್ನು ಗಮನಿಸಿದ ತಮಿಳ್‌ಸೆಲ್ವನ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತಾನೇ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ, ಈ ಜೋಡಿ ಹೊಸ ಬೈಕ್ ಡೆಲಿವರಿ ಪಡೆಯುವಾಗ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಇದು ಕೂಡ ಪೊಲೀಸರಿಗೆ ಪ್ರಮುಖ ಸಾಕ್ಷ್ಯ ಒದಗಿಸಿದೆ. 

ಏತನ್ಮಧ್ಯೆ, ಪೊಲೀಸರು ಯುವತಿಯನ್ನು ಬಂಧಿಸಿ ಕೊಯಮತ್ತೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆದರೆ, ಬೈಕ್ ಪಡೆದುಕೊಂಡ ಆಕೆಯ ಪ್ರಿಯಕರ ಜಗನ್ ಶಿವ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್‌ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ

‘SIR ಹೆಸರಿನಲ್ಲಿ ಮುಸ್ಲಿಮರನ್ನು ಬಾಂಗ್ಲಾದೇಶ ನುಸುಳುಕೋರರೆಂದು ಬಿಂಬಿಸಬೇಡಿ’: ಮಾಜಿ ಮುಖ್ಯ ಚುನಾವಣಾ ಆಯುಕ್ತ S Y Quraishi

'ಅಸಹ್ಯಕರ' ಕೋರ್ಟ್‌ನ ಆತ್ಮಸಾಕ್ಷಿಗೆ ನೋವುಂಟಾಗಿದೆ: ಮೋದಿ ಪೋಸ್ಟರ್ ಪ್ರದರ್ಶಿಸಿದ್ದ ಬಂಗಾಳಿ ನಟಿಗೆ ಹೈಕೋರ್ಟ್‌ ತರಾಟೆ!

'ಜನರ ಬಳಿಗೇ ಸರ್ಕಾರ, ದೊರೆ ಎನ್ನಬೇಡಿ, ಸೇವಕ ಎನ್ನಿ': ಕರ್ನಾಟಕದಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ CM ಡಿಕೆ ಶಿವಕುಮಾರ್ ಚಾಲನೆ

ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್: ಇನ್ಮುಂದೆ ತಮ್ಮ ಹೆಸರಿಗೆ ಮೊದಲು 'Tr' ಬಳಸುವ ಅವಕಾಶ!