ತಾಯಿಯ ಜೊತೆಯಲ್ಲಿ ನಟಿ ಅಮೀಷಾ ಪಟೇಲ್ 
ದೇಶ

ಬಾಲಿವುಡ್ ನಟಿ ಅಮೀಷಾ ಪಟೇಲ್ ತಾಯಿಯ ಮನೆಯಲ್ಲಿ ವಜ್ರದ ಬಳೆ ಕಳ್ಳತನ: ಮನೆಗೆಲಸದ ಮಹಿಳೆ ಬಂಧನ!

ಆರೋಪಿಯನ್ನು ಸೀಮಾ ಘಾಟೆ ಎಂದು ಗುರುತಿಸಲಾಗಿದೆ. ಪಾಲ್ಘರ್ ನಿವಾಸಿಯಾಗಿರುವ ಇವರು, ಅಮೀಷಾ ಪಟೇಲ್ ಅವರ ತಾಯಿ ಆಶಾ ಪಟೇಲ್ ಅವರ ಮನೆಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಮುಂಬೈ: ವಾಣಿಜ್ಯನಗರ ಮುಂಬೈನ ಚರ್ಚ್‌ಗೇಟ್ ಪ್ರದೇಶದಲ್ಲಿರುವ ಬಾಲಿವುಡ್ ನಟಿ ಅಮೀಷಾ ಪಟೇಲ್ ಅವರ ತಾಯಿಯ ಮನೆಯಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ವಜ್ರದ ಬಳೆಗಳನ್ನು ಕಳವು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರೀನ್ ಡ್ರೈವ್ ಪೊಲೀಸರು 40 ವರ್ಷದ ಮನೆಗೆಲಸದ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಸೀಮಾ ಘಾಟೆ ಎಂದು ಗುರುತಿಸಲಾಗಿದೆ. ಪಾಲ್ಘರ್ ನಿವಾಸಿಯಾಗಿರುವ ಇವರು, ಅಮೀಷಾ ಪಟೇಲ್ ಅವರ ತಾಯಿ ಆಶಾ ಪಟೇಲ್ ಅವರ ಮನೆಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಆಶಾ ಪಟೇಲ್ ನೀಡಿದ ದೂರಿನ ಮೇರೆಗೆ, ಮರೀನ್ ಡ್ರೈವ್ ಪೊಲೀಸರು ಕಳ್ಳತನದ ಬಗ್ಗೆ ತನಿಖೆ ನಡೆಸಿ, ಆರೋಪಿ ಘಾಟೆ ಅವರನ್ನು ವಿರಾರ್‌ನಲ್ಲಿ ಪತ್ತೆಹಚ್ಚಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯುವ ಮೊದಲು, ಆರಂಭದಲ್ಲಿ ಅಪರಿಚಿತ ಮಹಿಳೆಯೊಬ್ಬಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನದ ನಂತರ ಘಾಟೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಸೆಪ್ಟೆಂಬರ್ 15 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ಜನವರಿ 2026 ರಲ್ಲಿ ಮನೆಯಿಂದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಆಶಾ ಪಟೇಲ್ ಅವರಿಗೆ ಘಾಟೆ ಅವರ ಮೇಲೆ ಅನುಮಾನವಿತ್ತು. ಹೀಗಾಗಿ ಕಳೆದ ಆರೇಳು ತಿಂಗಳಿಂದ ಕಳ್ಳತನವನ್ನು ಒಪ್ಪಿಕೊಂಡು ಆಭರಣವನ್ನು ಹಿಂತಿರುಗಿಸುವಂತೆ ಕೇಳುತ್ತಿದ್ದರು ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: ಬ್ರಿಕ್ಸ್‌ ಶೃಂಗಸಭೆಗೆ ದೆಹಲಿಗೆ ಬಂದಿಳಿದ ಕ್ಸಿ ಜಿನ್‌ಪಿಂಗ್; ಕುತೂಹಲ ಕೆರಳಿಸಿದ ಭಾರತ-ಚೀನಾ ಮಾತುಕತೆ

ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ, ಪಟಾಕಿ ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೇನೆ: ಇನ್ಸ್​​ಪೆಕ್ಟರ್ ಧನಂಜಯ್ ಗೆ ಪ್ರತಾಪ್ ಸಿಂಹ ವಾರ್ನಿಂಗ್!

Ganesh Chaturthi: ಬೆಂಗಳೂರಿನಲ್ಲಿ ಈ ದಿನ ಮಾಂಸ ಮಾರಾಟ, ಪ್ರಾಣಿವಧೆ ಸಂಪೂರ್ಣ ನಿಷೇಧ! ಕಸಾಯಿಖಾನೆಗಳು ಬಂದ್

BRICS 2026: ವ್ಯಾಪಾರ ಏಕೀಕರಣಕ್ಕೆ ಒತ್ತಾಸೆ ಕೋರಿದ ಪ್ರಧಾನಿ ಮೋದಿ ಮೊದಲ ದಿನ ಹೇಳಿದ್ದೇನು?

ಪ್ರಿಯಕರನ ಜೊತೆ ಓಡಿಹೋದ ಪತ್ನಿ; ಪತ್ತೆಹಚ್ಚಿ ಮಾಜಿ ಪ್ರೇಮಿಯೊಂದಿಗೇ ಮದುವೆ ಮಾಡಿಸಿದ ಜವಾನ!