ಅಡ್ಡಾದಿಡ್ಡಿ ಓಡಿದ ಕುದುರೆಗಾಡಿ 
ದೇಶ

ನಿಯಂತ್ರಣ ತಪ್ಪಿ ಕುದುರೆ ಹುಚ್ಚಾಟ; ಕೆಳಗೆ ಬಿದ್ದ ಟಾಂಗಾ ಚಾಲಕ: ಬೈಕಸವಾರನಿಗೂ ಢಿಕ್ಕಿ, ಹಲವರಿಗೆ ಗಾಯ! Video

ಉಧಮ್ ಸಿಂಗ್ ನಗರದ ದಿನೇಶ್ ಪುರ್ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಟಾಂಗಾ ಗಾಡಿಯಲ್ಲಿ ಹೋಗುತ್ತಿದ್ದ ವೇಳೆ ಕುದುರೆ ವೇಗವಾಗಿ ಓಡಿದ್ದು, ಈ ವೇಳೆ ಟಾಂಗಾ ಚಾಲಕ ಗಾಡಿಯಿಂದ ಕೆಳಗೆ ಬಿದ್ದಿದ್ದಾನೆ.

ಡೆಹ್ರಾಡೂನ್: ಟಾಂಗಾ ಗಾಡಿಯೊಂದರ ಹುಚ್ಚಾಟಕ್ಕೆ ಹಲವರು ಗಾಯಗೊಂಡಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ನಡೆದಿದೆ.

ಉಧಮ್ ಸಿಂಗ್ ನಗರದ ದಿನೇಶ್ ಪುರ್ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಟಾಂಗಾ ಗಾಡಿಯಲ್ಲಿ ಹೋಗುತ್ತಿದ್ದ ವೇಳೆ ಕುದುರೆ ವೇಗವಾಗಿ ಓಡಿದ್ದು, ಈ ವೇಳೆ ಟಾಂಗಾ ಚಾಲಕ ಗಾಡಿಯಿಂದ ಕೆಳಗೆ ಬಿದ್ದಿದ್ದಾನೆ.

ಅತ್ತ ಚಾಲಕ ಕೆಳಗೆ ಬೀಳುತ್ತಲೇ ಕುದುರೆ ಹುಚ್ಚಾಪಟ್ಟೆ ಓಡಿದ್ದು ಈ ವೇಳೆ ಹಲವು ಗಾಡಿಗಳಿಗೆ ಢಿಕ್ಕಿಯಾಗಿದೆ. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಓರ್ವ ಬೈಕ್ ಸವಾರನಿಗೂ ಕುದುರೆ ಗಾಡಿ ಢಿಕ್ಕಿಯಾಗಿದ್ದು ಈ ವೇಳೆ ದ್ವಿಚಕ್ರ ವಾಹನ ಚಾಲಕ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ.

ಹಠಾತ್ ರಸ್ತೆಯಲ್ಲಿ ನಿಯಂತ್ರಣವಿಲ್ಲದೆ ಕುದುರೆಗಾಡಿ ಓಡಿದ್ದರಿಂದ ವಾಹನ ಸವಾರರಲ್ಲಿ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸಂಭವಿಸಿದ ಸರಣಿ ಡಿಕ್ಕಿಗಳಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಿಯಂತ್ರಣ ತಪ್ಪಿದ ಕುದುರೆಗಾಡಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡುವ ದೃಶ್ಯಗಳು ಗಮನ ಸೆಳೆದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: ಬ್ರಿಕ್ಸ್‌ ಶೃಂಗಸಭೆಗೆ ದೆಹಲಿಗೆ ಬಂದಿಳಿದ ಕ್ಸಿ ಜಿನ್‌ಪಿಂಗ್; ಕುತೂಹಲ ಕೆರಳಿಸಿದ ಭಾರತ-ಚೀನಾ ಮಾತುಕತೆ

ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ, ಪಟಾಕಿ ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೇನೆ: ಇನ್ಸ್​​ಪೆಕ್ಟರ್ ಧನಂಜಯ್ ಗೆ ಪ್ರತಾಪ್ ಸಿಂಹ ವಾರ್ನಿಂಗ್!

Ganesh Chaturthi: ಬೆಂಗಳೂರಿನಲ್ಲಿ ಈ ದಿನ ಮಾಂಸ ಮಾರಾಟ, ಪ್ರಾಣಿವಧೆ ಸಂಪೂರ್ಣ ನಿಷೇಧ! ಕಸಾಯಿಖಾನೆಗಳು ಬಂದ್

BRICS 2026: ವ್ಯಾಪಾರ ಏಕೀಕರಣಕ್ಕೆ ಒತ್ತಾಸೆ ಕೋರಿದ ಪ್ರಧಾನಿ ಮೋದಿ ಮೊದಲ ದಿನ ಹೇಳಿದ್ದೇನು?

ಪ್ರಿಯಕರನ ಜೊತೆ ಓಡಿಹೋದ ಪತ್ನಿ; ಪತ್ತೆಹಚ್ಚಿ ಮಾಜಿ ಪ್ರೇಮಿಯೊಂದಿಗೇ ಮದುವೆ ಮಾಡಿಸಿದ ಜವಾನ!