ಪ್ರಧಾನಿ ಮೋದಿ ಭೇಟಿ ಮಾಡಿದ ಸ್ಕೂಲ್‌ಮೇಟ್ 
ದೇಶ

ಪ್ರಧಾನಿ ಮೋದಿ ಭೇಟಿ ಮಾಡಿದ ಸ್ಕೂಲ್‌ಮೇಟ್; ಭೂ ವಿವಾದದ ಬಗ್ಗೆ CBI ತನಿಖೆಗೆ ಮನವಿ!

ವೋಹ್ರಾ ಮತ್ತು ಪ್ರಧಾನಿ ಮೋದಿ ಗುಜರಾತ್‌ನ ವಡ್ನಗರದಲ್ಲಿರುವ ಬಿಎನ್ ಶಾಲೆಯಲ್ಲಿ ಕ್ಲಾಸ್ ಮೇಟ್ ಗಳಾಗಿದ್ದರು ಎಂದು ವರದಿಯಾಗಿದೆ.

ನವದೆಹಲಿ: ಸ್ಕೂಲ್‌ಮೇಟ್ ಹಾಗೂ ಬಾಲ್ಯದ ಗೆಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಮುಂಬೈನ ಭಯಂದರ್ ಪೂರ್ವದಲ್ಲಿ ದಶಕಗಳಷ್ಟು ಹಳೆಯದಾದ ಭೂ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಮೀರಾ ರಸ್ತೆಯ 81 ವರ್ಷದ ಅಸ್ಗರಲಿ ವೋಹ್ರಾ ಅವರು ಸೆಪ್ಟೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಭೂ ವಿವಾದದ ಬಗ್ಗೆ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಯಿಂದ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ವೋಹ್ರಾ ಮತ್ತು ಪ್ರಧಾನಿ ಮೋದಿ ಗುಜರಾತ್‌ನ ವಡ್ನಗರದಲ್ಲಿರುವ ಬಿಎನ್ ಶಾಲೆಯಲ್ಲಿ ಕ್ಲಾಸ್ ಮೇಟ್ ಗಳಾಗಿದ್ದರು ಎಂದು ವರದಿಯಾಗಿದೆ.

ವೋಹ್ರಾ ಅವರು ಪ್ರಧಾನಿ ಮೋದಿಯ ಭೇಟಿಯ ಸಂದರ್ಭದಲ್ಲಿ, ಹಲವು ವರ್ಷಗಳಿಂದ ಬಾಕಿ ಇರುವ ಭೂ ವಿವಾದದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಭಯಂದರ್ ಪೂರ್ವದ ನವ್‌ಘರ್‌ನಲ್ಲಿರುವ ಸುಮಾರು 2,810 ಚದರ ಮೀಟರ್‌ಗಳಷ್ಟು ಭೂಮಿಗೆ ಸಂಬಂಧಿಸಿದ ವಿವಾದ ಇದಾಗಿದೆ. 1989ರಲ್ಲಿ ನೋಂದಾಯಿತ ಒಪ್ಪಂದದ ಮೂಲಕ ಆ ಆಸ್ತಿಯನ್ನು ಖರೀದಿಸಿದ್ದಾಗಿ ಅವರು ಹೇಳಿದ್ದಾರೆ.

ನಂತರದ ದಿನಗಳಲ್ಲಿ, ಅಂದರೆ 2011ರಲ್ಲಿ, ಈ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಆರೋಪಿಸಿದ್ದಾರೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನಕಲಿ ಮಾಡಲಾಗಿದೆ. ಈ ಬೆಳವಣಿಗೆಗಳ ಬಗ್ಗೆ ಮೂಲ ಮಾಲೀಕರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದೂ ವೋಹ್ರಾ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಿ.ನರಸೀಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ: ಆರ್ ಅಶೋಕ್, ಯದುವೀರ್, ಪ್ರತಾಪ್ ಸಿಂಹ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

2029ಕ್ಕೂ ಮುನ್ನ NDA ಸರ್ಕಾರವಿರುವ ಎಲ್ಲಾ 21 ರಾಜ್ಯಗಳಲ್ಲಿ UCC ಜಾರಿ: ಗೃಹ ಸಚಿವ ಅಮಿತ್ ಶಾ

"ಇಂತಹ ಆಟಗಾರರನ್ನು ಇಟ್ಟುಕೊಂಡು ಏನು ಮಾಡುತ್ತಿದ್ದಾರೆ?"; ಪಾಕಿಸ್ತಾನ ಕ್ರಿಕೆಟ್‌ ತಂಡದ ಸ್ಥಿತಿ ಕಂಡು Dinesh Karthik ಗರಂ

ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರ್ತೀನಿ: ಹಿಂದೂಗಳ ತಂಟೆಗೆ ಹೋದರೆ ಹುಷಾರ್: ಸರ್ಕಾರಕ್ಕೆ ಅಶೋಕ್ ವಾರ್ನಿಂಗ್

'ತಾಕತ್ತಿದ್ದರೆ ಟ್ರೈ ಮಾಡು ಮಗ, ಆಲ್ ದಿ ಬೆಸ್ಟ್ ರಣಹೇಡಿ': ಪೊಲೀಸ್ ಠಾಣೆಗೆ ನುಗ್ಗುತ್ತೇನೆ ಎಂದ ಪ್ರತಾಪ್ ಸಿಂಹಗೆ ಪ್ರದೀಪ್ ಈಶ್ವರ್ ಚಾಲೆಂಜ್!