ಲಿಫ್ಟ್ ನಲ್ಲಿ ಮಹಿಳೆಯರ ಕಿತ್ತಾಟ 
ದೇಶ

‘ನಾಯಿಯನ್ನು ಲಿಫ್ಟ್‌ಗೆ ಕರೆತರಬೇಡಿ’ ಎಂದಿದ್ದಕ್ಕೆ ಜಗಳ; ಶಿಕ್ಷಕಿಗೆ ಮಹಿಳೆಯಿಂದ ಹಲ್ಲೆ, Video Viral

ಇಂದಿರಾಪುರಂನ ಶಾಲೆಯಿಂದ ಮನೆಗೆ ಮರಳುತ್ತಿದ್ದ ಶಿಕ್ಷಕಿ ಹಿನಾ ಬಾರಿ ಅವರು ಸೊಸೈಟಿಯ ಲಿಫ್ಟ್‌ಗೆ ಪ್ರವೇಶಿಸಿದಾಗ, ಶ್ವೇತಾ ಸುಬೆ ಎಂಬ ಮಹಿಳೆ ತನ್ನ ಸಾಕು ನಾಯಿಯೊಂದಿಗೆ ಲಿಫ್ಟ್‌ನಲ್ಲಿದ್ದರು.

ಗಾಜಿಯಾಬಾದ್: ಸಾಕು ನಾಯಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯುವ ವಿಚಾರಕ್ಕೆ ಆರಂಭವಾದ ಜಗಳವೊಂದು ಹಲ್ಲೆಗೆ ತಿರುಗಿದ ಘಟನೆ ಗಾಜಿಯಾಬಾದ್‌ನ ರಾಜ್‌ನಗರ್ ಎಕ್ಸ್‌ಟೆನ್ಶನ್‌ನ ವಿಂಡ್ಸರ್ ಪ್ಯಾರಡೈಸ್ ಸೊಸೈಟಿಯಲ್ಲಿ ನಡೆದಿದೆ.

ಶಾಲಾ ಶಿಕ್ಷಕಿಯೊಬ್ಬರ ಮೇಲೆ ಇಲ್ಲಿನ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಸೆಪ್ಟೆಂಬರ್ 12ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಈ ಘಟನೆ ನಡೆದಿದೆ.

ಇಂದಿರಾಪುರಂನ ಶಾಲೆಯಿಂದ ಮನೆಗೆ ಮರಳುತ್ತಿದ್ದ ಶಿಕ್ಷಕಿ ಹಿನಾ ಬಾರಿ ಅವರು ಸೊಸೈಟಿಯ ಲಿಫ್ಟ್‌ಗೆ ಪ್ರವೇಶಿಸಿದಾಗ, ಶ್ವೇತಾ ಸುಬೆ ಎಂಬ ಮಹಿಳೆ ತನ್ನ ಸಾಕು ನಾಯಿಯೊಂದಿಗೆ ಲಿಫ್ಟ್‌ನಲ್ಲಿದ್ದರು.

ಹಿನಾ ಬಾರಿ ನೀಡಿರುವ ದೂರಿನ ಪ್ರಕಾರ, ಶ್ವೇತಾ ಅವರು ಇತರ ನಿವಾಸಿಗಳಿಗೆ ಲಿಫ್ಟ್‌ಗೆ ಪ್ರವೇಶಿಸಲು ಅವಕಾಶ ನೀಡುತ್ತಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ.

ಲಿಫ್ಟ್ ನಲ್ಲೇ ಪರಸ್ಪರ ಜಗಳ

ಈ ವೇಳೆ ಇಬ್ಬರೂ ಮಹಿಳೆಯರು ಪರಸ್ಪರ ವಾಗ್ವಾದ ನಡೆಸುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಮಾತಿನ ಚಕಮಕಿ ತೀವ್ರಗೊಂಡ ಬಳಿಕ ಓರ್ವ ಮಹಿಳೆ ಮತ್ತೊಬ್ಬರ ಮೇಲೆ ಕೋಲಿನಿಂದ ಹೊಡೆದು, ಬಳಿಕ ಕಪಾಳಕ್ಕೆ ಬಾರಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಮತ್ತೊಬ್ಬ ಮಹಿಳೆಯೂ ಹಲ್ಲೆ ನಡೆಸಿದ್ದು, ಇಬ್ಬರ ನಡುವೆ ಹೊಡೆದಾಟ ನಡೆದಿದೆ. ಲಿಫ್ಟ್‌ನ ಹೊರಗಿದ್ದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದ್ದಾರೆ.

ಪೊಲೀಸ್ ದೂರು ದಾಖಲು

ಘಟನೆಯ ಬಳಿಕ ಹಿನಾ ಬಾರಿ ಅವರು ನಂದಗ್ರಾಮ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ, ಆರೋಪಿತ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ವಿವರ ತನಿಖೆಯಿಂದ ಹೊರಬರಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮುಂದಿನ ದಿನಗಳಲ್ಲಿ ರಾಜ್ಯ ತೀವ್ರ ಬರಗಾಲ, ನೀರು ಮತ್ತು ವಿದ್ಯುತ್‌ ಕೊರತೆ ಎದುರಿಸಲಿದೆ: ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಸೌದಿ ಅರೇಬಿಯಾದಲ್ಲಿ ಮುಂದುವರೆದ ಹೌತಿ ಉಗ್ರರ ಅಟ್ಟಹಾಸ; ಕ್ಷಿಪಣಿ ದಾಳಿ ತೀವ್ರ, ದಕ್ಷಿಣ ಭಾಗದಲ್ಲಿ ಭಾರೀ ಸ್ಫೋಟ!

‘ನನ್ನನ್ನು ಬೆನ್ನಟ್ಟಿದರು, ಕೊನೆಗೆ ಡಿಕ್ಕಿ ಹೊಡೆದರು’: Road Rage, ಕಾರು ಚಾಲಕನ ಕರಾಳ ಮುಖ ಬಯಲು ಮಾಡಿದ ಮಹಿಳಾ ಬೈಕ್ ರೈಡರ್! Video

‘ಧರ್ಮಕ್ಕಿಂತ ಮಾನವೀಯತೆ ಮುಖ್ಯ’: 18 ವರ್ಷಗಳಿಂದ ಗಣೇಶೋತ್ಸವಕ್ಕೆ ಮುಸ್ಲಿಂ ಮಹಿಳೆ ಸಾರಥ್ಯ, ಹೋಮ-ಹವನಗಳಲ್ಲಿ ಭಾಗಿ

ಕೊನೆಗೂ ಮಾಜಿ ಸಿಎಂ ಸಿದ್ದರಾಮಯ್ಯ ಕನಸು ನನಸು; ಶಾಸ್ತ್ರೋಕ್ತವಾಗಿ ನೆರವೇರಿದ ಗೃಹ ಪ್ರವೇಶ!