ಸಂಗ್ರಹ ಚಿತ್ರ online desk
ದೇಶ

ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಢಿಕ್ಕಿ; ಇಸ್ಲಾಮಾಬಾದ್‌ನ ಉನ್ನತ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್

ಡಿಕ್ಕಿಗೆ ಕಾರಣವಾದ ಪಾಕಿಸ್ತಾನಿ ನೌಕಾಪಡೆಯ ಘಟಕಗಳ "ಅಂಗೀಕರಿಸಲಾಗದ ಮತ್ತು ವೃತ್ತಿಪರವಲ್ಲದ ನಡವಳಿಕೆ"ಯನ್ನು ಗಮನಕ್ಕೆ ತರಲು, ವಿದೇಶಾಂಗ ಸಚಿವಾಲಯ ಪಾಕಿಸ್ತಾನದ ಹೈಕಮಿಷನ್‌ನ 'ಚಾರ್ಜ್ ಡಿ ಅಫೇರ್ಸ್' (ತಾತ್ಕಾಲಿಕ ಮುಖ್ಯಸ್ಥ) ಅವರನ್ನು ಕರೆಸಿಕೊಂಡಿತು.

ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಪಾಕಿಸ್ತಾನದ ನೌಕಾಪಡೆಯ ಹಡಗೊಂದು ಭಾರತೀಯ ನೌಕಾಪಡೆಯ ಹಡಗಿಗೆ ಡಿಕ್ಕಿ ಹೊಡೆದಿದ್ದು, ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಡಿಕ್ಕಿಗೆ ಕಾರಣವಾದ ಪಾಕಿಸ್ತಾನಿ ನೌಕಾಪಡೆಯ ಘಟಕಗಳ "ಅಂಗೀಕರಿಸಲಾಗದ ಮತ್ತು ವೃತ್ತಿಪರವಲ್ಲದ ನಡವಳಿಕೆ"ಯನ್ನು ಗಮನಕ್ಕೆ ತರಲು, ವಿದೇಶಾಂಗ ಸಚಿವಾಲಯ ಪಾಕಿಸ್ತಾನದ ಹೈಕಮಿಷನ್‌ನ 'ಚಾರ್ಜ್ ಡಿ ಅಫೇರ್ಸ್' (ತಾತ್ಕಾಲಿಕ ಮುಖ್ಯಸ್ಥ) ಅವರನ್ನು ಕರೆಸಿಕೊಂಡಿತು.

ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆದ ಈ ಘಟನೆಯಿಂದ ಯಾವುದೇ ದೊಡ್ಡ ಹಾನಿ ಸಂಭವಿಸದಿದ್ದರೂ, ಪಾಕಿಸ್ತಾನಿ ನೌಕಾಪಡೆಯ ಹಡಗಿನ ನಡವಳಿಕೆಯು ಏಪ್ರಿಲ್ 1991ರ 'ಸೇನಾ ಕವಾಯತುಗಳು, ತಾಲೀಮುಗಳು ಮತ್ತು ಪಡೆಗಳ ಚಲನವಲನಗಳ ಕುರಿತಾದ ಮುಂಚಿತ ಸೂಚನೆಗೆ ಸಂಬಂಧಿಸಿದ ಭಾರತ-ಪಾಕಿಸ್ತಾನ ಒಪ್ಪಂದ'ದ 10ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

"ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು, ಎಲ್ಲಾ ಸೇನಾ ಘಟಕಗಳು ಸೂಕ್ತ ಎಚ್ಚರಿಕೆ ವಹಿಸಬೇಕು ಮತ್ತು ಉಭಯ ದೇಶಗಳ ನಡುವಿನ ಸಂಬಂಧಿತ ಒಪ್ಪಂದಗಳ ನಿಬಂಧನೆಗಳನ್ನು ಗೌರವಿಸಬೇಕು ಎಂಬ ವಿಷಯವನ್ನು ಸಂಬಂಧಪಟ್ಟ ಪಾಕಿಸ್ತಾನಿ ಅಧಿಕಾರಿಗಳಿಗೆ ತಿಳಿಸುವಂತೆ ಪಾಕಿಸ್ತಾನದ 'ಚಾರ್ಜ್ ಡಿ ಅಫೇರ್ಸ್' ಅವರಿಗೆ ಸೂಚಿಸಲಾಯಿತು," ಎಂದು ಅದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅತಿದೊಡ್ಡ ಲೋಕಾಯುಕ್ತ ದಾಳಿ: ಭೂ ದಾಖಲೆ ತಿದ್ದುಪಡಿಗೆ ಬರೋಬ್ಬರಿ 50 ಲಕ್ಷ ರೂ.ಲಂಚ; ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರ್!

ಬದಲಾಗುತ್ತಿರುವ ಜಗತ್ತಿನ ನಡುವೆ ನಡೆದ ಬ್ರಿಕ್ಸ್ ಸಭೆಯಲ್ಲಿನ ಕಥೆ! (ಹಣಕ್ಲಾಸು)

ಅಮೆರಿಕಾ ಸುಂಕದ ಬೆದರಿಕೆಗೆ ಜಗ್ಗದ ಭಾರತ: 140 ಕೋಟಿ ಜನರ ಹಿತಾಸಕ್ತಿ ಮುಖ್ಯ, ಇಂಧನ ಭದ್ರತೆ ಕಾಪಾಡಲು ಅಗತ್ಯ ಕ್ರಮ ಎಂದ MEA

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಜಕೀಯ ನಾಯಕರಿಂದ ಶುಭಾಶಯ, ‘ವಿಶ್ವದ ಅತ್ಯಂತ ಜನಪ್ರಿಯ ನಾಯಕ’ ಎಂದು ಬಣ್ಣನೆ..!

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ, ಮುಂದುವರೆದ ಕಾರ್ಯಾಚರಣೆ..!