ಗಣೇಶ ವಿಸರ್ಜನೆಯಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್  online desk
ದೇಶ

ಗಣಪತಿ ವಿಸರ್ಜನೆ: ಉಲ್ಟಾ ಆರತಿ ಮಾಡಿದ ಸಲ್ಮಾನ್ ಖಾನ್; ಸರಿಪಡಿಸಿದ ತಂಗಿ ಅರ್ಪಿತಾ: ವಿಡಿಯೋ ವೈರಲ್

ಇಲಿಯಾ ವಂಟೂರ್ ಕೂಡ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಲ್ಮಾನ್ ಖಾನ್ ನಂತರ ಆರತಿ ಮಾಡಿದರು. ಇಲಿಯಾ ಹಳದಿ ಬಣ್ಣದ ಅನಾರ್ಕಲಿ ಸೂಟ್‌ ಧರಿಸಿದ್ದರು.

ಮುಂಬೈ: ಮುಂಬೈ ನಲ್ಲಿ ಸೆಲಬ್ರಿಟಿಗಳು ಈ ಬಾರಿ ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ. ಗಣೇಶ ವಿಸರ್ಜನೆಯ ವಿಡಿಯೋ ಗಳು ಎಲ್ಲೆಡೆ ವೈರಲ್ ಆಗುತ್ತಿವೆ.

ಇನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಎಂದಿನಂತೆ ಈ ವರ್ಷವೂ ಗಣೇಶ ಹಬ್ಬದಲ್ಲಿ ತೊಡಗಿಸಿಕೊಂಡಿದ್ದರು. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಲ್ಮಾನ್ ಖಾನ್ ಉಲ್ಟಾ ಆರತಿ ಮಾಡಿರುವ ಆರತಿಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.

ಸಲ್ಮಾನ್ ಖಾನ್ ಉಲ್ಟಾ ಆರತಿ ಮಾಡುತ್ತಿರುವುದನ್ನು ಕಂಡ ತಕ್ಷಣವೇ ಅವರ ತಂಗಿ ಅರ್ಪಿತಾ ಇದನ್ನು ಸರಿಪದಿಸಿದ್ದಾರೆ. ಸಲ್ಮಾನ್ ಖಾನ್ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರಿಯಾಗಿ ಆರತಿ ಬೆಳಗಿದ್ದಾರೆ. ಅರ್ಪಿತಾ ನಡೆ ಮತ್ತು ಸಲ್ಮಾನ್ ಖಾನ್ ಪ್ರತಿಕ್ರಿಯೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಮಂಗಳವಾರ ತಮ್ಮ ಸಹೋದರ ಸೊಹೈಲ್ ಖಾನ್ ಅವರ ನಿವಾಸದಲ್ಲಿ ಕುಟುಂಬದೊಂದಿಗೆ ಗಣಪತಿ ವಿಸರ್ಜನೆಯಲ್ಲಿ ಭಾಗಿಯಾಗಿದ್ದರು. ಈ ಆಚರಣೆಯಲ್ಲಿ ಸಲ್ಮಾನ್ ಖಾನ್ ಗೆಳತಿ ಇಲಿಯಾ ವಂಟೂರ್ ಕೂಡ ಜೊತೆಯಾಗಿದ್ದರು.

ಇಲಿಯಾ ವಂಟೂರ್ ಕೂಡ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಲ್ಮಾನ್ ಖಾನ್ ನಂತರ ಆರತಿ ಮಾಡಿದರು. ಇಲಿಯಾ ಹಳದಿ ಬಣ್ಣದ ಅನಾರ್ಕಲಿ ಸೂಟ್‌ ಧರಿಸಿದ್ದರು.

ನೆಟ್ಟಿಗರ ಪ್ರತಿಕ್ರಿಯೆ

"ಅರ್ಪಿತಾ ಮಾತ್ರ ಸಲ್ಮಾನ್ ಖಾನ್ ಅವರನ್ನು ತಿದ್ದಲು ಸಾಧ್ಯ", "ಸಹೋದರಿಯರು ಇರುವುದೇ ಇದಕ್ಕಾಗಿ, ತಮ್ಮ ಸಹೋದರರಿಗೆ ಹೇಳಿಕೊಡಲು" "ಸಹೋದರರು ತಮ್ಮ ಸಹೋದರಿಯರ ಮಾತನ್ನು ಮಾತ್ರ ಕೇಳುತ್ತಾರೆ" ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅತಿದೊಡ್ಡ ಲೋಕಾಯುಕ್ತ ದಾಳಿ: ಭೂ ದಾಖಲೆ ತಿದ್ದುಪಡಿಗೆ ಬರೋಬ್ಬರಿ 50 ಲಕ್ಷ ರೂ.ಲಂಚ; ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರ್!

ಬದಲಾಗುತ್ತಿರುವ ಜಗತ್ತಿನ ನಡುವೆ ನಡೆದ ಬ್ರಿಕ್ಸ್ ಸಭೆಯಲ್ಲಿನ ಕಥೆ! (ಹಣಕ್ಲಾಸು)

ಅಮೆರಿಕಾ ಸುಂಕದ ಬೆದರಿಕೆಗೆ ಜಗ್ಗದ ಭಾರತ: 140 ಕೋಟಿ ಜನರ ಹಿತಾಸಕ್ತಿ ಮುಖ್ಯ, ಇಂಧನ ಭದ್ರತೆ ಕಾಪಾಡಲು ಅಗತ್ಯ ಕ್ರಮ ಎಂದ MEA

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಜಕೀಯ ನಾಯಕರಿಂದ ಶುಭಾಶಯ, ‘ವಿಶ್ವದ ಅತ್ಯಂತ ಜನಪ್ರಿಯ ನಾಯಕ’ ಎಂದು ಬಣ್ಣನೆ..!

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ, ಮುಂದುವರೆದ ಕಾರ್ಯಾಚರಣೆ..!