ನವಜಾತ ಶಿಶುಗಳ ವಿಶೇಷ ನಿಗಾ ಘಟಕ. 
ದೇಶ

ತೆಲಂಗಾಣದಲ್ಲಿ ಭೀಕರ ಅಗ್ನಿ ದುರಂತ: ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ನಿಗಾ ಘಟಕದಲ್ಲಿ ಭಾರೀ ಬೆಂಕಿ, 3 ಕಂದಮ್ಮಗಳ ದಾರುಣ ಸಾವು..!

ದುರದೃಷ್ಟವಶಾತ್, ದಟ್ಟವಾದ ಹೊಗೆಯನ್ನು ಉಸಿರಾಡಿದ ಕಾರಣ ಮೂರು ಶಿಶುಗಳು ಸಾವನ್ನಪ್ಪಿವೆ. ಐದು ದಿನದ ಒಂದು ಮಗು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಂದು ಮಗು ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಅದಿಲಾಬಾದ್: ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಘೋರ ದುರಂತವೊಂದು ಸಂಭವಿಸಿದೆ. ಇಲ್ಲಿನ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS) ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ವಿಶೇಷ ನಿಗಾ ಘಟಕದಲ್ಲಿ (SNCU) ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂರು ನವಜಾತ ಶಿಶುಗಳು ಉಸಿರುಗಟ್ಟಿ ಸಾವನ್ನಪ್ಪಿವೆ.

ಸೋಮವಾರ ತಡರಾತ್ರಿ ಸುಮಾರು 11:30 ರ ವೇಳೆಗೆ ಈ ಘಟನೆ ನಡೆದಿದೆ. ವಾರ್ಡ್‌ನಲ್ಲಿದ್ದ ಹವಾನಿಯಂತ್ರಣ ಯಂತ್ರ (AC) ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸ್ಫೋಟಗೊಂಡಿದೆ ಎನ್ನಲಾಗಿದ್ದು, ತಕ್ಷಣವೇ ಇಡೀ ವಾರ್ಡ್ ದಟ್ಟ ಹೊಗೆ ಮತ್ತು ಜ್ವಾಲೆಯಿಂದ ಆವೃತವಾಗಿದೆ. ಘಟನೆ ನಡೆದ ಸಮಯದಲ್ಲಿ ವಾರ್ಡ್‌ನಲ್ಲಿ ಒಟ್ಟು 28 ನವಜಾತ ಶಿಶುಗಳಿದ್ದವು ಎಂದು ತಿಳಿದುಬಂದಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಮಕ್ಕಳನ್ನು ಬದುಕಿಸಲು ಪೋಷಕರು ಮತ್ತು ಆಸ್ಪತ್ರೆಯ ಸಿಬ್ಬಂದಿ ಸಮಯಪ್ರಜ್ಞೆ ಮೆರೆದಿದ್ದಾರೆ.

ವಾರ್ಡ್‌ನ ಕಿಟಕಿ ಗಾಜುಗಳನ್ನು ಒಡೆದು ಒಳಗೆ ನುಗ್ಗಿದ ಪೋಷಕರು, ಸಿಬ್ಬಂದಿಗಳು ಇನ್‌ಕ್ಯುಬೇಟರ್‌ಗಳಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ವೇಳೆ ಇಬ್ಬರು ದಾದಿಯರು (ನರ್ಸ್‌ಗಳು) ಸೇರಿದಂತೆ ಹಲವು ಸಿಬ್ಬಂದಿಗಳಿಗೆ ಸುಟ್ಟ ಗಾಯಗಳಾಗಿವೆ.

ದುರದೃಷ್ಟವಶಾತ್, ದಟ್ಟವಾದ ಹೊಗೆಯನ್ನು ಉಸಿರಾಡಿದ ಕಾರಣ ಮೂರು ಶಿಶುಗಳು ಸಾವನ್ನಪ್ಪಿವೆ. ಐದು ದಿನದ ಒಂದು ಮಗು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಂದು ಮಗು ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮೂರನೇ ಮಗು ಮಂಗಳವಾರ ಮುಂಜಾನೆ ಕೊನೆಯುಸಿರೆಳೆದಿದೆ.

ಉಳಿದ 25 ಶಿಶುಗಳನ್ನು ತಕ್ಷಣವೇ ಪಕ್ಕದ ವಾರ್ಡ್‌ಗಳಿಗೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿವೆ ಎಂದು ತಿಳಿದುಬಂದಿದೆ.

ಈ ನಡುವೆ ಜಿಲ್ಲಾಧಿಕಾರಿ ರಾಜರ್ಷಿ ಶಾ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. 25 ಶಿಶುಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆಸ್ಪತ್ರೆಯ ಇತರ ಭಾಗಗಳಿಗೆ ಹರಡದಂತೆ ಕ್ರಮ ಕೈಗೊಂಡರು. ಹೀಗಾಗಿ ಬೆಂಕಿಯನ್ನು ಮಕ್ಕಳ ವಾರ್ಡ್‌ನೊಳಗೇ ನಿಯಂತ್ರಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಏತನ್ಮಧ್ಯೆ ಘಟನೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿ ಎಂದು ಹೇಳಿದ ಅವರು, ಮೃತ ಮಕ್ಕಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಅವರು, ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ನಿರ್ದೇಶನ ನೀಡಿದರು.

ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದೇ ವೇಳೆ, ಬಿಆರ್‌ಎಸ್ ಆದಿಲಾಬಾದ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಜೋಗು ರಾಮಣ್ಣ ಕೂಡ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

ಹವಾನಿಯಂತ್ರಣ ಯಂತ್ರದ ನಿರ್ವಹಣೆ ಕುರಿತು ಆತಂಕಗಳಿದ್ದರೂ ಅದನ್ನು ಏಕೆ ಚಾಲನೆಯಲ್ಲಿಡಲಾಗಿತ್ತು ಎಂದು ಅವರು ಪ್ರಶ್ನಿಸಿದ್ದು, ಮೃತಪಟ್ಟ ಮಕ್ಕಳ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ 4 ನಾಲ್ಕು MLC ಸ್ಥಾನಗಳಿಗೆ ಚುನಾವಣೆ ಘೋಷಣೆ; ನಾಲ್ಕು ರಾಜ್ಯಗಳ 28 ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ ಆಯೋಗ

ಜಾಗತಿಕ ವ್ಯವಸ್ಥೆ ಒತ್ತಡದಲ್ಲಿದೆ, ಬಹುಪಕ್ಷೀಯತೆಗೆ ಸುಧಾರಣೆ ಅಗತ್ಯ: ವಿಶ್ವಸಂಸ್ಥೆಯಲ್ಲಿ ಜೈಶಂಕರ್ ಕರೆ

'ಚೀಟಿಂಗ್ ಸಮರ್ಥಿಸುತ್ತಿಲ್ಲ.. ಆದ್ರೆ ವ್ಯವಸ್ಥೆ ಸರಿಯಾಗಬೇಕು, ಸಾಹಿಲ್ ಸಾವಿಗೆ ನ್ಯಾಯಬೇಕು': ಪ್ರತಿಭಟನಾ ನಿರತ IIT Bombay ವಿದ್ಯಾರ್ಥಿಗಳು!

ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದ ಅಮೆರಿಕಾ ಅಧ್ಯಕ್ಷ; ಶ್ವೇತಭವನದಿಂದ 24/7 ‘ಟ್ರಂಪ್ ಟಿವಿ’ ಸ್ಟ್ರೀಮಿಂಗ್ ಆರಂಭ..!

ಕಸ್ತೂರಿರಂಗನ್ ವರದಿ ಗದ್ದಲ: ಮೇಲ್ಮನೆಯಲ್ಲಿ ಸತತ 10 ಗಂಟೆಗಳ ಮಹಾ ಚರ್ಚೆ; ಸರ್ಕಾರದ ನಿಲುವೇನು..?