ಮಮತಾ ಬ್ಯಾನರ್ಜಿ online desk
ದೇಶ

CEC ಆಗಲು ಅನ್ ಫಿಟ್, ಜ್ಞಾನೇಶ್ ಕುಮಾರ್​ರನ್ನು ತಕ್ಷಣ ಬಂಧಿಸಿ; ಮತ್ತೆ ಚುನಾವಣೆ ನಡೆಸಿ: ಮಮತಾ ಬ್ಯಾನರ್ಜಿ

ಮುಖ್ಯ ಚುನಾವಣಾ ಆಯುಕ್ತ(CEC) ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಬಂಧಿಸಬೇಕು. ಅವರು ಸಿಇಸಿ ಆಗಲು ಅನ್ ಫಿಟ್ ಎಂದು ತೃಣಮೂಲ ಕಾಂಗ್ರೆಸ್(AITC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ದೇಶಾದ್ಯಂತ ಜಾರಿಯಲ್ಲಿರುವ ವಿಶೇಷ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆ(SIR), ಕೇಂದ್ರೀಕೃತ ಐಟಿ ನಿಯಂತ್ರಣ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತ ಚುನಾವಣಾ ಆಯೋಗದ(ECI) ಮುಖ್ಯಸ್ಥರು ಹಾಗೂ ಸದಸ್ಯರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಮತ್ತು ಅಸಮಾಧಾನ ಇದೆ ಎಂಬ ವರದಿಗಳ ಬೆನ್ನಲ್ಲೇ ಪ್ರತಿಪಕ್ಷಗಳು ಕೇಂದ್ರ ಚುನಾವಣಾ ಆಯೋಗ ವಿರುದ್ಧ ಮುಗಿಬಿದ್ದಿವೆ.

ಮುಖ್ಯ ಚುನಾವಣಾ ಆಯುಕ್ತ(CEC) ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಬಂಧಿಸಬೇಕು. ಅವರು ಸಿಇಸಿ ಆಗಲು ಅನ್ ಫಿಟ್ ಎಂದು ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್(AITC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, 'ವಿಶೇಷ ಸಮಗ್ರ ಪರಿಷ್ಕರಣೆ'(SIR) ಪ್ರಕ್ರಿಯೆ ನಡೆದ ನಂತರ ಭಾರತೀಯ ಜನತಾ ಪಕ್ಷ(BJP) ಜಯಗಳಿಸಿದ ರಾಜ್ಯಗಳಲ್ಲಿ, ಎಸ್ಐಆರ್ ಗೂ ಮುನ್ನ ಇದ್ದ ಮತದಾರರ ಪಟ್ಟಿಯ ಆಧಾರದ ಮೇಲೆ ಮರುಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

"ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಬಂಧಿಸಬೇಕು ಮತ್ತು ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಬಿಜೆಪಿ ಮತ್ತು ಜ್ಞಾನೇಶ್ ಕುಮಾರ್ ಒಂದು ರೀತಿಯ 'ಜಂಟಿ ಉದ್ಯಮ'(ಜಂಟಿ ಪಾಲುದಾರಿಕೆಯ)ದಂತಿದ್ದಾರೆ. 'ಆಡಳಿತ ಪಕ್ಷದಿಂದ ವಿಶೇಷ ಪ್ರೋತ್ಸಾಹ', ಮತಗಳ ಲೂಟಿ ಮತ್ತು ಮತ ಎಣಿಕೆ ಕೇಂದ್ರಗಳ ವಶಕ್ಕೆ ಪಡೆಯುವಂತಹ ಕೃತ್ಯಗಳ ಹಿಂದಿನ ರೂವಾರಿ ಅವರೇ ಆಗಿದ್ದರು. ಇಂತಹ ಹಗರಣವನ್ನು ನಾನು ಎಂದಿಗೂ ನೋಡಿಲ್ಲ" ಎಂದು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.

ಪೇಸ್​ಬುಕ್​ನಲ್ಲಿ ವಿಡಿಯೋ ಪೋಸ್ಟ್ ಹಾಕಿರುವ ಮಮತಾ, ಬಿಜೆಪಿ ಮತ್ತು ಚುನಾವಣಾ ಆಯೋಗ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಲೂಟಿ ಮಾಡಿದೆ ಎಂಬುದು ಈಗ ಸಾಬೀತಾಗಿದೆ. ತಕ್ಷಣ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಸಂವಿಧಾನವನ್ನು ನಾಶಪಡಿಸಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು. ಅವರು ಪ್ರಜಾಪ್ರಭುತ್ವವನ್ನು ಧ್ವಂಸ ಮಾಡಲು ಸಾಧ್ಯವಿಲ್ಲ. ನಾವು ಈ ಹಿಂದೆ ಹೇಳಿದ್ದ ವಿಷಯ ಈಗ ಬಹಿರಂಗಗೊಂಡಿದೆ. ಜ್ಞಾನೇಶ್ ಕುಮಾರ್ ಅವರು ಪೊಲೀಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮತ್ತು ಬಿಜೆಪಿಯೊಂದಿಗೆ ಸೇರಿ ತಮ್ಮದೇ ಆದ ಬಿಜೆಪಿ ಪರ ಮನಸ್ಥಿತಿಯ ವ್ಯಕ್ತಿಗಳನ್ನು ಇಆರ್​ಓಗಳಾಗಿ ನಿಯೋಜಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಆಯೋಗದ ಹೆಸರಿನಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ತಮಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳ ಅವಧಿಯಲ್ಲಿ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಿದ್ದರು ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆ ಮೆಂಟಲ್ ಬಗ್ಗೆ ನನ್ನ ಕೇಳಬೇಡ್ರಿ: ನೀವ್ಯಾಕೆ ದಿನಾ ಆ ವ್ಯಕ್ತಿಗೆ ಮೈಕ್ ಇಡೀತೀರಾ: ಮಾಧ್ಯಮ ವಿರುದ್ಧ ಪ್ರತಾಪ್ ಸಿಂಹ ಗರಂ!

ಸದನದಲ್ಲೇ ಕಾಂಗ್ರೆಸ್ ಶಾಸಕರ ನಡುವೆ ಜಟಾಪಟಿ; ಅನಿರೀಕ್ಷಿತ ಹೈಡ್ರಾಮಾ: 'ಸುಮ್ನಿರಮ್ಮಾ, ಹೊಡಿಬೇಡ' ಎಂದ ಆರ್ ಅಶೋಕ್!

ಕೊಲೆ ಆರೋಪಿ ನಟ ದರ್ಶನ್​​ಗೆ ಮತ್ತೊಂದು ಶಾಕ್: ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ!

India Rich List 2026: ಮುಕೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಗೌತಮ್ ಅದಾನಿ, ಭಾರತದ ಅತ್ಯಂತ ಶ್ರೀಮಂತ!

ಆಂಧ್ರದಲ್ಲಿ ಭೀಕರ ದುರಂತ: ಹಳಿ ಮೇಲೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ರೈಲು ಢಿಕ್ಕಿ; 4 ಸಾವು, ಓರ್ವ ಗಂಭೀರ! Video