DJ ಸೌಂಡ್‌ಗೆ ಕಂಪಿಸಿದ ಶಾಲೆ: ಕುಸಿದು ಬಿದ್ದ 2ನೇ ತರಗತಿ ಬಾಲಕಿ ಸಾವು 
ದೇಶ

DJ ಸೌಂಡ್‌ಗೆ ಕಂಪಿಸಿದ ಶಾಲೆ: ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದ 2ನೇ ತರಗತಿ ಬಾಲಕಿ ಸಾವು! video

ಬಾಲಕಿ ಸಾವಿಗೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಹಾಕಲಾಗಿದ್ದ ಡಿಜೆ ಸೌಂಡ್ ಕಾರಣವಾಗಿರಬಹುದು ಎಂದು ಶಾಲಾ ಆಡಳಿತ ಮಂಡಳಿ ಆರೋಪಿಸಿದೆ.

ಬಲರಾಮ್‌ಪುರ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಹಾಕಲಾಗಿದ್ದ ಡಿಜೆ ಸೌಂಡ್ ಗೆ ಶಾಲೆಯೊಳಗಿದ್ದ 2ನೇ ತರಗತಿ ಬಾಲಕಿಯೊಬ್ಬಳು ಕುಸಿದು ಮೃತಪಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಉತ್ತರ ಪ್ರದೇಶದ ಬಲರಾಮ್‌ಪುರದಲ್ಲಿ ಈ ಘಟನೆ ನಡೆದಿದ್ದು ತರಗತಿಯಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಕುಳಿತಿದ್ದ 2ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.

ಬಾಲಕಿ ಸಾವಿಗೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಹಾಕಲಾಗಿದ್ದ ಡಿಜೆ ಸೌಂಡ್ ಕಾರಣವಾಗಿರಬಹುದು ಎಂದು ಶಾಲಾ ಆಡಳಿತ ಮಂಡಳಿ ಆರೋಪಿಸಿದೆ.

ಸೋನು ತಿವಾರಿ ಎಂಬುವವರ ಪುತ್ರಿ ಸೋಮವಾರ ಬೆಳಗ್ಗೆ ಸುಮಾರು 11 ಗಂಟೆಗೆ ಶಾಲೆಯ ಮೊದಲ ಮಹಡಿಯಲ್ಲಿರುವ 2ನೇ ತರಗತಿಯ ಕೊಠಡಿಯಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಇದ್ದಳು.

ಈ ವೇಳೆ ಶಾಲೆಯ ಮುಂಭಾಗದಿಂದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗಿದ್ದು, ಅದರಲ್ಲಿ ಅತ್ಯಂತ ಜೋರಾಗಿ DJ ಸಂಗೀತ ಹಾಕಲಾಗಿತ್ತು ಎಂದು ಹೇಳಲಾಗಿದೆ.

ಸಿಸಿಟಿವಿ ವಿಡಿಯೋ ವೈರಲ್

ಪ್ರಸ್ತುತ ಈ ಘಟನೆಯ ದೃಶ್ಯಗಳು ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಸುಮಾರು 3 ನಿಮಿಷ 2 ಸೆಕೆಂಡ್‌ಗಳ CCTV ದೃಶ್ಯದಲ್ಲಿ DJ ಸದ್ದು ತರಗತಿಯಲ್ಲಿ ಪ್ರತಿಧ್ವನಿಸಲು ಆರಂಭಿಸಿದ ಬಳಿಕ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗುವುದು ಕಾಣಿಸುತ್ತದೆ. ಕೆಲ ಮಕ್ಕಳು ಶಬ್ದ ಕೇಳಿ ಕಿಟಕಿ ಹಾಗೂ ಬಾಗಿಲಿನತ್ತ ನೋಡುತ್ತಾರೆ. ಇದೇ ವೇಳೆ ಬಾಲಕಿಗೆ ತೊಂದರೆಯಾಗುತ್ತಿರುವಂತೆ ದೃಶ್ಯದಲ್ಲಿ ಕಂಡುಬಂದಿದ್ದು, ಕೂಡಲೇ ಆಕೆ ಕುಸಿದು ಬೀಳುತ್ತಾಳೆ.

ಬಾಲಕಿ ಪೋಷಕರ ಆರೋಪ

ಡಿಜೆ ಸೌಂಡ್ ಸಂದರ್ಭದಲ್ಲಿ ಬಾಲಕಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಸತತವಾಗಿ ಮೂರು ಬಾರಿ ಹೃದಯಾಘಾತ ಸಂಭವಿಸಿದೆ. ಮೂರನೇ ಬಾರಿ ಹೃದಯಾಘಾತದ ಬಳಿಕ ಆಕೆಯ ಸ್ಥಿತಿ ಗಂಭೀರವಾಗಿದ್ದು, ಕೆಲವೇ ಸಮಯದಲ್ಲಿ ಮೃತಪಟ್ಟಿದ್ದಾಳೆ. ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಕುಟುಂಬ ತಿಳಿಸಿದೆ.

ಶಾಲೆಯೇ ಕಂಪಿಸಿತ್ತು

ಘಟನೆಯ ಸಂಪೂರ್ಣ ದೃಶ್ಯ ಶಾಲೆಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಶಾಲೆಯ ಆಡಳಿತಾಧಿಕಾರಿ ಆಶಿಷ್ ಉಪಾಧ್ಯಾಯ ತಿಳಿಸಿದ್ದಾರೆ. ಮೆರವಣಿಗೆಯಲ್ಲಿ DJ ಅನ್ನು ಅತ್ಯಂತ ಹೆಚ್ಚಿನ ಶಬ್ದದಲ್ಲಿ ಹಾಕಲಾಗಿತ್ತು. ಇದರಿಂದ ತರಗತಿಯಲ್ಲೂ ತೀವ್ರ ಕಂಪನ ಉಂಟಾಗಿದ್ದು, ಈ ದುರಂತ ಸಂಭವಿಸಿದೆ ಎಂದು ಅವರು ಆರೋಪಿಸಿದ್ದಾರೆ.

ತರಗತಿ ಶಿಕ್ಷಕಿ ಇಕ್ರಾ ಖಾನ್ ಮಾತನಾಡಿ, “ನಾನು ಇಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನಿನ್ನೆ ನಾನು ಪಾಠ ಮಾಡುತ್ತಿದ್ದಾಗ DJ ಮೆರವಣಿಗೆ ಬಂತು. ಶಬ್ದ ಅತ್ಯಂತ ಜೋರಾಗಿತ್ತು ಮತ್ತು ತರಗತಿಯೇ ಕಂಪಿಸುವಂತಾಗಿತ್ತು. ಆಗಲೇ ವಿದ್ಯಾರ್ಥಿನಿಗೆ ಮೊದಲ ಬಾರಿಗೆ ತೊಂದರೆ ಕಾಣಿಸಿಕೊಂಡಿತು. ಗಮನಕ್ಕೆ ಬಂದ ತಕ್ಷಣ ಇತರ ಶಿಕ್ಷಕರು ಬಂದರು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಪೋಷಕರೂ ಆಸ್ಪತ್ರೆಗೆ ಬಂದಿದ್ದರು” ಎಂದು ತಿಳಿಸಿದ್ದಾರೆ.

ಶಾಲೆಯ ಸಂಯೋಜಕಿ ಪುಮ್ಮಿ ಮಿಶ್ರಾ, “ಶಿಕ್ಷಕರು ನಮಗೆ ಕರೆ ಮಾಡಿದರು. ನಾವು ಮೇಲಕ್ಕೆ ಹೋದಾಗ ಮಗು ಪ್ರಜ್ಞಾಹೀನವಾಗಿ ಬಿದ್ದಿರುವುದು ಕಂಡಿತು. ಆಕೆಯ ಚಪ್ಪಲಿಗಳನ್ನು ತೆಗೆದು ಕೈ-ಕಾಲುಗಳನ್ನು ಉಜ್ಜಲು ಆರಂಭಿಸಿದೆವು. ಆದರೆ ಆಕೆ ಪ್ರಜ್ಞೆಗೆ ಬರಲಿಲ್ಲ. ಬಳಿಕ ಕೆಳಗೆ ಕರೆತಂದು ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದೆವು” ಎಂದು ಹೇಳಿದ್ದಾರೆ.

ಪೊಲೀಸ್ ತನಿಖೆ

ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕಿ DJ ಸದ್ದಿನಿಂದ ಮೃತಪಟ್ಟಳೇ ಅಥವಾ ಬೇರೆ ಯಾವುದೇ ವೈದ್ಯಕೀಯ ಕಾರಣದಿಂದ ಮೃತಪಟ್ಟಳೇ ಎಂಬುದು ತನಿಖಾ ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಅದರ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೋಟ್ ಚೋರಿ’ ಸಂವಿಧಾನದ ಮೇಲಿನ ನೇರ ದಾಳಿ; BJP, RSS, ECಯಿಂದ ದೇಶದ್ರೋಹ, ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ಬೇರೆ ಹುಡುಗನ ಜೊತೆ ಸ್ನೇಹ ಬೆಳೆಸಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ; ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದ ಲೆಕ್ಚರರ್ ಬಂಧನ!

EC ಬಿಕ್ಕಟ್ಟು: ಜ್ಞಾನೇಶ್ ಕುಮಾರ್ ವಿರುದ್ಧ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು; ವಿಫಲವಾದರೆ ಸೇನೆ ಮಧ್ಯಪ್ರವೇಶಿಸಲಿ-Sanjay Raut

ಮೀರಾಬಾಯಿ ಚಾನುಗೆ ಬೆಳ್ಳಿ: 98ರ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಮೊದಲ ಪದಕ!