ಮೈನ್‌ಪಾಲ್ ಧಿಲ್ಲಾ 
ದೇಶ

ಕಾಂಬೋಡಿಯಾ ಗರ್ಲ್​​​ಫ್ರೆಂಡ್​ ಜತೆ ವಿವಾಹವಾಗಲು ಹರಿಯಾಣ ಗ್ಯಾಂಗ್‌ಸ್ಟರ್‌ಗೆ ಕಸ್ಟಡಿ ಪೆರೋಲ್; ಫಾರ್ಮ್‌ಹೌಸ್‌ನಲ್ಲಿ ಮದುವೆ! Video ನೋಡಿ

ಕಳೆದ ವರ್ಷ ಕಾಂಬೋಡಿಯಾದಿಂದ ಭಾರತಕ್ಕೆ ಕರೆತರಲಾದ ಝಜ್ಜರ್‌ನ ಬಡ್ಲಿ ನಿವಾಸಿಯಾಗಿರುವ ಧಿಲ್ಲಾಗೆ, ಜೈಲಿನ ಸಮೀಪವಿರುವ ಫಾರ್ಮ್‌ಹೌಸ್‌ನಲ್ಲಿ ನಡೆಯಲಿರುವ ವಿವಾಹಕ್ಕಾಗಿ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ — ಅಂದರೆ 12 ಗಂಟೆಗಳ ಕಾಲ — 'ಕಸ್ಟಡಿ ಪೆರೋಲ್' ನೀಡಲಾಗಿತ್ತು.

ನವದೆಹಲಿ: ಹರಿಯಾಣದ ಝಜ್ಜರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ, ಗ್ಯಾಂಗ್‌ಸ್ಟರ್‌ ಮೈನ್‌ಪಾಲ್ ಧಿಲ್ಲಾಗೆ, ತನ್ನ ಕಾಂಬೋಡಿಯನ್ ಗೆಳತಿಯನ್ನು ವಿವಾಹವಾಗಲು ಗುರುವಾರ ಪೆರೋಲ್ ಮಂಜೂರು ಮಾಡಲಾಗಿದೆ.

ಕಳೆದ ವರ್ಷ ಕಾಂಬೋಡಿಯಾದಿಂದ ಭಾರತಕ್ಕೆ ಕರೆತರಲಾದ ಝಜ್ಜರ್‌ನ ಬಡ್ಲಿ ನಿವಾಸಿಯಾಗಿರುವ ಧಿಲ್ಲಾಗೆ, ಜೈಲಿನ ಸಮೀಪವಿರುವ ಫಾರ್ಮ್‌ಹೌಸ್‌ನಲ್ಲಿ ನಡೆಯಲಿರುವ ವಿವಾಹಕ್ಕಾಗಿ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ — ಅಂದರೆ 12 ಗಂಟೆಗಳ ಕಾಲ — 'ಕಸ್ಟಡಿ ಪೆರೋಲ್' ನೀಡಲಾಗಿತ್ತು.

ವಿವಾಹದ ವಿಧಿವಿಧಾನಗಳು ಮುಗಿದ ನಂತರ, ಅಪರಾಧಿಯನ್ನು ಮತ್ತೆ ಜೈಲಿಗೆ ಕರೆದೊಯ್ಯಲಾಯಿತು.

ಕಾಂಬೋಡಿಯಾದ ವಧು

ವಧು ಮೆಟಾ ಚಾನ್ ಅವರು ಕಾಂಬೋಡಿಯಾದವರಾಗಿರುವುದರಿಂದ ಈ ವಿವಾಹವು ಸುದ್ದಿಯಲ್ಲಿದೆ.

ಪರೋಲ್‌ನಲ್ಲಿದ್ದಾಗ ಕಾಂಬೋಡಿಯಾಗೆ ಪರಾರಿಯಾಗಿದ್ದ ವೇಳೆ ಧಿಲ್ಲಾ, ಮೆಟಾ ಚಾನ್ ಅವರನ್ನು ಭೇಟಿಯಾಗಿದ್ದು, ನಂತರ ಅವರಿಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಅವರಿಗೆ ನಾಲ್ವರು ಮಕ್ಕಳಿದ್ದಾರೆ.

ಚಾನ್ ಮದುವೆಗಾಗಿ ತಮ್ಮ ಮೂವರು ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ನಾಲ್ಕನೆಯ ಮಗು ಕಾಂಬೋಡಿಯಾದಲ್ಲೇ ಉಳಿದುಕೊಂಡಿದೆ.

ಮೇನ್‌ಪಾಲ್ ಧಿಲ್ಲಾ ವಿರುದ್ಧ ಕೊಲೆ ಸೇರಿದಂತೆ ಒಟ್ಟು 22 ಪ್ರಕರಣಗಳು ದಾಖಲಾಗಿವೆ.

2007 ಮತ್ತು 2010ರಲ್ಲಿ ದಾಖಲಾದ ಮೂರು ಪ್ರಕರಣಗಳಲ್ಲಿ ಅಪರಾಧಿಯೆಂದು ಸಾಬೀತಾದ ನಂತರ, ಧಿಲ್ಲಾ ಹಿಸಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು, ಜೈಲಿನಲ್ಲಿರುವಾಗಲೇ ವ್ಯಕ್ತಿಯೊಬ್ಬರನ್ನು ಕೊಂದ ಆರೋಪವೂ ಅವರ ಮೇಲಿದೆ.

ಜುಲೈ 2018ರಲ್ಲಿ ಆರು ವಾರಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಧಿಲ್ಲಾ, 'ಸೋನು ಕುಮಾರ್' ಎಂಬ ನಕಲಿ ಗುರುತನ್ನು ಬಳಸಿಕೊಂಡು ದೇಶದಿಂದ ಪರಾರಿಯಾಗಿದ್ದನು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ವೋಟ್ ಚೋರಿಯಿಂದ ಕಾನೂನು ಚೋರಿ' : ಇಡೀ ವ್ಯವಸ್ಥೆ ನಾಶಕ್ಕೆ ಬಿಜೆಪಿ ಸಂಚು,EC, ಕೇಂದ್ರದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ!

'ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ': ದೇಶ ದ್ರೋಹಿ ಜ್ಞಾನೇಶ್ ಕುಮಾರ್‌ ರಾಜೀನಾಮೆ ನೀಡಲಿ; 48 ಗಂಟೆಗಳ ಗಡುವು ನೀಡಿದ CJP!

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ವಿಪಕ್ಷಗಳು: ಸಂಸತ್ತಿನ ಉಭಯ ಸದನಗಳಲ್ಲಿ ಮಹಾಭಿಯೋಗ ನಿರ್ಣಯ ಮಂಡಿಸಲು ಮುಂದು!

ಮಹಾದೇವ್ ಆನ್‌ಲೈನ್ ಆ್ಯಪ್ ಇನ್ನೂ ಸಕ್ರಿಯ, ಅಕ್ರಮ ಬೆಟ್ಟಿಂಗ್ ಮೂಲಕ 94,000 ಕೋಟಿ ರೂ.ಗೂ ಹೆಚ್ಚು ಹಣ ಗಳಿಕೆ: ED

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 160 ಬಾಂಗ್ಲಾದೇಶಿಗರ ಗಡಿಪಾರು!