ರಾಹುಲ್ ಗಾಂಧಿ 
ದೇಶ

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮತಗಳ ನಾಶ ಸಂವಿಧಾನ, ಕಾನೂನು ರಚನಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ದಾಳಿಗೆ ಸಮಾನವಾಗಿದೆ ಎಂದು ಗಾಂಧಿ ಆರೋಪಿಸಿದ್ದಾರೆ.

ನವದೆಹಲಿ: ಭಾರತದಲ್ಲಿನ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ನನಗೆ ನೂರಕ್ಕೆ ನೂರರಷ್ಟು ಖಚಿತತೆ ಇದೆ ಎಂದು ಹೇಳಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು "ದೇಶದ್ರೋಹಿಗಳು" ಎಂದು ಕರೆದಿದ್ದಾರೆ.

ಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮತಗಳ ನಾಶ ಸಂವಿಧಾನ, ಕಾನೂನು ರಚನಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ದಾಳಿಗೆ ಸಮಾನವಾಗಿದೆ ಎಂದು ಗಾಂಧಿ ಅವರು ಆರೋಪಿಸಿದ್ದಾರೆ.

10 ತಿಂಗಳ ಅವಧಿಯಲ್ಲಿ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಚುನಾವಣಾ ಆಯೋಗದ ನಿರ್ಧಾರಗಳ ವಿರುದ್ಧ 14 ಬಾರಿ ತಮ್ಮ ಭಿನ್ನಮತವನ್ನು ವ್ಯಕ್ತಪಡಿಸಿದ್ದರು ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿಯ ಆರೋಪ ಮಾಡಿದ್ದಾರೆ.

ಇಂದಿರಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಂಧಿ, "ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಬಗ್ಗೆ ನನಗೆ ಶೇಕಡಾ 100 ರಷ್ಟು ಖಚಿತತೆ ಇದೆ. ಎಲ್ಲಾ ಚುನಾವಣೆಗಳಲ್ಲೂ ಅಕ್ರಮ ನಡೆಯುತ್ತಿದೆ. ಜೊತೆಗೆ ಭಾರತದಲ್ಲಿ ಆಡಳಿತ ವಿರೋಧಿ ಅಲೆ (anti-incumbency) ಹೇಗೆ ಮಾಯವಾಗಿದೆ ಎಂದು ಪ್ರಶ್ನಿಸಿದರು.

ಶಾ ಮತ್ತು ಮೋದಿ ಅವರದ್ದೆನ್ನಲಾದ ವೀಡಿಯೊಗಳನ್ನು ತೋರಿಸುವ ಮೂಲಕ ಗಾಂಧಿ ಸುದ್ದಿಗೋಷ್ಠಿ ಪ್ರಾರಂಭಿಸಿದರು. ಒಂದು ವೀಡಿಯೊದಲ್ಲಿ ಶಾ ಅವರು ಬಿಜೆಪಿ 30 ವರ್ಷಗಳ ಕಾಲ ಅಧಿಕಾರದಲ್ಲಿರುತ್ತದೆ ಎಂದು ಹೇಳುತ್ತಿರುವುದು ಕೇಳಿಬಂದರೆ, ಇನ್ನೊಂದು ವೀಡಿಯೊದಲ್ಲಿ ಮೋದಿ ಅವರು "ಅಬ್ ಕಿ ಬಾರ್ 400 ಪಾರ್" (ಈ ಬಾರಿ 400 ದಾಟುವ ಗುರಿ) ಎಂಬ ಘೋಷಣೆಯನ್ನು ಕೂಗುತ್ತಿರುವುದು ಕಂಡುಬಂದಿತು.

ಆಡಳಿತ ವಿರೋಧಿ ಅಲೆಯೇ ಮಾಯ?

"ನಾನು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವನು. ಯಾವುದೇ ರಾಜಕೀಯ ನಾಯಕರು ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಗಾಂಧಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ರಾಜಕೀಯ ನಾಯಕನೊಬ್ಬ ಇಂತಹ ಮಾತುಗಳನ್ನು ಆಡಲು ಸಾಧ್ಯವಿಲ್ಲ ಎಂದು ವಾದಿಸಿದರು. ಆಡಳಿತ ವಿರೋಧಿ ಅಲೆಯು ಅಂತಿಮವಾಗಿ ಪ್ರತಿಯೊಂದು ಸರ್ಕಾರದ ಮೇಲೂ ಪರಿಣಾಮ ಬೀರುವ ರಾಜಕೀಯ ಶಕ್ತಿಯಾಗಿದೆ ಎಂದು ಅವರು ಹೇಳಿದರು.

ಇದಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಉದಾಹರಣೆಯನ್ನು ನೀಡಿದ ಅವರು, ಇಂದಿರಾ ಗಾಂಧಿ ಬಾಂಗ್ಲಾದೇಶ ಯುದ್ಧದಲ್ಲಿ ಗೆದ್ದಿದ್ದರೂ, ಒಂದೆರಡು ವರ್ಷಗಳಲ್ಲೇ "ಭಾರಿ ಆಡಳಿತ ವಿರೋಧಿ ಅಲೆ ಮತ್ತು ಒತ್ತಡ"ವನ್ನು ಎದುರಿಸಬೇಕಾಯಿತು ಎಂದು ನೆನಪಿಸಿದರು. ನಾಯಕರ ನಂತರ ನಾಯಕರಿಗೆ ಇದೇ ಪರಿಸ್ಥಿತಿ ಎದುರಾಗುತ್ತದೆ. ಆದರೆ ಕಾರಣಾಂತರಗಳಿಂದ ನರೇಂದ್ರ ಮೋದಿ, ಶಾ ಅಥವಾ ಬಿಜೆಪಿಯ ವಿಷಯದಲ್ಲಿ ಇದು ಆಗುವುದಿಲ್ಲ ಎಂದು ಗಾಂಧಿ ಹೇಳಿದರು.

"ಒಬ್ಬ ವ್ಯಕ್ತಿಯ ಜನಪ್ರಿಯತೆ ಅಥವಾ ಸರ್ಕಾರದ ಕಾರ್ಯಕ್ಷಮತೆಯನ್ನು ನಾವು ಅರ್ಥಮಾಡಿಕೊಳ್ಳಬಹುದು, ಆದರೆ ಆಡಳಿತ ವಿರೋಧಿ ಅಲೆ ಸಂಪೂರ್ಣವಾಗಿ ಮಾಯ? ಇಂತಹ ಸ್ಥಿತಿ ಸದ್ದಾಂ ಹುಸೇನ್ ಅವರ ಇರಾಕ್ ಅಥವಾ ಉತ್ತರ ಕೊರಿಯಾದಲ್ಲಿಯೂ ಇಲ್ಲ. ಆಡಳಿತ ವಿರೋಧಿ ಅಲೆ ಮಾಯವಾಗಿರುವುದು ಕಾಂಗ್ರೆಸ್‌ಗೆ ಒಂದು "ಮೂಲಭೂತ ಪ್ರಶ್ನೆ"ಯಾಗಿದೆ ಎಂದು ಗಾಂಧಿ ತಿಳಿಸಿದರು. ಆಡಳಿತ ವಿರೋಧಿ ಅಲೆ ಕೆಲಸ ಮಾಡದಿದ್ದರೆ ಅಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂದರ್ಥ. ಇಲ್ಲಿ ಅದು ಎಲ್ಲಿಗೆ ಹೋಯಿತು ಎಂಬುದಕ್ಕೆ ನಾವು ಉತ್ತರ ಹುಡುಕುತ್ತಿದ್ದೇವೆ ಮತ್ತು ನಮಗೆ ಉತ್ತರಗಳು ಸಿಕ್ಕಿವೆ ಎಂದು ಅವರು ಹೇಳಿದರು.

ಚುನಾವಣಾ ಆಯೋಗ ಮತಗಳ "ಸಾಂಸ್ಥಿಕ ರಕ್ಷಕ: ಚುನಾವಣಾ ಆಯೋಗವು ಮತಗಳ "ಸಾಂಸ್ಥಿಕ ರಕ್ಷಕ" ಎಂದು ಹೇಳಿದ ಗಾಂಧಿ, ಮತಗಳನ್ನು ರಕ್ಷಿಸುವಲ್ಲಿ ಅದು ವಿಫಲವಾದರೆ ಇಡೀ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದರು. ಚುನಾವಣಾ ಆಯೋಗವು ಈ ಮತದ ಸಾಂಸ್ಥಿಕ ರಕ್ಷಕವಾಗಿದೆ. ಮತವನ್ನು ರಕ್ಷಿಸುವುದು ಅವರ ಜವಾಬ್ದಾರಿ. ಎಲ್ಲವೂ ಅಲ್ಲಿಂದಲೇ ಆರಂಭವಾಗುತ್ತದೆ. ಮತವೇ ನಾಶವಾದರೆ, ಸಂವಿಧಾನ ಕಾರ್ಯನಿರ್ವಹಿಸುವುದಿಲ್ಲ, ಕಾನೂನುಗಳು ಅಕ್ರಮವಾಗುತ್ತವೆ ಮತ್ತು ಸಂಸ್ಥೆಗಳಿಗೆ ಯಾವುದೇ ಅರ್ಥವಿರುವುದಿಲ್ಲ ಎಂದು ಅವರು ಹೇಳಿದರು.

ಸಾಕ್ಷ್ಯ ಇಲ್ಲದೆ ಆರೋಪ ಮಾಡಲ್ಲ: ತಾನು ಯಾವುದೇ ಸಾಕ್ಷ್ಯವಿಲ್ಲದೆ ಆರೋಪಗಳನ್ನು ಮಾಡುತ್ತಿಲ್ಲ ಎಂದು ಹೇಳಿದ ಗಾಂಧಿ, ತಮ್ಮ ಮಾತನ್ನು "ಶೇಕಡಾ 100 ರಷ್ಟು ಖಚಿತತೆಯಿಂದ"ಸಾಬೀತುಪಡಿಸಲು ಈಗಾಗಲೇ ಲಭ್ಯವಿರುವ ಮಾಹಿತಿಯೇ ಸಾಕಷ್ಟಿದೆ ಎಂದು ಪ್ರತಿಪಾದಿಸಿದರು. ಇದನ್ನು ಮಾಡಿದವರು ಇವರೇ. ನಾನು ಗಾಳಿಯಲ್ಲಿ ಮಾತನಾಡುತ್ತಿಲ್ಲ. ನಾನು ಅದನ್ನು ಸಾಕ್ಷ್ಯದೊಂದಿಗೆ ತೋರಿಸಿದ್ದೇನೆ. ಭಾರತೀಯ ಚುನಾವಣೆಗಳು, ಲೋಕಸಭಾ ಚುನಾವಣೆಗಳು, 2024ರ ಚುನಾವಣೆಗಳು ಮತ್ತು ವಿಧಾನಸಭಾ ಚುನಾವಣೆಗಳೆಲ್ಲವೂ ಅಕ್ರಮವಾಗಿ ನಡೆಯುತ್ತಿವೆ (rigging) ಎಂಬುದನ್ನು ಶೇಕಡಾ 99 ಅಲ್ಲ, ಶೇಕಡಾ 100 ರಷ್ಟು ಖಚಿತವಾಗಿ ಹೇಳಲು ಸಾಕಷ್ಟು ಮಾಹಿತಿಯಿದೆ ಎಂದು ನಾನು ನಿಮಗೆ ಹೇಳುತ್ತೇನೆ ಎಂದು ಅವರು ಹೇಳಿದರು.

ದೇಶದ ಪ್ರಜಾಪ್ರಭುತ್ವದಲ್ಲಿ ಮತವನ್ನು "ನಾಶ" ಮಾಡಿದ್ದಕ್ಕಾಗಿ ಮೋದಿ, ಶಾ ಮತ್ತು ಕುಮಾರ್ ದೇಶದ್ರೋಹಿಗಳು ಎಂದು ಗಾಂಧಿ ಬಣ್ಣಿಸಿದರು. ಮುಖ್ಯ ಚುನಾವಣಾ ಆಯುಕ್ತರು (CEC) ಮಾಡಿದ್ದು ಭಾರತೀಯ ರಾಷ್ಟ್ರದ ವಿರುದ್ಧದ ಕೃತ್ಯ ಎಂದು ಹೇಳಿದ ಅವರು, ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಪ್ರಜಾಪ್ರಭುತ್ವ ನಾಶವಾಗುವುದನ್ನು ನೋಡಿ ನಾವು ಸುಮ್ಮನಿರುವುದಿಲ್ಲ

ಇದು ಸಂವಿಧಾನ ಮತ್ತು ದೇಶದ ಕಾನೂನು ರಚನೆಯ ಮೇಲಿನ ದಾಳಿಯಾಗಿದೆ. ಮತವನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿತ್ತು. ಇದನ್ನು ಖಚಿತವಾಗಿ ಸಾಬೀತುಪಡಿಸಲು ನಮ್ಮ ಬಳಿ ಸಾಕಷ್ಟು ಮಾಹಿತಿಯಿದೆ. ಇದಕ್ಕೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪ್ರಜಾಪ್ರಭುತ್ವ ನಾಶವಾಗುವುದನ್ನು ನೋಡಿ ನಾವು ಸುಮ್ಮನಿರುವುದಿಲ್ಲ. ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗುತ್ತದೆಎಂದು ಗಾಂಧಿ ಹೇಳಿದರು.

ಕುಮಾರ್ 'ಅಪ್ರೂವರ್' ಆಗಬೇಕು: ಕುಮಾರ್ 'ಅಪ್ರೂವರ್' ಆಗಬೇಕು ಎಂದು ಸಲಹೆ ನೀಡಿದ ಗಾಂಧಿ, ಹಾಗೆ ಮಾಡುವುದು ರಾಷ್ಟ್ರೀಯತೆಯ ಕೆಲಸವಾಗುತ್ತದೆ. ಸದ್ಯ ನಡೆಯುತ್ತಿರುವ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಇಬ್ಬರನ್ನೂ ತನಿಖೆಗೆ ಒಳಪಡಿಸಬೇಕು. ಅವರು ಈ ಪಿತೂರಿಯ ಕೇಂದ್ರಬಿಂದುವಾಗಿದ್ದಾರೆ. ಈ ದೇಶಕ್ಕೆ ಅವರು ಎಸಗಿರುವ ಕೃತ್ಯಗಳಿಗಾಗಿ ಅವರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.

ಮೋದಿ ಮತ್ತು ಶಾ ಅವರು "ಈ ದೇಶದ ಪ್ರಜಾಪ್ರಭುತ್ವದ ರಚನೆಯ ಮೇಲೆ ದಾಳಿ ನಡೆಸಿ ಅದನ್ನು ನಾಶಪಡಿಸಿದ್ದಾರೆ. ಅಲ್ಲದೆ, "ಭಾರತದ ಮತದಾನ ಪ್ರಕ್ರಿಯೆಯನ್ನು ನಾಶಪಡಿಸುವ" ವ್ಯಕ್ತಿಯು "ದೇಶದ್ರೋಹಿ" ಎಂದು ಬಣ್ಣಿಸಿದ ಅವರು, ಇದು ಭಾರತೀಯ ರಾಷ್ಟ್ರ ಮತ್ತು ಜನರ ವಿರುದ್ಧದ ಕೃತ್ಯವಾಗಿದೆ. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಜ್ಞಾನೇಶ್ ಕುಮಾರ್ ಅವರನ್ನು ಪ್ರಧಾನಿ ಮತ್ತು ಅಮಿತ್ ಶಾ ಆಯ್ಕೆ ಮಾಡಿದ್ದರು, ಆದರೆ ಈಗ ನಮ್ಮ ಮತದಾನ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಮತ್ತು ಹಾನಿಗೆ ಅವರೇ ಕಾರಣ ಎಂದು ಇಬ್ಬರು ಚುನಾವಣಾ ಆಯುಕ್ತರು ಹೇಳುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗಾಂಧಿ ಅವರು ಕೈಗಾರಿಕೋದ್ಯಮಿ ಗೌತಮ್ ಅದಾನಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಜ್ಞಾನೇಶ್ ಕುಮಾರ್ ಅವರ ಪೋಟೋಗಳನ್ನು ಪ್ರದರ್ಶಿಸಿ, ಅವರನ್ನು "ಷಡ್ಯಂತ್ರಕಾರರು" ಎಂದು ಬಣ್ಣಿಸಿದರು.

"ಎಲ್ಲಾ ಚುನಾವಣೆಗಳಲ್ಲಿ ಅಕ್ರಮಗಳು ನಡೆಯುತ್ತಿವೆ. ಈ ಪಟ್ಟಿಯ ಮುಂಚೂಣಿಯಲ್ಲಿ ಷಡ್ಯಂತ್ರಕಾರರಿದ್ದಾರೆ. ಅಲ್ಲಿ ಜ್ಞಾನೇಶ್ ಕುಳಿತಿದ್ದಾರೆ. ಇಬ್ಬರು ಚುನಾವಣಾ ಆಯುಕ್ತರು ಆ ವ್ಯಕ್ತಿಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ನಾನು ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದೆ, ಆದರೆ ಅವುಗಳನ್ನು ನಿರ್ಲಕ್ಷಿಸಲಾಯಿತು. ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ತಾವು ಎತ್ತುತ್ತಿದ್ದ ಪ್ರಶ್ನೆಗಳಿಗೆ ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪಣೆಗಳು ಪುಷ್ಟಿ ನೀಡಿವೆ ಎಂದು ಗಾಂಧಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗಿ ಗವಿಸಿದ್ದೇಶ್ವರ ಸ್ವಾಮೀಜಿ ಆಯ್ಕೆ; ಗೊಂದಲಕ್ಕೆ ತೆರೆ

ಬಿಹಾರದಲ್ಲಿ ಜಮುಯಿ ಘಟನೆ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ: ಬಾಲಕಿಯನ್ನು ಹಿಡಿದು ಎಳೆದಾಡಿದ ಕೀಚಕರು; Video

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗಕ್ಕೆ BJP ಶಾಸಕ ಪತ್ರ: ಬಿ.ಕೆ ಹರಿಪ್ರಸಾದ್ ರಿಂದ ದಾಖಲೆ ಬಿಡುಗಡೆ!

ದೇಶಾದ್ಯಂತ ಮತದಾರರ ಪಟ್ಟಿಯಿಂದ 13 ಕೋಟಿ ಮತದಾರರ ಹೆಸರು ಡಿಲೀಟ್! ಅವರ ಮಕ್ಕಳ ಗತಿಯೇನು? CEC ವಿರುದ್ಧ ದೂರು ದಾಖಲಿಸಿದ TMC ಸಂಸದೆ

BiggBoss ಕಚಡ ಶೋ: ಮೂರ್ಖರನ್ನು ಸ್ಟಾರ್‌ಗಳನ್ನಾಗಿ ಮಾಡುತ್ತದೆ, ಶೋ ನಿಲ್ಲಿಸಿ; ಸ್ಟಾಂಡ್ಅಪ್ ಕಾಮಿಡಿಯನ್ ಆಕ್ರೋಶ!