ಜಮುಯಿ ಕೇಸ್‌ನಲ್ಲಿ ಪಾಪಿ ಮಗನ ಬೆನ್ನತ್ತಿ ಹೋದ ಪೊಲೀಸರಿಗೆ ಸಿಕ್ತು ಬಿಗ್ ಟ್ವಿಸ್ಟ್ Online Desk
ದೇಶ

ಜಮುಯಿ ಕೇಸ್‌ನಲ್ಲಿ ಪಾಪಿ ಮಗನ ಬೆನ್ನತ್ತಿ ಹೋದ ಪೊಲೀಸರಿಗೆ ಸಿಕ್ತು ಬಿಗ್ ಟ್ವಿಸ್ಟ್: 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಗಾರ ತಂದೆಯೂ ಅರೆಸ್ಟ್!

ಕರ್ಮ ಯಾರನ್ನೂ ಬಿಡುವುದಿಲ್ಲ, ಕಾಲ ಮಿಂಚಿದರೂ ಕರ್ಮ ಬೆಂಬಿಡದೆ ಕಾಡುತ್ತದೆ ಎಂಬ ಮಾತಿಗೆ ಜಮುಯಿ ಘಟನೆಯೇ ಸಾಕ್ಷಿ! ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಿಯನ್ನು ಹಿಡಿಯಲು ಹೋದ ಪೊಲೀಸರಿಗೆ 23 ವರ್ಷಗಳ ಹಿಂದೆ ಇಬ್ಬರು ಸಹೋದರರನ್ನು ಬಲಿಪಡೆದು ರಾಜಾರೋಷವಾಗಿ ಮೆರೆಯುತ್ತಿದ್ದ ಹಂತಕ ಸಿಕ್ಕಿದ್ದಾನೆ.

ಜಮುಯಿ (ಬಿಹಾರ): ಕರ್ಮ ಯಾರನ್ನೂ ಬಿಡುವುದಿಲ್ಲ, ಕಾಲ ಮಿಂಚಿದರೂ ಕರ್ಮ ಬೆಂಬಿಡದೆ ಕಾಡುತ್ತದೆ ಎಂಬ ಮಾತಿಗೆ ಬಿಹಾರದ ಜಮುಯಿಯಲ್ಲಿ ನಡೆದ ಘಟನೆಯೇ ಜೀವಂತ ಸಾಕ್ಷಿಯಾಗಿದೆ. ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಿಯನ್ನು ಹಿಡಿಯಲು ಹೋದ ಪೊಲೀಸರಿಗೆ ಸಿಕ್ಕ ಅನಿರೀಕ್ಷಿತ ತಿರುವು ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿದೆ.

ಹೌದು, ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿದ್ದ ಬಿಹಾರ ಪೊಲೀಸರಿಗೆ ತನಿಖೆ ವೇಳೆ ಭರ್ಜರಿ ಟ್ವಿಸ್ಟ್ ಸಿಕ್ಕಿದ್ದು, ಪ್ರಮುಖ ಆರೋಪಿಯ ತಂದೆ ಕಳೆದ 23 ವರ್ಷಗಳಿಂದ ಕೊಲೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಮಹಾ ಅಪರಾಧಿ ಎಂಬುದು ಬಯಲಾಗಿದೆ. ಹಾಗಾಗಿ, ಮಗನ ಪಾಪಕೃತ್ಯವನ್ನು ಬೆನ್ನತ್ತಿ ಹೋದ ಪೊಲೀಸರ ಜಾಲಕ್ಕೆ ತಂದೆಯ ಹಳೆಯ ಭೀಕರ ಕರ್ಮಕಾಂಡ ಸಿಲುಕಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಸೆಪ್ಟೆಂಬರ್ 19ರಂದು ಜಮುಯಿ ನಗರದ ಹೊರವಲಯದ ಮಾವಾರಾ ಬೆಟ್ಟದ ಬಳಿ, ಕೋಚಿಂಗ್ ಕ್ಲಾಸ್ ಮುಗಿಸಿ ಮನೆಗೆ ಮರಳುತ್ತಿದ್ದ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನನ್ನು ಕಿಡಿಗೇಡಿಗಳ ಗುಂಪು ಅಡ್ಡಗಟ್ಟಿತ್ತು. ಆ ವೇಳೆ ಯುವಕನ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಈ ಭೀಕರ ದೃಶ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಮುಂದುವರೆದು, ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ನಂದನ್ ಯಾದವ್‌ನನ್ನು ಹಿಡಿಯಲು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಅದರಂತೆ, ಸೆಪ್ಟೆಂಬರ್ 22ರಂದು ಪೊಲೀಸರು ಆತನನ್ನು ಸುತ್ತುವರೆದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಆತನ ಕಾಲಿಗೆ ಗುಂಡೇಟು ಬಿದ್ದಿತ್ತು. ತಕ್ಷಣ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ತಂದೆಯ 23 ವರ್ಷಗಳ ಕರ್ಮಕಾಂಡ ಬಯಲು

ಏತನ್ಮಧ್ಯೆ, ಪ್ರಮುಖ ಆರೋಪಿ ನಂದನ್ ಯಾದವ್‌ನ ಬಂಧನದ ಬೆನ್ನಲ್ಲೇ ಆತನ ಇಡೀ ಕುಟುಂಬದ ಅಪರಾಧ ಹಿನ್ನೆಲೆಯನ್ನು ಪರಿಶೀಲಿಸಲು ಪೊಲೀಸರು ಪ್ರತಾಪ್‌ಪುರ ಗ್ರಾಮದಲ್ಲಿರುವ ಆತನ ಮನೆಗೆ ಭಾರಿ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿದ್ದ ನಂದನ್ ತಂದೆ ಗನೌರಿ ಯಾದವ್‌ನ ದಾಖಲೆಗಳನ್ನು ಪರಿಶೀಲಿಸಿದಾಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

2003ರ ಡಬಲ್ ಮರ್ಡರ್ ರಹಸ್ಯ

ಅದುವೇ, ಗನೌರಿ ಯಾದವ್ ಬೇರೆ ಯಾರೂ ಆಗಿರದೆ, 2003ರ ಏಪ್ರಿಲ್‌ನಲ್ಲಿ ನಡೆದಿದ್ದ ಡಿಪಿ ಯಾದವ್ ಮತ್ತು ಪುನಾ ಯಾದವ್ ಎಂಬ ಇಬ್ಬರು ಸಹೋದರರ ಭೀಕರ ಜಮೀನು ವಿವಾದದ ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈ ಕೊಲೆ ಪ್ರಕರಣದಲ್ಲಿ ಹೆಸರಿಸಲಾಗಿದ್ದ 11 ಆರೋಪಿಗಳಲ್ಲಿ ಉಳಿದವರೆಲ್ಲರೂ ಶಿಕ್ಷೆ ಅನುಭವಿಸಿ ಹೊರಬಂದಿದ್ದರೂ, ಗನೌರಿ ಮಾತ್ರ ಕಳೆದ 23 ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ.

ಆದರೆ, ಈಗ ಮಗ ಮಾಡಿದ ಲೈಂಗಿಕ ದೌರ್ಜನ್ಯದ ಪಾಪಕೃತ್ಯದ ತನಿಖೆಯ ವೇಳೆ, ಅಂತಿಮವಾಗಿ 23 ವರ್ಷಗಳ ಕಾಲ ಕಾನೂನಿನಿಂದ ತಪ್ಪಿಸಿಕೊಂಡು ರಾಜಾರೋಷವಾಗಿ ಬದುಕುತ್ತಿದ್ದ ಹಂತಕ ತಂದೆಯನ್ನು ಜೈಲು ಕಂಬಿಗಳ ಹಿಂದೆ ತಳ್ಳುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!