ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ 
ದೇಶ

ಮಹಿಳೆ ಫೋಟೋ ಮಾರ್ಫ್ ಮಾಡಿ ಪ್ರಧಾನಿ ಮೋದಿ ಫೋಟೋದೊಂದಿಗೆ ಪ್ರದರ್ಶನ: CJP ವಿರುದ್ಧ FIR ದಾಖಲು

ಮಹಿಳೆ ನೀಡಿದ ದೂರಿನ ಆಧಾರ ಮೇಲೆ ದೆಹಲಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ(BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಸಿಜೆಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ನವದೆಹಲಿ: 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಕೃತಕ ಬುದ್ಧಿಮತ್ತೆ(AI) ಮತ್ತು 'ಫೇಸ್-ಸ್ವಾಪಿಂಗ್'(ಮುಖ ಬದಲಾಯಿಸುವ) ತಂತ್ರಜ್ಞಾನವನ್ನು ಬಳಸಿ ತನ್ನ ಭಾವಚಿತ್ರವನ್ನು ತಿರುಚಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರ ಮೇಲೆ ದೆಹಲಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ(BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಸಿಜೆಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಿಸಿದ್ದರೂ, ದೂರಿನಲ್ಲಿ ಉಲ್ಲೇಖಿಸಲಾದ CJP ನಾಯಕರ ಹೆಸರುಗಳನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

AI ಮತ್ತು ಫೇಸ್-ಸ್ವಾಪ್ ತಂತ್ರಜ್ಞಾನವನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರದೊಂದಿಗೆ ತನ್ನ ಭಾವಚಿತ್ರವನ್ನು ತಪ್ಪಾಗಿ ಜೋಡಿಸಲಾಗಿದೆ(ಸೂಪರ್‌ಇಂಪೋಸ್ ಮಾಡಲಾಗಿದೆ) ಎಂದು ಆ ಮಹಿಳೆ ಆರೋಪಿಸಿದ್ದಾರೆ.

CJP ಪ್ರತಿಭಟನೆಯಲ್ಲಿ ಕೆಲವು ಸಂಘಟಕರು ಮತ್ತು ಪ್ರಮುಖ ಪದಾಧಿಕಾರಿಗಳು ಈ ಚಿತ್ರವನ್ನು ಸೃಷ್ಟಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಚಿತ್ರದಿಂದ ತಮಗೆ ತೀವ್ರ ನೋವು ಉಂಟಾಗಿದೆ ಎಂದು ಮಹಿಳೆ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ದೊಡ್ಡ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳಲ್ಲಿ ಈ ತಿರುಚಿದ ಭಾವಚಿತ್ರವನ್ನು ಬಳಸಲಾಗಿದೆ. ಅಸಭ್ಯ ಘೋಷಣೆಗಳನ್ನು ಕೂಗಲಾಗಿದೆ ಮತ್ತು ಈ ಚಿತ್ರವಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹರಡಲಾಗಿದೆ ಎಂದೂ ಮಹಿಳೆ ಆರೋಪಿಸಿದ್ದಾರೆ.

ಈ ವಿಷಯದ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

CJP ಸಂಸ್ಥಾಪಕರಾದ ಅಭಿಜೀತ್ ದೀಪ್ಕೆ ಮತ್ತು ಸೌರವ್ ದಾಸ್ ಸೇರಿದಂತೆ ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ಆದಾಗ್ಯೂ, ಎಫ್‌ಐಆರ್‌ನಲ್ಲಿ ದೀಪ್ಕೆ, ದಾಸ್ ಅಥವಾ ಅಶುತೋಷ್ ರಂಕಾ ಅವರ ಹೆಸರುಗಳನ್ನು ಆರೋಪಿಗಳಾಗಿ ನಮೂದಿಸಲಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಕುರಿತು ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ಆರೋಪ: CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!