ಪ್ರಧಾನಿ ಮೋದಿ 
ದೇಶ

ಭಜನಾ ಕಾರ್ಯಕ್ರಮ: 'ಹನುಮಾನ್ ಅಂಶ್'ನ 'ಪಾರ್ವತಿ' ಹಾಡಿಗೆ ದನಿಗೂಡಿಸಿ, ಕಂಜೀರಾ ನುಡಿಸಿದ ಪ್ರಧಾನಿ ಮೋದಿ! Video

'ಹನುಮಾನ್ ಅಂಶ್' ಚಿತ್ರದ ಜನಪ್ರಿಯ ಹಾಡು 'ಪಾರ್ವತಿ'ಯನ್ನು ಗಾಯಕ ಸಾಧು ಎಸ್. ತಿವಾರಿ ಹಾಡುತ್ತಿದ್ದಾಗ ಪ್ರಧಾನಿ ನರೇಂದ್ರ ಹಾಡಿಗೆ ದನಿಗೂಡಿಸಿದರು. ಅಲ್ಲದೇ ಕಂಜೀರಾ ನುಡಿಸುವ ಮೂಲಕ ತಾಳ ಹಾಕುವುದು ಕಂಡುಬಂದಿತು.

ನವದೆಹಲಿ: ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 110ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಭಜನಾ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. 'ಹನುಮಾನ್ ಅಂಶ್' ಚಿತ್ರದ ಜನಪ್ರಿಯ ಹಾಡು 'ಪಾರ್ವತಿ'ಯನ್ನು ಗಾಯಕ ಸಾಧು ಎಸ್. ತಿವಾರಿ ಹಾಡುತ್ತಿದ್ದಾಗ ಪ್ರಧಾನಿ ನರೇಂದ್ರ ಹಾಡಿಗೆ ದನಿಗೂಡಿಸಿದರು. ಅಲ್ಲದೇ ಕಂಜೀರಾ ನುಡಿಸುವ ಮೂಲಕ ತಾಳ ಹಾಕುವುದು ಕಂಡುಬಂದಿತು.

'ಹನುಮಾನ್ ಅಂಶ್' ಚಿತ್ರದ ಮೂಲಕ ಗುರುತಿಸಿಕೊಂಡಿರುವ ಸಾಧು ಎಸ್. ತಿವಾರಿ, ದೆಹಲಿಯ ಕಾರ್ಯಕ್ರಮದಲ್ಲಿ ಆ ಸಿನಿಮಾದ ಜನಪ್ರಿಯ ಹಾಡನ್ನು ಹಾಡಿದರು. ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದ್ದು, ಚಿತ್ರದ ಪ್ರಮುಖ ಸಂಗೀತ ರಚನೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಈ ಹಾಡು ಸರಳ ಭಾಷೆ ಮತ್ತು ವಿಶಿಷ್ಟವಾದ ದೇಸಿ ಸಂಗೀತ ಶೈಲಿಯ ಮೂಲಕ ಶಿವ ಮತ್ತು ಪಾರ್ವತಿ ದೇವಿಯ ಕಥೆಯನ್ನು ನಿರೂಪಿಸುತ್ತದೆ. ತಿವಾರಿ ಅವರೇ ಈ ಹಾಡಿನ ಸಾಹಿತ್ಯ ಬರೆದು, ಸಂಯೋಜಿಸಿದ್ದಾರೆ. ಪ್ರೇಕ್ಷಕರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡು ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತದೆ ಎಂದು ತಾನು ನಿರೀಕ್ಷಿಸಿರಲಿಲ್ಲ ಎಂದು ತಿವಾರಿ ಹೇಳಿದ್ದಾರೆ.

'ಹನುಮಾನ್ ಅಂಶ್' ಬಾಕ್ಸ್ ಆಫೀಸ್ ಗಳಿಕೆ: ಉದ್ಯಮದ ಅಂಕಿಅಂಶಗಳನ್ನು ನೀಡುವ 'ಸ್ಯಾಕ್ನಿಲ್ಕ್' (Sacnilk) ಪ್ರಕಾರ, 'ಹನುಮಾನ್ ಅಂಶ್' ಇದುವರೆಗೆ ಭಾರತದಲ್ಲಿ 291.53 ಕೋಟಿ ರೂ.ಗಳ ನಿವ್ವಳ (net) ಗಳಿಕೆಯನ್ನು ಕಂಡಿದೆ. ಇದರ ಭಾರತದ ಒಟ್ಟು (gross) ಗಳಿಕೆಯು 344.35 ಕೋಟಿ ರೂ.ಗಳಷ್ಟಿದೆ.

50 ದಿನಗಳ ನಂತರವೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ವಿದೇಶಗಳಲ್ಲಿ37.00 ಕೋಟಿ ರೂ.ಗಳ ಒಟ್ಟು ಗಳಿಕೆಯನ್ನು ಪಡೆದಿದ್ದು, ಇದರ ಜಾಗತಿಕ ಒಟ್ಟು ಗಳಿಕೆಯು 381.35 ಕೋಟಿ ರೂ.ಗಳಿಗೆ ತಲುಪಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾಪ: ಡೊನಾಲ್ಡ್ ಟ್ರಂಪ್ ತಿರಸ್ಕೃತ

Nepal flood: ಇನ್ನೂ ಪತ್ತೆಯಾಗದ ತಮಿಳು ನಾಡಿನ 85 ಯಾತ್ರಿಕರು; ಕುಟುಂಬಸ್ಥರ ಅರಣ್ಯರೋಧನ

ಪ್ರತಿಭಟನೆ ವೇಳೆ ಪ್ರಜ್ಞೆ ಕಳೆದುಕೊಂಡ ಮಹಿಳೆ: ಸಚಿವ ಹೆಚ್.ಸಿ. ಬಾಲಕೃಷ್ಣ ಪೊಲೀಸರನ್ನು ಛೂಬಿಟ್ರಾ? ಜೆಡಿಎಸ್ ಆರೋಪ Video

ನಂದಿನಿ ಹಾಲಿನ ದರ ಪ್ರತಿ ಲೀ.ಗೆ 10ರೂ. ಏರಿಕೆ? ಇಂದು ಸಿಎಂ ಮಹತ್ವದ ಸಭೆ, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ

ಶಿಕ್ಷಕರಿಗೆ SIR ಡ್ಯೂಟಿಯಿಂದ ಪರೀಕ್ಷಾ ಫಲಿತಾಂಶಗಳ ಮೇಲೆ ಪರಿಣಾಮ: ಮಧು ಬಂಗಾರಪ್ಪ ಆತಂಕ