ನಿಮಿಷಾ ಠಾಕುರಿಯಾ ಹಾಗೂ ಬಾಯ್‌ ಫ್ರೆಂಡ್‌‌  
ದೇಶ

'ಅವರು ನನ್ನನ್ನು ಕೊಲ್ಲುತ್ತಾರೆ, ಅಮ್ಮ': ಹೋಮ್‌ಸ್ಟೇನಲ್ಲಿ ಹಿಂದೂ ಯುವತಿ ಶವವಾಗಿ ಪತ್ತೆ; ಮುಸ್ಲಿಂ ಬಾಯ್‌ ಫ್ರೆಂಡ್‌‌ ಬಂಧನ!

ಠಾಕುರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಮಗೆ ಮಾಹಿತಿ ನೀಡಲಾಗಿದೆ. ಆದರೆ "ಅವರು ಹೇಳುವ ಮಾತನ್ನು ನಾವು ನಂಬುವುದಿಲ್ಲ. ನಾವು ತನಿಖೆಯನ್ನು ಮುಂದುವರಿಸಬೇಕಿದೆ".

ಗುವಾಹಟಿ: ಗುವಾಹಟಿ ವಿಶ್ವವಿದ್ಯಾಲಯದ 22 ವರ್ಷದ ವಿದ್ಯಾರ್ಥಿನಿಯೊಬ್ಬರು ಶನಿವಾರ ಮುಂಜಾನೆ ತಾನು ಉಳಿದುಕೊಂಡಿದ್ದ ಹೋಮ್‌ಸ್ಟೇನಲ್ಲಿ ಶವವಾಗಿ ಪತ್ತೆಯಾಗಿದ್ದು, 26 ವರ್ಷದ, ಆಕೆಯ ಮುಸ್ಲಿಂ ಬಾಯ್‌ ಫ್ರೆಂಡ್‌‌ ನನ್ನು ಬಂಧಿಸಲಾಗಿದೆ.

ಆಕೆಯೇ ನೇಣು ಹಾಕಿಕೊಂಡಿದ್ದಾಳೆ ಎಂದು ಬಾಯ್ ಫ್ರೆಂಡ್ ಹೇಳಿದ್ದರೂ, ಪೊಲೀಸರು ಆತನ ಹೇಳಿಕೆಯನ್ನು ನಂಬುತ್ತಿಲ್ಲ ಮತ್ತು ಇದು ಕೊಲೆ ಇರಬಹುದು ಎಂದು ಶಂಕಿಸಿದ್ದಾರೆ. ಅಲ್ಲದೆ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಮೃತದೇಹದ ಮೇಲಾಗಲಿ ಅಥವಾ ನೆಲದ ಮೇಲಾಗಲಿ ಯಾವುದೇ ರಕ್ತದ ಕಲೆಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಇಲ್ಲಿಯವರೆಗೆ ಎರಡು ಪ್ರಮುಖ ಅಂಶಗಳು ಬೆಳಕಿಗೆ ಬಂದಿವೆ. ಮೊದಲನೆಯದಾಗಿ, ಸ್ನೇಹಿತೆಯೊಬ್ಬರ ಮನೆಯಲ್ಲಿ ರಾತ್ರಿ ಉಳಿಯುವುದಾಗಿ ಕುಟುಂಬಕ್ಕೆ ಹೇಳಿದ್ದ ಆ ಯುವತಿ, ಮಧ್ಯರಾತ್ರಿ ತನ್ನ ತಾಯಿಗೆ ಕರೆ ಮಾಡಿ, "ಅವರು ನನ್ನನ್ನು ಕೊಲ್ಲುತ್ತಾರೆ" ಎಂದು ಹೇಳಿದ್ದಾಳೆ. ಇದಾದ ಬಳಿಕ ಆಕೆಯ ಫೋನ್ ಅನ್ನು "ಬಹುಶಃ ಕಿತ್ತುಕೊಳ್ಳಲಾಗಿದೆ" ಎಂದು ಕುಟುಂಬದ ಸ್ನೇಹಿತರೊಬ್ಬರು ಹೇಳಿದ್ದಾರೆ.

ಆದಾಗ್ಯೂ, ಈ ಹೇಳಿಕೆಯ ಬಗ್ಗೆ ಇನ್ನೂ ತನಿಖೆ ನಡೆಯಬೇಕಿದೆ. ಇನ್ನೊಂದು ಅಂಶವೆಂದರೆ, ರಾತ್ರಿಯ ವೇಳೆ ಒಬ್ಬರು ಕೂಗಾಡುತ್ತಿದ್ದರು ಮತ್ತು "ಯಾರಾದಾರೂ ಸಹಾಯ ಮಾಡುವಂತೆ" ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದಾಗಿ ಹೋಮ್‌ಸ್ಟೇನ ಉಸ್ತುವಾರಿ ವ್ಯಕ್ತಿ ಹೇಳಿದ್ದಾರೆ.

ಮೃತ ಯುವತಿ ಹಿಂದೂ ಆಗಿದ್ದು, ಬಂಧಿತನಾಗಿರುವ ಆಕೆಯ ಪ್ರಿಯಕರ ಮುಸ್ಲಿಂ ಆಗಿರುವುದರಿಂದ, ಇದು "ಲವ್ ಜಿಹಾದ್" ಎಂದು ಆರೋಪಿಸಿದ ಕೆಲವು ಸಂಘಟನೆಗಳು ಪ್ರತಿಭಟನೆ ಸಹ ನಡೆಸಿವೆ.

ಗುವಾಹಟಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಮತ್ತು ಧಾರಾಪುರದ ನಿವಾಸಿಯಾಗಿದ್ದ ನಿಮಿಷಾ ಠಾಕುರಿಯಾ ಅವರು, ನಗರದ ಹೊರವಲಯದಲ್ಲಿರುವ ಗರಾಲ್‌ನಲ್ಲಿರುವ ಹೋಮ್‌ಸ್ಟೇ ಒಂದರಲ್ಲಿ ಬಂಧಿತ ವ್ಯಕ್ತಿ ಆಸಿಫ್ ಅಲಿ ಅವರೊಂದಿಗೆ ಉಳಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಠಾಕುರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಮಗೆ ಮಾಹಿತಿ ನೀಡಲಾಗಿದೆ. ಆದರೆ "ಅವರು ಹೇಳುವ ಮಾತನ್ನು ನಾವು ನಂಬುವುದಿಲ್ಲ. ನಾವು ತನಿಖೆಯನ್ನು ಮುಂದುವರಿಸಬೇಕಿದೆ" ಎಂದು ಗುವಾಹಟಿ ಪಶ್ಚಿಮ ಪೊಲೀಸ್ ಉಪ ಆಯುಕ್ತ(DCP) ಬೋಲಿನ್ ದಿಯೋರಿ ಅವರು ಹೇಳಿದ್ದಾರೆ.

ಹೋಮ್‌ಸ್ಟೇ ಮಾಲೀಕರು, ಉಸ್ತುವಾರಿಗಳು ಮತ್ತು ಇತರ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ದಿಯೋರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ’: SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!

ತಂತ್ರಜ್ಞಾನ, ಆವಿಷ್ಕಾರದಿಂದ ಹೊಸ ವೇಗ, ಭಾರತದ ಆರ್ಥಿಕ ಬೆಳವಣಿಗೆ ಶೇ.10 ಮೀರಬಹುದು: ನಿರ್ಮಲಾ ಸೀತಾರಾಮನ್

SIR ನೋಟಿಸ್ ಪಡೆದವರಿಗೆ ನೆಮ್ಮದಿ ಸುದ್ದಿ: ಮನೆಗೇ ತೆರಳಿ ದಾಖಲೆ ಸಂಗ್ರಹಿಸಲು BLOಗಳಿಗೆ ಚುನಾವಣಾ ಆಯೋಗ ಸೂಚನೆ!

ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ: ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಆತ್ಮಾಹುತಿ ಬಾಂಬ್ ಸ್ಫೋಟ; ಇಬ್ಬರು ಅಧಿಕಾರಿ ಸೇರಿ 11 ಮಂದಿ ಸಾವು

Video: ತಾಯಿಯ ಕಣ್ಣೆದುರೇ 3 ವರ್ಷದ ಬಾಲಕನ ಮೇಲೆ ಹರಿದ SUV, ದಾರುಣ ಸಾವು; CCTV ದೃಶ್ಯ ವೈರಲ್