CISF ಸಿಬ್ಬಂದಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ನಿಯೋಜಿತರಾಗಿ, ದೇಹ ತಪಾಸಣೆ, ಎಕ್ಸ್‌ರೇ ಮೂಲಕ ಬ್ಯಾಗೇಜ್ ತಪಾಸಣೆ  
ದೇಶ

NEET ಪ್ರಶ್ನೆಪತ್ರಿಕೆ ಸೋರಿಕೆ: NTA ಕಚೇರಿಗೆ CISF ಕಾವಲು, ಗೌಪ್ಯ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣ

NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಹಾಗೂ ಪರೀಕ್ಷಾ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ದೆಹಲಿಯಲ್ಲಿರುವ ಕೇಂದ್ರ ಹೊಸ ಕಚೇರಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಗೌಪ್ಯ ಹಾಗೂ ಸೂಕ್ಷ್ಮ ಕಾರ್ಯಾಚರಣೆಗಳನ್ನು ಸ್ಥಳಾಂತರಿಸಿದೆ. ಇನ್ನು ಮುಂದೆ ಈ ಕಚೇರಿ ಆವರಣದ ಭದ್ರತೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ನಿರ್ವಹಿಸಲಿದ್ದು, ಗೌಪ್ಯ ಎಂದು ಗುರುತಿಸಲಾದ ಪ್ರದೇಶಗಳಿಗೆ ಪ್ರವೇಶವನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಹಾಗೂ ಪರೀಕ್ಷಾ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. NTAಯ ಹೊಸ ಕಚೇರಿ ದೆಹಲಿಯ ಮಿಂಟೋ ರಸ್ತೆಯಲ್ಲಿರುವ ಭಾರತ ಸರ್ಕಾರದ ಮುದ್ರಣಾಲಯದ ಕಟ್ಟಡದಲ್ಲಿದ್ದು, ಭದ್ರತೆ ಮತ್ತು ಪ್ರವೇಶ ನಿಯಂತ್ರಣಕ್ಕಾಗಿ 39 CISF ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಿಂಟೋ ರಸ್ತೆಯಲ್ಲಿರುವ ಕೇಂದ್ರ ಸರ್ಕಾರದ ಮುದ್ರಣಾಲಯದ ಕಟ್ಟಡದಲ್ಲಿ 55,000 ಚದರ ಅಡಿಗೂ ಹೆಚ್ಚಿನ ಪ್ರತ್ಯೇಕ ಕಚೇರಿ ಸ್ಥಳವನ್ನು NTAಗೆ ನೀಡಲಾಗಿದೆ. ಕಟ್ಟಡದ ಐದನೇ ಮಹಡಿ ಹಾಗೂ ನಾಲ್ಕನೇ ಮತ್ತು ಆರನೇ ಮಹಡಿಯ ಕೆಲವು ಭಾಗಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಹಂಚಿಕೆ ಮಾಡಲಾಗಿದೆ. ಕಳೆದ ಒಂದು ತಿಂಗಳಲ್ಲಿ ಗೌಪ್ಯ ಹಾಗೂ ಸೂಕ್ಷ್ಮ ಕಾರ್ಯಾಚರಣೆಗಳನ್ನು ಹೊಸದಾಗಿ ಹಂಚಿಕೆಯಾಗಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

CISF ಸಿಬ್ಬಂದಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ನಿಯೋಜಿತರಾಗಿದ್ದು, ತಪಾಸಣೆ ಹಾಗೂ ಪ್ರವೇಶ ನಿಯಂತ್ರಣ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಇದರಲ್ಲಿ ದೇಹ ತಪಾಸಣೆ, ಎಕ್ಸ್‌ರೇ ಮೂಲಕ ಬ್ಯಾಗೇಜ್ ತಪಾಸಣೆ ಹಾಗೂ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳ (DFMD) ಮೂಲಕ ತಪಾಸಣೆ ಕೂಡ ಸೇರಿದೆ.

ಕಟ್ಟಡದಲ್ಲಿ ಗೌಪ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ. ಇಲ್ಲಿ ವ್ಯಕ್ತಿಗಳ ಸಂಚಾರ ಮತ್ತು ಕಾರ್ಯಾಚರಣೆಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದರಿಂದ ಯಾವುದೇ ಲೋಪಕ್ಕೆ ಅವಕಾಶವಿಲ್ಲದ ಭದ್ರತಾ ವ್ಯವಸ್ಥೆ ಜಾರಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಆವರಣಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಭದ್ರತೆ ಒದಗಿಸಲು ಗೃಹ ಸಚಿವಾಲಯ ಅನುಮೋದನೆ ನೀಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿಬಿಐ ಕಂಡುಕೊಂಡಿದ್ದೇನು?

NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಸಿಬಿಐ ನಡೆಸಿದ ತನಿಖೆಯ ಹಿನ್ನೆಲೆಯಲ್ಲಿ ಪರೀಕ್ಷಾ ಭದ್ರತಾ ವ್ಯವಸ್ಥೆಯಲ್ಲಿ ಈ ಸಮಗ್ರ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ, ಸೋರಿಕೆಯಾದ ಪ್ರಶ್ನೆಪತ್ರಿಕೆಯ ಪ್ರಮುಖ ಮೂಲಗಳಾಗಿ ಮೂವರು ವಿಷಯ ತಜ್ಞರನ್ನು ಗುರುತಿಸಲಾಗಿದೆ.

NTA ಕಚೇರಿಯ ಗೌಪ್ಯ ವಿಭಾಗಕ್ಕೆ ಪ್ರವೇಶಿಸುವಾಗ ಅಥವಾ ಅಲ್ಲಿಂದ ಹೊರಬರುವಾಗ ಈ ತಜ್ಞರಿಗೆ ಯಾವುದೇ ತಪಾಸಣೆ ಅಥವಾ ದೇಹ ತಪಾಸಣೆ ನಡೆಸಲಾಗುತ್ತಿರಲಿಲ್ಲ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಸಮ್ಮತ, ಪಾರದರ್ಶಕ ಮತ್ತು ಪ್ರಮಾಣೀಕೃತ ಪರೀಕ್ಷೆಗಳನ್ನು ನಡೆಸುವ ಉದ್ದೇಶದಿಂದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ 2017ರಲ್ಲಿ ಸ್ಥಾಪಿಸಲಾದ NTA, ಈ ಹಿಂದೆ ಓಖ್ಲಾದಲ್ಲಿರುವ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿತ್ತು.

2024ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ, ಸರ್ಕಾರವು ಇಸ್ರೋ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಪ್ರಶ್ನೆಪತ್ರಿಕೆ ನಿರ್ವಹಣೆ, ಅಭ್ಯರ್ಥಿಗಳ ನೋಂದಣಿ, ಪ್ರವೇಶ ಪತ್ರಗಳು, ಕಂಪ್ಯೂಟರ್ ಆಧಾರಿತ ಪರೀಕ್ಷೆ, ಒಎಂಆರ್ ಸಂಸ್ಕರಣೆ, ಫಲಿತಾಂಶ ವ್ಯವಸ್ಥೆ ಸೇರಿದಂತೆ ಪರೀಕ್ಷೆಗೆ ನಿರ್ಣಾಯಕವಾಗಿರುವ ವ್ಯವಸ್ಥೆಗಳಿಗೆ ಹೆಚ್ಚಿನ ಭದ್ರತಾ ನಿಯಂತ್ರಣಗಳನ್ನು ಅಳವಡಿಸಿಕೊಳ್ಳುವಂತೆ ಸಮಿತಿ ಶಿಫಾರಸು ಮಾಡಿತ್ತು.

ಪರೀಕ್ಷೆಗೆ ನಿರ್ಣಾಯಕವಾಗಿರುವ ಕಾರ್ಯಭಾರಗಳಿಗೆ ಕಟ್ಟುನಿಟ್ಟಿನ ಪ್ರವೇಶ ನಿಯಂತ್ರಣ, ಎನ್‌ಕ್ರಿಪ್ಶನ್ ಮಾನದಂಡಗಳು, ಬದಲಾಯಿಸಲಾಗದ ಲಾಗ್ ನಿರ್ವಹಣೆ ಹಾಗೂ ಯಾವುದೇ ರೀತಿಯ ಹಸ್ತಕ್ಷೇಪವನ್ನು ಪತ್ತೆಹಚ್ಚಬಹುದಾದ ಸಂಗ್ರಹ ವ್ಯವಸ್ಥೆ ಸೇರಿದಂತೆ ಹೆಚ್ಚುವರಿ ಕ್ರಮಗಳನ್ನು ಎನ್ ಟಿಎ ಇದೀಗ ಜಾರಿಗೊಳಿಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪರೀಕ್ಷೆಗೆ ಸಂಬಂಧಿಸಿದ ವ್ಯವಸ್ಥೆಗಳ ಭದ್ರತಾ ಸಿದ್ಧತೆಯ ಪರಿಶೀಲನೆಯನ್ನೂ ನಡೆಸಲಾಗುತ್ತದೆ. ಇದನ್ನು NTAಯ ತಂತ್ರಜ್ಞಾನ ಮತ್ತು ಪರೀಕ್ಷಾ ಭದ್ರತಾ ತಂಡಗಳ ಸಮನ್ವಯದಲ್ಲಿ ಕೈಗೊಳ್ಳಲಾಗುತ್ತದೆ. ಬಯೋಮೆಟ್ರಿಕ್ ದೃಢೀಕರಣ, ಮುಖ ಹೊಂದಾಣಿಕೆ, ಸಿಸಿಟಿವಿ ವ್ಯವಸ್ಥೆಗಳು ಹಾಗೂ ನೇರ ಮೇಲ್ವಿಚಾರಣೆಯ ಮೂಲಸೌಕರ್ಯಗಳನ್ನೂ ಈ ಪರಿಶೀಲನೆ ಒಳಗೊಂಡಿರಲಿದೆ.

ಇದಲ್ಲದೆ, ಪರೀಕ್ಷೆಗಳಿಗೆ ನಿರ್ದಿಷ್ಟವಾದ ಸೈಬರ್‌ ಘಟನೆಗಳಿಗೆ ಪ್ರತಿಕ್ರಿಯಿಸುವ ವ್ಯವಸ್ಥೆಯನ್ನೂ ಎನ್ ಟಿಎ ಜಾರಿಗೊಳಿಸುತ್ತಿದೆ. ಇದರಲ್ಲಿ ಸೆಕ್ಯುರಿಟಿ ಆಪರೇಷನ್ಸ್ ಸೆಂಟರ್ (SOC) ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಪರೀಕ್ಷೆಯ ದಿನಗಳಲ್ಲಿ ತ್ವರಿತ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಸೇರಿದೆ.

ಮಾಹಿತಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಎನ್ ಟಿಎ ಪ್ರತ್ಯೇಕ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) ಹುದ್ದೆಯನ್ನು ಗುರುತಿಸಿದೆ. ಜನರಲ್ ಮ್ಯಾನೇಜರ್ ಮತ್ತು ಸಿಐಎಸ್ ಒ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

CERT-In ಮತ್ತು C-DAC ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕ ಸ್ವತಂತ್ರ ತೃತೀಯ ಪಕ್ಷದ ಸೈಬರ್ ಭದ್ರತಾ ಲೆಕ್ಕಪರಿಶೋಧನೆಗಳೂ ಮುಂದುವರಿದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

10 Years Of Surgical Strike: ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ನೀತಿ; ಭಾರತದ ದಿಟ್ಟ ನಿಲುವಿಗೆ ಹೊಸ ಉದಾಹರಣೆ: ಪ್ರಧಾನಿ ಮೋದಿ

ಉತ್ತರ ಪ್ರದೇಶದಲ್ಲಿ ವರುಣನ ರೌದ್ರಾವತಾರ; 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ, ಅವಾಂತರಕ್ಕೆ 10 ಮಂದಿ ಬಲಿ, 17 ಜನರಿಗೆ ಗಾಯ..!

ಪಂಜಾಬ್ LPU ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ: ಕಿಡಿ ಹೊತ್ತಿಸಿದ ಸಾಮಾಜಿಕ ಜಾಲತಾಣದ ಸುಳ್ಳು ವದಂತಿ! ಅತ್ಯಾಚಾರ ಆರೋಪ ತಳ್ಳಿಹಾಕಿದ ಪೊಲೀಸರು

ಇನ್ನು ನಿಮ್ಮ ಆಟ ನಡೆಯಲ್ಲ, ಉಗ್ರವಾದ ನಿಲ್ಲಿಸಿ-ಬುದ್ಧಿ ಕಲಿಯಿರಿ: ಸುಳ್ಳು ಹೇಳಿದ ‘ಸರಣಿ ಭಯೋತ್ಪಾದಕ’ Pakಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು..!

'ಅವರ ಹತ್ತಿರ ದುಡ್ಡೇ ಇಲ್ಲ, ಸಂಕಷ್ಟದಲ್ಲಿದ್ದಾರೆ': ಸಂಧಾನ ಪ್ರಸ್ತಾಪ ಕಸದ ಬುಟ್ಟಿಗೆ ಎಸೆದು, Iran ಸ್ಥಿತಿ ಲೇವಡಿ ಮಾಡಿದ ಡೊನಾಲ್ಡ್ ಟ್ರಂಪ್..!