ಸುಪ್ರೀಂಕೋರ್ಟ್ 
ದೇಶ

ಚಲಿಸುವ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ನಿರ್ಭಯಾ ಪ್ರಕರಣ ಕಣ್ಣಮುಂದೆ ಬರುತ್ತಿದೆ: ಸ್ವಯಂಪ್ರೇರಿತವಾಗಿ ಕೇಸ್ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್..!

ಇಂತಹ ಘಟನೆಗಳು ಕಾನೂನು ಜಾರಿ ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಎತ್ತಿ ತೋರಿಸುವುದರ ಜೊತೆಗೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಕುರಿತು ಗಂಭೀರ ಕಳವಳ ಮೂಡಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.

ನವದೆಹಲಿ: ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶಾದ್ಯಂತ ಆತಂಕ ಮೂಡಿಸಿರುವ ಬೆನ್ನಲ್ಲೇ, ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಈ ಘಟನೆ 2012ರ ನಿರ್ಭಯಾ ಪ್ರಕರಣವನ್ನು ನೆನಪಿಸುತ್ತಿದೆ ಎಂದು ಹೇಳಿದೆ.

ಇಂತಹ ಘಟನೆಗಳು ಕಾನೂನು ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಆಗಸ್ಟ್ 4ರಂದು ಭಾರಿ ಮಳೆಯ ಸಂದರ್ಭದಲ್ಲಿ ಬಸ್‌ನ ಚಾಲಕ ಮತ್ತು ನಿರ್ವಾಹಕರಿಂದ ಸಹಾಯ ಕೋರಿದ್ದ ಬಾಲಕಿಯ ಮೇಲೆ ದೌರ್ಜನ್ಯ ನಡೆದಿತ್ತು.

ಇಂತಹ ಘಟನೆಗಳು ಕಾನೂನು ಜಾರಿ ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಎತ್ತಿ ತೋರಿಸುವುದರ ಜೊತೆಗೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಕುರಿತು ಗಂಭೀರ ಕಳವಳ ಮೂಡಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ. ವರದಿಗಳ ಆಧಾರದ ಮೇಲೆ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.

ಘಟನೆಗೆ ಸಂಬಂಧಿಸಿದ ಪರಿಸ್ಥಿತಿಗಳು ಹಾಗೂ ದೌರ್ಜನ್ಯದ ಕುರಿತು ಅಧಿಕಾರಿಗಳು ಕೈಗೊಂಡಿರುವ ಕ್ರಮಗಳನ್ನು ಸುಪ್ರೀಂಕೋರ್ಟ್ ಪರಿಶೀಲಿಸುವ ನಿರೀಕ್ಷೆಯಿದೆ.

ಮೈನ್‌ಪುರಿಯಿಂದ ನೋಯ್ಡಾಗೆ ತನ್ನ ಸಂಬಂಧಿಯನ್ನು ಭೇಟಿಯಾಗಲು ಪ್ರಯಾಣಿಸುತ್ತಿದ್ದ ಬಾಲಕಿ, ಭಾರಿ ಮಳೆ ಮತ್ತು ಕಡಿಮೆ ಗೋಚರತೆಯ ನಡುವೆ ತಪ್ಪಾಗಿ ಪಾರಿ ಚೌಕ್‌ನಲ್ಲಿ ಇಳಿದಿದ್ದಳು. ಬಳಿಕ ನೋಯ್ಡಾ ಸೆಕ್ಟರ್ 63ಕ್ಕೆ ಬಸ್ ತೆರಳಲಿದೆ ಎಂದು ನಿರ್ವಾಹಕ ಹೇಳಿದ ಹಿನ್ನೆಲೆಯಲ್ಲಿ, ಬಸ್‌ ಹತ್ತಿದ್ದಳು.

ಪೊಲೀಸ್ ಮೂಲಗಳ ಪ್ರಕಾರ, ಬಸ್ ಚಲಿಸಲು ಆರಂಭಿಸಿದ ಬಳಿಕ ನಿರ್ವಾಹಕ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಲು ಮುಂದಾದ ಎನ್ನಲಾಗಿದೆ. ಬಳಿಕ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಪ್ರತಿರೋಧಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಅದೇ ರಾತ್ರಿ ಆರೋಪಿಗಳು ಬಾಲಕಿಯನ್ನು ಕಾಶ್ಮೀರಿ ಗೇಟ್ ಬಸ್ ನಿಲ್ದಾಣದ ಸಮೀಪ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ನಂತರ ಬಾಲಕಿ ಕಾಶ್ಮೀರಿ ಗೇಟ್ ಪೊಲೀಸರನ್ನು ಸಂಪರ್ಕಿಸಿದ್ದು, ಮಹಿಳಾ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಆಕೆಗೆ ವೈದ್ಯಕೀಯ ಪರೀಕ್ಷೆ ನಡೆಸಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.

ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ಹಲ್ಲೆಗೆ ಸಂಬಂಧಿಸಿದ ಸೂಕ್ತ ಕಾನೂನು ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಬಸ್ ಹಾಗೂ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ನಿರ್ವಾಹಕನನ್ನು ತಿಮಾರ್ಪುರದ ಪಾರ್ಕಿಂಗ್ ಸ್ಥಳದಿಂದ ಬಂಧಿಸಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗಾಗಿ ಬಸ್‌ನ್ನು ವಶಕ್ಕೆ ಪಡೆಯಲಾಗಿದೆ. ತನಿಖೆಯ ಭಾಗವಾಗಿ ಪೊಲೀಸರು ಸಿಸಿಟಿವಿ ದೃಶ್ಯಗಳು ಸೇರಿದಂತೆ ಇತರ ಸಾಕ್ಷ್ಯಗಳನ್ನೂ ಸಂಗ್ರಹಿಸಿದ್ದಾರೆ.

ಸೂರಜ್‌ಪುರದ ಕಾರ್ಯಾಗಾರದಲ್ಲಿ ದುರಸ್ತಿಗೆ ಒಳಗಾಗಿದ್ದ ಬಸ್, ದುರಸ್ತಿ ಪೂರ್ಣಗೊಂಡ ಬಳಿಕ ಖಾಲಿಯಾಗಿ ವಾಪಸಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಚಾಲಕ ಮತ್ತು ನಿರ್ವಾಹಕ ತಿಮಾರ್ಪುರದ ಪಾರ್ಕಿಂಗ್ ಸ್ಥಳದತ್ತ ತೆರಳುತ್ತಿದ್ದ ವೇಳೆ ಪಾರಿ ಚೌಕ್‌ನಲ್ಲಿ ಬಾಲಕಿಯನ್ನು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಮತ್ತೊಂದು ಅತ್ಯಾಧುನಿಕ ‘Kingfish’ Drone Iran ವಶಕ್ಕೆ..!

'ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್' ಕಿಚ್ಚ ಸುದೀಪ್? ಚರ್ಚೆಗೆ ಗ್ರಾಸವಾಯ್ತು ಬಿಗ್ ಬಾಸ್ ಹೇಳಿಕೆ!

ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ?: ಟ್ರಂಪ್ ಸ್ಫೋಟಕ ಹೇಳಿಕೆ..!

ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ, IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ

BDA 100ನೇ 'ಓಪನ್ ಹೌಸ್' ಸಭೆ: ನಿವಾಸಿಗಳಿಂದ ಉತ್ತಮ ಪ್ರತಿಕ್ರಿಯೆ!