ಅಲ್ಲು ಸಿರಿಶ್ 
ದೇಶ

'ಹಬ್ಬ ಮುಗಿದರೂ ಇದು ಮಾತ್ರ ನಿಂತಿಲ್ಲ': ದೇವಾಲಯದಲ್ಲಿ ಜೋರಾಗಿ ಮ್ಯೂಸಿಕ್ ಹಾಕಿದ್ದಕ್ಕೆ ಪೊಲೀಸರಿಗೆ ಅಲ್ಲು ಶಿರಿಶ್ ದೂರು

'ನಮ್ಮ ಸಮಾಜದ ಅನೇಕ ಹಿರಿಯರು, ಮಕ್ಕಳು ಮತ್ತು ಉದ್ಯೋಗಸ್ಥರು ಇದರಿಂದ ತೊಂದರೆಗೀಡಾಗಿದ್ದಾರೆ ಹಾಗೂ ಈ ಹಿಂದೆ ಹಲವು ದೂರುಗಳನ್ನು ನೀಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದಿದ್ದಾರೆ.

ಹೈದರಾಬಾದ್: ಇಲ್ಲಿನ ದೇವಾಲಯವೊಂದರಲ್ಲಿ ತಡರಾತ್ರಿಯಲ್ಲಿ ಜೋರಾಗಿ ಸಂಗೀತವನ್ನು ಹಾಕಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತೆಲುಗು ನಟ ಅಲ್ಲು ಶಿರಿಶ್ ಹೈದರಾಬಾದ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಹಾಗೂ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರ ಶಿರಿಶ್, ನಿಗದಿತ ಮಿತಿಗಿಂತ ಹೆಚ್ಚಿನ ಡೆಸಿಬಲ್‌ನೊಂದಿಗೆ ಹಾಕಲಾಗುತ್ತಿರುವ ಸಂಗೀತದಿಂದ ವೃದ್ಧರು ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದು, ಈ ವಿಷಯವನ್ನು ಪರಿಶೀಲಿಸುವಂತೆ ಪೊಲೀಸರನ್ನು ಕೋರಿದ್ದಾರೆ.

ಭಾನುವಾರ ರಾತ್ರಿ 'X'ನಲ್ಲಿ ಪೋಸ್ಟ್‌ ಮಾಡಿದ್ದು, 'ಗೌರವಾನ್ವಿತ ಹೈದರಾಬಾದ್ ನಗರ ಪೊಲೀಸರೇ, ನಾನು ಶೈಕ್‌ಪೇಟೆಯ 'ಅಪರ್ಣಾ ಒನ್' (Aparna One) ನಿವಾಸಿ. ಕಳೆದ ಕೆಲವು ದಿನಗಳಿಂದ ವಿನೋಬಾ ನಗರದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ರಾತ್ರಿ 2-3 ಗಂಟೆಯವರೆಗೂ, ನಿಗದಿತ ಮಿತಿಗಿಂತಲೂ ಹೆಚ್ಚಿನ ಶಬ್ದದೊಂದಿಗೆ (ಡೆಸಿಬಲ್) ಮ್ಯೂಸಿಕ್ ಹಾಕಲಾಗುತ್ತಿದೆ. ನಾನು ಫಿಲ್ಮ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಗಣೇಶ ವಿಸರ್ಜನೆ ಇರುವುದರಿಂದ ಸೆಪ್ಟೆಂಬರ್ 25ರವರೆಗೆ ಸಹಕರಿಸುವಂತೆ ಅವರು ನಮಗೆ ತಿಳಿಸಿದ್ದರು. ಆದರೆ ಹಬ್ಬ ಮುಗಿದಿದ್ದರೂ ಜೋರಾದ ಸಂಗೀತ ಮಾತ್ರ ನಿಂತಿಲ್ಲ' ಎಂದಿದ್ದಾರೆ.

'ನಮ್ಮ ಸಮಾಜದ ಅನೇಕ ಹಿರಿಯರು, ಮಕ್ಕಳು ಮತ್ತು ಉದ್ಯೋಗಸ್ಥರು ಇದರಿಂದ ತೊಂದರೆಗೀಡಾಗಿದ್ದಾರೆ ಹಾಗೂ ಈ ಹಿಂದೆ ಹಲವು ದೂರುಗಳನ್ನು ನೀಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ಈ ವಿಷಯವನ್ನು ಪರಿಶೀಲಿಸುವಂತೆ ಕೋರುತ್ತೇನೆ. ಧನ್ಯವಾದಗಳು' ಎಂದು ಅವರು ಹೇಳಿದರು.

ಸಿರಿಶ್ ತಮ್ಮ ಪೋಸ್ಟ್‌ನಲ್ಲಿ ಒಂದು ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ನ ನಂತರ, ಅಗತ್ಯ ಕ್ರಮಕ್ಕಾಗಿ ಈ ವಿಷಯವನ್ನು ಫಿಲ್ಮ್‌‌ನಗರದ ಎಸ್‌ಎಚ್‌ಒ (SHO) ಗಮನಕ್ಕೆ ತರಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚಲಿಸುವ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ನಿರ್ಭಯಾ ಪ್ರಕರಣ ಕಣ್ಣಮುಂದೆ ಬರುತ್ತಿದೆ: ಸ್ವಯಂಪ್ರೇರಿತವಾಗಿ ಕೇಸ್ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್..!

Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಮತ್ತೊಂದು ಅತ್ಯಾಧುನಿಕ ‘Kingfish’ Drone Iran ವಶಕ್ಕೆ..!

'ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್' ಕಿಚ್ಚ ಸುದೀಪ್? ಚರ್ಚೆಗೆ ಗ್ರಾಸವಾಯ್ತು ಬಿಗ್ ಬಾಸ್ ಹೇಳಿಕೆ!

ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ?: ಟ್ರಂಪ್ ಸ್ಫೋಟಕ ಹೇಳಿಕೆ..!

ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ, IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ