ಜೋಸೆಫ್ ವಿಜಯ್, ಉದಯನಿಧಿ ಸ್ಟಾಲಿನ್ 
ದೇಶ

ಹಿಂದು ವಿರೋಧಿ ಬಾಯಲ್ಲಿ 'ಓಂ ಕಾಳಿ, ಜೈ ಕಾಳಿ' ಘೋಷಣೆ: CM ಜೋಸೆಫ್ ವಿಜಯ್ ಎದುರಿಸಲು ಉದಯನಿಧಿ ಸ್ಟಾಲಿನ್ ಹೊಸ ತಂತ್ರ!

ತಮಿಳುನಾಡಿನ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಎತ್ತಿರುವ ಘೋಷಣೆಗೆ ಪ್ರತಿಯಾಗಿ 'ಓಂ ಕಾಳಿ, ಜೈ ಕಾಳಿ' ಎಂದು ಜಪಿಸುವಂತೆ DMK ನಾಯಕ ಉದಯನಿಧಿ ಸ್ಟಾಲಿನ್ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ತಮಿಳುನಾಡಿನ ಜೋಸೆಫ್ ವಿಜಯ್ ನೇತೃತ್ವದ (TVK) ಸರ್ಕಾರ ಎತ್ತಿರುವ ಘೋಷಣೆಗೆ ಪ್ರತಿಯಾಗಿ 'ಓಂ ಕಾಳಿ, ಜೈ ಕಾಳಿ' ಎಂದು ಜಪಿಸುವಂತೆ (DMK) ನಾಯಕ ಉದಯನಿಧಿ ಸ್ಟಾಲಿನ್ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ತಮ್ಮ ಪಕ್ಷವನ್ನು ಗುರಿಯಾಗಿಸಿಕೊಂಡಿರುವ ವಿರೋಧ ಪಕ್ಷದ ಟಿವಿಕೆ ಘೋಷಣೆಗೆ ಪ್ರತಿಯಾಗಿ 'ಓಂ ಕಾಳಿ, ಜೈ ಕಾಳಿ ಎಂದು ಹೇಳುವ ಮೂಲಕ ಎದುರಿಸುವಂತೆ ಸ್ಟಾಲಿನ್ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಸೆಪ್ಟೆಂಬರ್ 27 ರಂದು ಪಕ್ಷದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಉದಯನಿಧಿ ಈ ಹೇಳಿಕೆ ನೀಡಿದ್ದಾರೆ.

ವಿಜಯ್ ತಮ್ಮ ರಾಜಕೀಯ ರ್ಯಾಲಿಗಳಲ್ಲಿ ಡಿಎಂಕೆಯನ್ನು ಗುರಿಯಾಗಿಸಿಕೊಂಡು ಡಿಎಂಕೆ ಒರು ಥೀಯಾ ಶಕ್ತಿ (ಡಿಎಂಕೆ ಒಂದು ದುಷ್ಟ ಶಕ್ತಿ) ಎಂಬ ಘೋಷಣೆ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ‘ಓಂ ಕಾಳಿ, ಜೈ ಕಾಳಿ… ಟಿವಿಕೆ ಒರು ಓಡುಗಾಳಿ’ (ಟಿವಿಕೆ ಓಡಿಹೋಗುವವರು) ಎಂಬ ಹೊಸ ಘೋಷಣೆಯನ್ನು ರೂಪಿಸಿದ ಉದಯನಿಧಿ, ಕಾರ್ಯಕರ್ತರೊಂದಿಗೆ ಸೇರಿ ಘೋಷಣೆ ಮೊಳಗಿಸಿದರು. ಅಲ್ಲದೆ, ಪಕ್ಷದ ಮುಖ್ಯಸ್ಥರ ಹೆಸರನ್ನು ಉಲ್ಲೇಖಿಸದೆ ಈ ಘೋಷಣೆಯನ್ನು ಜನರ ಬಳಿಗೆ ಕೊಂಡೊಯ್ಯುವಂತೆ ಸೂಚಿಸಿದರು.

ಅವರ ಹೆಸರನ್ನು ಉಲ್ಲೇಖಿಸುವ ಅಗತ್ಯವಿಲ್ಲ. ಅವರ ಪಕ್ಷದ ಹೆಸರಿನೊಂದಿಗೆ ಓಂ ಕಾಳಿ, ಜೈ ಕಾಳಿ ಎಂದು ಹೇಳಿ. ನೀವು ಪ್ರತಿ ಚುನಾವಣಾ ರ್ಯಾಲಿಯಲ್ಲಿ ಸಾರ್ವಜನಿಕರನ್ನು ಭೇಟಿಯಾದಾಗಲೆಲ್ಲಾ ಇದನ್ನು ಪುನರಾವರ್ತಿಸುತ್ತಿರಿ. ಅದನ್ನು ಜನರ ಮನಸ್ಸಿನಲ್ಲಿ ದೃಢವಾಗಿ ಬೇರೂರುವಂತೆ ಮಾಡಿ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.

ಕರೂರಿನಲ್ಲಿ 40 ಜನರ ಜೀವವನ್ನು ಬಲಿ ಪಡೆದ ಕಾಲ್ತುಳಿತದ ಬಗ್ಗೆಯೂ ಉದಯನಿಧಿ ವಿಜಯ್ ಸರ್ಕಾರವನ್ನು ಗುರಿಯಾಗಿಸಿಕೊಂಡರು. ವಿರೋಧ ಪಕ್ಷವು ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಆರೋಪಿಸಿದರು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅವರ ಪ್ರಯತ್ನಗಳನ್ನು ಸಾರ್ವಜನಿಕರು ಶೀಘ್ರದಲ್ಲೇ ಅರ್ಥಮಾಡಿಕೊಳ್ಳುತ್ತಾರೆ ಎಂದು ಆಶಿಸುತ್ತೇನೆ. ಮುಂಬರುವ ಚುನಾವಣೆಗಳಿಗೆ ಮುಂಚಿತವಾಗಿ ಮನೆ-ಮನೆ ಪ್ರಚಾರ ಮತ್ತು ಸಾರ್ವಜನಿಕ ಸಭೆಗಳ ಸಮಯದಲ್ಲಿ ಈ ಪ್ರತಿ-ಘೋಷಣೆಯನ್ನು ಜೋರಾಗಿ ಎತ್ತುವಂತೆ ಅವರು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತೈಲಾಘಾತಕ್ಕೆ ಷೇರುಪೇಟೆ ತತ್ತರ; ಒಂದೇ ತಿಂಗಳಲ್ಲಿ ಸೆನ್ಸೆಕ್ಸ್-ನಿಫ್ಟಿ ಶೇ.5ಕ್ಕೂ ಹೆಚ್ಚು ಕುಸಿತ, 17 ಲಕ್ಷ ಕೋಟಿ ರೂ ನಷ್ಟ

ಕೋರ್ಟ್​ನಲ್ಲಿ ಸತತ ಮೂರು ಗಂಟೆಗಳ ಕಾಲ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿದ ಪ್ರದೋಷ್; ದರ್ಶನ್ ಬಗ್ಗೆ ಹೇಳಿದ್ದೇನು?

ಕರ್ನಾಟಕದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರದ 3 ತಂಡ: ಜಿ ಪರಮೇಶ್ವರ್

ಕನಕಪುರ ರಸ್ತೆಯಲ್ಲಿ ಭೀಕರ ಅಪಘಾತ; ಬೈಕ್ ಗೆ ಟಿಪ್ಪರ್ ಢಿಕ್ಕಿ, ಪತಿ ಜೊತೆ ಹೋಗುತ್ತಿದ್ದ ಪತ್ನಿ ಸಾವು!

'Rise and Fall' Season 2: BJP ಮಾಜಿ ವಕ್ತಾರ ಶಹಜಾದ್ ಮೇಲೆ ಹಲ್ಲೆ, ಶೋಯಿಂದ ಶಿವೇತ್ ತೋಮರ್ ಕಿಕ್ ಔಟ್?, Video