ಮೃತ ಯುವತಿ  
ದೇಶ

ಮದುವೆಯಾಗು ಅಂದಿದ್ದೇ ತಪ್ಪಾ? ಹೋಟೆಲ್‌ನಲ್ಲಿ ಯುವತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹಂತಕ ಬಾಯ್‌ಫ್ರೆಂಡ್ ಬಂಧನ!

ಪೊಲೀಸರು ಕೊನೆಗೂ ಪ್ರಕರಣ ಭೇದಿಸಿದ್ದು, ಮೃತ ಯುವತಿ ಶರೋನ್ ನಿಕಿತಾ ಟೋಪ್ನೊ(29) ಅವರನ್ನು ಕೊಲೆ ಮಾಡಿದ ಆರೋಪ ಮೇಲೆ ಆಕೆಯ ಗೆಳೆಯ ಶ್ರೀನಿವಾಸ್ ರವಿ ತೇಜ ಎಂಬಾತನನ್ನು ಬಂಧಿಸಿದ್ದಾರೆ.

ಹೈದರಾಬಾದ್: ಹೈದರಾಬಾದ್‌ನ ಓಯೋ ಹೋಟೆಲ್‌, ಗೋಕುಲ್ ಪ್ರೈಡ್‌ನಲ್ಲಿ ಕಳೆದ ಮಂಗಳವಾರ ಬೆಳಗಿನ ಜಾವ ಯುವತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ಅನುಮಾನಾಸ್ಪದ ಸಾವು ಗಮನಿಸಿದ ಹೋಟೆಲ್ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹೋಟೆಲ್ ಗೆ ಆಗಮಿಸಿ ಸಿ ಗಣೇಶ್ ಹೆಸರಿನಲ್ಲಿ ದಾಖಲಾಗಿದ್ದ ಕೊಠಡಿಯನ್ನು ಪರಿಶೀಲಿಸಿದ್ದಾರೆ.

ಘಟನೆಯ ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಪ್ರಕರಣ ಭೇದಿಸಿದ್ದು, ಮೃತ ಯುವತಿ ಶರೋನ್ ನಿಕಿತಾ ಟೋಪ್ನೊ(29) ಅವರನ್ನು ಕೊಲೆ ಮಾಡಿದ ಆರೋಪ ಮೇಲೆ ಆಕೆಯ ಗೆಳೆಯ ಶ್ರೀನಿವಾಸ್ ರವಿ ತೇಜ ಎಂಬಾತನನ್ನು ಬಂಧಿಸಿದ್ದಾರೆ.

ಶರೋನ್ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಕಾರಣ ಆಕೆಯನ್ನು ಕೊಂದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.

ಕೊಲೆ ಮಾಡಿದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನು ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಯಿಂದ(ಕೆಜಿಎಚ್) ಬಿಡುಗಡೆಯಾದ ನಂತರ ಮಾಧಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಶಾಖಪಟ್ಟಣದ ಖಾಸಗಿ ಕಂಪನಿಯ ಉದ್ಯೋಗಿ ನಿಖಿತಾ ಮತ್ತು ರವಿತೇಜ ಸೆಪ್ಟೆಂಬರ್ 21 ರ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧಾಪುರದ ಸಿದ್ದಿಕಿ ನಗರದ ರಸ್ತೆ ಸಂಖ್ಯೆ 5 ರಲ್ಲಿರುವ ಹೋಟೆಲ್‌ನ ಕೊಠಡಿ ಸಂಖ್ಯೆ 304 ರಲ್ಲಿ ತಂಗಿದ್ದರು. ಆ ರಾತ್ರಿಯೇ ಯುವತಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ, ನಿಕಿತಾ ಪ್ರಜ್ಞಾಹೀನಳಾಗಿದ್ದಾಳೆಂದು ರವಿತೇಜ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದು, ಅವರ ಸಹಾಯದಿಂದ ಅವರನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಆಕೆ ಮೃತಪಟ್ಟಿದ್ದಾರೆಂದು ಘೋಷಿಸಿದರು. ನಂತರ ರವಿತೇಜ ಆಸ್ಪತ್ರೆಯಿಂದ ಪರಾರಿಯಾಗಿ ತಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದಾರೆ.

ನಿಕಿತಾ ಅವರ ಮುಖ ಮತ್ತು ತಲೆಯ ಮೇಲೆ ಗಾಯಗಳಾಗಿರುವುದನ್ನು ಪೊಲೀಸರು ಗಮನಿಸಿದರು. ಗೋಡೆ ಮತ್ತು ಬೆಡ್‌ಶೀಟ್‌ಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದರಿಂದ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿ, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(1) ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದರು ಮತ್ತು ಆರೋಪಿ ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬರದಿಂದ ಕೆಂಗೆಟ್ಟ ಕರ್ನಾಟಕಕ್ಕೆ ಕೇಂದ್ರದ ನೆರವಿನ ನಿರೀಕ್ಷೆ; 'ಅ.3ರಿಂದ ಕೇಂದ್ರ ತಂಡದ ಸಮೀಕ್ಷೆ': ಎಚ್ ಡಿ ಕುಮಾರಸ್ವಾಮಿ

ಕಥುವಾದಲ್ಲಿ ಘೋರ ಕೃತ್ಯ: ಓರ್ವ ಅಧಿಕಾರಿ ಸೇರಿ ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ CISF ಯೋಧ!

ಉಪ್ಪು 'ಆರೋಗ್ಯಕ್ಕೆ ಹಾನಿಕರ': ಸಾಲ್ಟ್ ಸೇವನೆ ಕುರಿತು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ; ದುಬಾರಿ ಆದ್ರೂ ಚಿಂತೆ ಇಲ್ಲ ಎಂದ ಸಚಿವರು!

ಮಹಿಳೆಯ ಕತ್ತು ಸೀಳಿ, ಆಕೆಯ ದೇಹವನ್ನು 9 ತುಂಡುಗಳಾಗಿ ಕತ್ತರಿಸಿ, ಕಾಲುವೆಗೆ ಎಸೆದ ಮಟನ್ ಶಾಪ್ ಶಫಿ!

SP-ಕಾಂಗ್ರೆಸ್ ಮೈತ್ರಿಯಲ್ಲಿ ಬಿರುಕು ಹೆಚ್ಚಳ?: ಉತ್ತರ ಪ್ರದೇಶ ಸೀಟು ಹಂಚಿಕೆ ಕಗ್ಗಂಟು, INDIA ಬ್ಲಾಕ್ ಸಭೆಗೆ ಅಖಿಲೇಶ್ ಯಾದವ್ ಗೈರು!