ವೈಷ್ಣವಿ  
ದೇಶ

45 ಲಕ್ಷ ರೂ. ವೆಚ್ಚದಲ್ಲಿ ಅದ್ಧೂರಿ ಮದುವೆ: ನಾಲ್ಕೇ ತಿಂಗಳಿಗೆ ಟೆಕ್ಕಿ ಆತ್ಮಹತ್ಯೆ!

ಆತ್ಮಹತ್ಯೆಗೆ ಶರಣಾದ ಯುವತಿಯನ್ನು ವೈಷ್ಣವಿ ಓಂಕಾರ್ ಗಿಸ್ರೆ (24) ಎಂದು ಗುರುತಿಸಲಾಗಿದ್ದು, ಮೇ 9 ರಂದು ಓಂಕಾರ್ ಸಂಜಯ್ ಗಿಸ್ರೆ (28) ಅವರನ್ನು ವಿವಾಹವಾಗಿದ್ದರು.

ಪುಣೆ: ಅದ್ಧೂರಿಯಾಗಿ ಮದುವೆಯಾದ ಕೇವಲ ನಾಲ್ಕು ತಿಂಗಳ ನಂತರ, 24 ವರ್ಷದ ಎಂಜಿನಿಯರ್ ಒಬ್ಬರು ಪುಣೆಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳದಿಂದ ಯುವತಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಆತ್ಮಹತ್ಯೆಗೆ ಶರಣಾದ ಯುವತಿಯನ್ನು ವೈಷ್ಣವಿ ಓಂಕಾರ್ ಗಿಸ್ರೆ (24) ಎಂದು ಗುರುತಿಸಲಾಗಿದ್ದು, ಮೇ 9 ರಂದು ಓಂಕಾರ್ ಸಂಜಯ್ ಗಿಸ್ರೆ (28) ಅವರನ್ನು ವಿವಾಹವಾಗಿದ್ದರು.

ಮಹಿಳೆಯ ಪೋಷಕರು ಕಳೆದ ಮೇ ತಿಂಗಳಲ್ಲಿ 45 ಲಕ್ಷ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಅಲ್ಲದೆ 116.64 ಗ್ರಾಂ ಚಿನ್ನವನ್ನು ಅಳಿಯನಿಗೆ ಗಿಫ್ಟ್ ನೀಡಿದ್ದಾರೆ. ಆದರೂ ಕಾರು ಖರೀದಿಸಲು ಇನ್ನೂ 5 ಲಕ್ಷ ರೂ. ನೀಡುವಂತೆ ಪತಿ ಮತ್ತು ಅತ್ತೆ-ಮಾವ ಒತ್ತಾಯಿಸುತ್ತಿದ್ದರು. ಇದೇ ಕಾರಣಕ್ಕೆ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪುರಂದರ ತಾಲೂಕಿನ ನಿವಾಸಿಯಾಗಿರುವ ಮಹಿಳೆಯ ತಂದೆ ಪ್ರವೀಣ್ ರಘುನಾಥ್ ಜರಂಡೆ(51) ಅವರು ಮಗಳ ಆತ್ಮಹತ್ಯೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಮದುವೆಗೆ ಸುಮಾರು 45 ಲಕ್ಷ ರೂ. ಖರ್ಚು ಮಾಡಿದ್ದಾಗಿ ಮತ್ತು 10 ತೊಲೆ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾಗಿ ಉಲ್ಲೇಖಿಸಿದ್ದಾರೆ.

ಮದುವೆ ನಂತರ ಕಾರು ಖರೀದಿಗೆ ಹಣ ತರುವಂತೆ ವೈಷ್ಣವಿಗೆ ಪದೇ ಪದೇ ಒತ್ತಾಯಿಸಲಾಗುತ್ತಿತ್ತು. ಆಕೆಗೆ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನೂ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆಯ ಪತಿ, ಮಾವ ಸಂಜಯ್ ಮಹಾದೇವ್ ಗಿಸ್ರೆ (49) ಮತ್ತು ಅತ್ತೆ ರೂಪಾಲಿ ಸಂಜಯ್ ಗಿಸ್ರೆ (42) ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ್ಪು ‘ಆರೋಗ್ಯಕ್ಕೆ ಹಾನಿಕರ’; ಸಾಲ್ಟ್ ಸೇವನೆ ಕುರಿತು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ: ದುಬಾರಿ ಆದ್ರೂ ಚಿಂತೆ ಇಲ್ಲ ಎಂದ ಸಚಿವರು!

CM ಡಿಕೆಶಿ - ಅಶೋಕ್​ ಖೇಣಿಯ ಆಡಿಯೋ ಬಿಡುಗಡೆ; ಇವತ್ತಿಂದು ಚಿಕ್ಕದು, ಅಲ್ಲೋಲ ಕಲ್ಲೋಲ ಆಗೋದು ಬೇರೆ ಇದೆ ಬ್ರದರ್​!

ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ ರದ್ದು: ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್! ವಿಡಿಯೋದಲ್ಲಿ ಹೇಳಿಕೊಂಡಿದ್ದೇನು?

ಮಾಫಿ ಸಾಕ್ಷಿ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ D Boss: ದರ್ಶನ್-ವಿಜಯಲಕ್ಷ್ಮಿಯಿಂದ ಮೂರು ಅರ್ಜಿ ಸಲ್ಲಿಕೆ!

ಪ್ರಧಾನಿ ಮೋದಿ ಪದವಿ ವಿವಾದ: ಕೇಜ್ರಿವಾಲ್ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್; 25 ಸಾವಿರ ರೂ. ದಂಡ!