ಈ ಪ್ರಕರಣದಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.  
ದೇಶ

1.2 ಲಕ್ಷ ರೂಗೆ ಶಿಶು ಮಾರಾಟ ಮಾಡಿ ಮೊಬೈಲ್, ಚಿನ್ನ ಖರೀದಿಸಿದ ದಂಪತಿ!

ಜುಲೈ 5 ರಂದು ಜನಿಸಿದ ತನ್ನ ಮಗುವನ್ನು ಆಗಸ್ಟ್ 7 ರಂದು ಕೌಶಲ್ಯ ಪವಾರ್ ಮತ್ತು ಆಕೆಯ ಮಗಳು ಸೀಮಾ ರೇಶ್ವಾಲ್ ಎಂಬುವವರು ಕರೆದೊಯ್ದಿದ್ದಾರೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಛತ್ರಪತಿ ಸಂಭಾಜಿನಗರ: 'ಲಿವ್-ಇನ್' ಸಂಬಂಧದಲ್ಲಿದ್ದ ದಂಪತಿಯೊಬ್ಬರು ತಮ್ಮ ಸುಮಾರು ಒಂದು ತಿಂಗಳ ಹಸುಗೂಸನ್ನು 1.2 ಲಕ್ಷ ರೂ.ಗೆ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. ಮಾರಾಟದ ನಂತರ ಆ ಮಗುವನ್ನು ಹೈದರಾಬಾದ್‌ಗೆ ಸಾಗಿಸುವ ಮುನ್ನ ಹಲವು ಬಾರಿ ಮರು ಮಾರಾಟ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಕೂಲಿ ಕಾರ್ಮಿಕರಾಗಿರುವ ಆ ದಂಪತಿ ಮಗು ಮಾರಾಟ ಮಾಡಿದ್ದು, ಬಂದ ಹಣದಲ್ಲಿ ಮೊಬೈಲ್ ಫೋನ್‌ಗಳು ಮತ್ತು ಚಿನ್ನವನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಮಗುವನ್ನು ರಕ್ಷಿಸಲಾಗಿದ್ದು, ಛತ್ರಪತಿ ಸಂಭಾಜಿನಗರದ ಅನಾಥಾಶ್ರಮವೊಂದರಲ್ಲಿ ಇರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

ಜುಲೈ 5 ರಂದು ಜನಿಸಿದ ತನ್ನ ಮಗುವನ್ನು ಆಗಸ್ಟ್ 7 ರಂದು ಕೌಶಲ್ಯ ಪವಾರ್ ಮತ್ತು ಆಕೆಯ ಮಗಳು ಸೀಮಾ ರೇಶ್ವಾಲ್ ಎಂಬುವವರು ಕರೆದೊಯ್ದಿದ್ದಾರೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ ನಂತರ ಈ ಮಾರಾಟ ಮತ್ತು ಮರುಮಾರಾಟದ ವಿಷಯ ಬೆಳಕಿಗೆ ಬಂದಿದೆ.

ಆ ಇಬ್ಬರು ಮಹಿಳೆಯರು ತನಗೆ ಮತ್ತು ತನ್ನ ಸಂಗಾತಿಗೆ (ಲಿವ್-ಇನ್ ಪಾರ್ಟ್ನರ್) ಒತ್ತಾಯಪೂರ್ವಕವಾಗಿ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿಕೊಂಡು, 1.2 ಲಕ್ಷ ರೂ. ನಗದನ್ನು ನೀಡಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ 23 ರಂದು ಮುಕುಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತನಿಖಾಧಿಕಾರಿ ಹರೇಶ್ವರ್ ಘುಗೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ

"ದಂಪತಿ ಲಿವ್-ಇನ್ ಸಂಬಂಧದಲ್ಲಿದ್ದು, ಕೂಲಿ ಕೆಲಸ ಮಾಡುತ್ತಾರೆ. ಗಂಡ ಕುಡಿತದ ಚಟ ಹೊಂದಿದ್ದಾನೆ. ಅವರು ಮಗುವನ್ನು 1.2 ಲಕ್ಷ ರೂ.ಗೆ ಮಾರಾಟ ಮಾಡಿದರು. ಮಾರಾಟದ ತಕ್ಷಣವೇ, ಅವರು 25,000 ರೂ.ಗೆ ಎರಡು ಮೊಬೈಲ್ ಫೋನ್‌ಗಳು ಮತ್ತು 62,000 ರೂ. ಮೌಲ್ಯದ ಚಿನ್ನವನ್ನು ಖರೀದಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ಕೌಶಲ್ಯ ಮತ್ತು ಮಗುವಿನ ತಾಯಿ ಒಟ್ಟಿಗೆ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಪರಸ್ಪರ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲ ಅಕ್ರಮ ಮಾರಾಟದ ನಂತರ ಮಗು ಇನ್ನೂ ಮೂರು ಬಾರಿ ಕೈ ಬದಲಾಯಿಸಿದೆ.

"ಸೀಮಾ ಆ ಮಗುವನ್ನು ಸಂಗೀತಾ ಅವ್ಹಾದ್ ಎಂಬ ಮಹಿಳೆಗೆ 2.7 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸಂಗೀತಾ ಅವರು 3.5 ಲಕ್ಷ ರೂ. ಪಡೆದ ನಂತರ, ತೆಲಂಗಾಣದ ಜಗತಿಯಾಲ್ ಜಿಲ್ಲೆಯ ಸುರೇಶ್ ಗುಂಟುಕಾ ಎಂಬುವವರಿಗೆ ಆ ಮಗುವನ್ನು ಹಸ್ತಾಂತರಿಸಿದ್ದರುಎಂದು ಘುಗೆ ಹೇಳಿದರು. 1.5 ಲಕ್ಷ ರೂ. 'ಲಾಭ'ದಲ್ಲಿ, ಕೌಶಲ್ಯಾ 1.1 ಲಕ್ಷ ರೂಪಾಯಿಯನ್ನು ತಮ್ಮ ಬಳಿ ಇಟ್ಟುಕೊಂಡರೆ, ಸೀಮಾ 40,000 ರೂಪಾಯಿ ಪಡೆದರು. ಅವರು ಈ ಹಣವನ್ನು ತಮ್ಮ ಸಾಲ ತೀರಿಸಲು ಬಳಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

ಈ ಮಧ್ಯೆ ಸುರೇಶ್ ಆ ಮಗುವನ್ನು ಹೈದರಾಬಾದ್‌ನಲ್ಲಿರುವ ತಮ್ಮ ಮಹಿಳಾ ಸಂಬಂಧಿಯೊಬ್ಬರಿಗೆ ಹಸ್ತಾಂತರಿಸಿದ್ದರು. "ಅವರು ಕೇವಲ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು 3.5 ಲಕ್ಷ ರೂಪಾಯಿ ಪಡೆದಿದ್ದರು. ಗಾರ್ಮೆಂಟ್ (ಬಟ್ಟೆ) ಉದ್ಯಮವನ್ನು ನಡೆಸುತ್ತಿರುವ ಆ ಮಹಿಳೆ, ಚಿಕಿತ್ಸೆ ಪಡೆದರೂ ಗರ್ಭಧರಿಸಲು ಸಾಧ್ಯವಾಗದ ಕಾರಣ ಮಗುವಿಗಾಗಿ ತೀವ್ರ ಹಂಬಲ ಹೊಂದಿದ್ದರು. ಮಗುವಿನೊಂದಿಗೆ ತುಂಬಾ ಆಪ್ತವಾಗಿದ್ದರು. ಹೀಗಾಗಿ ಆ ಮಗುವನ್ನು ಪಡೆಯಲು ಅವರು ತಪ್ಪು ಮಾರ್ಗವನ್ನು ಆರಿಸಿಕೊಂಡರು ಅಷ್ಟೇ ಎಂದು ಘುಗೆ ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಗಳು, ಕೌಶಲ್ಯಾ, ಸೀಮಾ, ಸಂಗೀತಾ, ಸುರೇಶ್ ಮತ್ತು ಹೈದರಾಬಾದ್‌ನ ಮಹಿಳೆಯನ್ನು ಬಂಧಿಸಲಾಗಿದೆ. ಆರೋಪಿಗಳು ಇದೇ ರೀತಿಯ ಇತರ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ನಮಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಸದ್ಯಕ್ಕೆ, ಮಗುವನ್ನು ಛತ್ರಪತಿ ಸಂಭಾಜಿನಗರದ ಅನಾಥಾಶ್ರಮವೊಂದರಲ್ಲಿ ಇರಿಸಲಾಗಿದೆ ಮತ್ತು ಮುಂದಿನ ಕ್ರಮದ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ನಿರ್ಧರಿಸಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಪ್ರಕ್ರಿಯೆ ಪೂರ್ಣಗೊಂಡ ಕೇಂದ್ರಾಡಳಿತ ಪ್ರದೇಶ, ರಾಜ್ಯಗಳಲ್ಲಿ ಫಾರ್ಮ್-6 ರದ್ದು: ಕೇಂದ್ರ ಚುನಾವಣಾ ಆಯೋಗ

ಪೈಲಟ್‌ಗಳ ನಡುವೆ ಜಗಳ, ಹೈಜಾಕ್ ಅಲರ್ಟ್; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್: ಆಗಿದ್ದೇನು?

Asian Games 2026: ಚೀನಾಗೆ ಶಾಕ್ ಕೊಟ್ಟು ಚಿನ್ನ ಗೆದ್ದ ಭಾರತ; ವಿಶ್ವ ದಾಖಲೆ ಬರೆದ ಮಹಿಳಾ ಆರ್ಚರಿ ಟೀಮ್..!

ಮರುತನಿಖೆಗೂ ಮುನ್ನ ಸೌಜನ್ಯ ಪ್ರಕರಣಕ್ಕೆ ಹಿನ್ನಡೆ: SIT ತಂಡದಿಂದ ಕೈಬಿಡುವಂತೆ ಎಎಸ್ ಪಿ ಪತ್ರ

Budgam encounter: LET ಮೋಸ್ಟ್ ವಾಂಟೆಡ್ ಉಗ್ರ ಹಾಶಿಮ್ ಮೂಸಾ ಹತ, ಮುಂದುವರೆದ ಸೇನಾ ಕಾರ್ಯಾಚರಣೆ