ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂಬರುವ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಶೂಟಿಂಗ್ ಇಂದು ಆಗಸ್ಟ್ 8ರಂದು ಆರಂಭವಾಗಿದೆ.
ಬೆಂಗಳೂರಿನಲ್ಲಿಯೇ 'ಟಾಕ್ಸಿಕ್' ಸಿನಿಮಾದ ಮುಹೂರ್ತ ನಡೆದಿದೆ.
ಯಶ್ ಅವರ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ 2 ವರ್ಷಗಳ ಬಳಿಕ ಯಶ್ ಅವರ ಹೊಸ ಸಿನಿಮಾ ಚಿತ್ರೀಕರಣ ಆರಂಭವಾಗಿದೆ.
ನಟ ಯಶ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಜೊತೆ 'ಟಾಕ್ಸಿಕ್' ಸಿನಿಮಾ ಮಾಡುತ್ತಿದ್ದಾರೆ.
'ಟಾಕ್ಸಿಕ್' ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕಿ ಗೀತಾ ಮೋಹನ್ ದಾಸ್, ನಿರ್ಮಾಪಕರು ಮತ್ತು ಚಿತ್ರತಂಡ ಇತ್ತು.
ಕೆವಿಎನ್ ಪ್ರೊಡಕ್ಷನ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿವೆ.
ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ಮಲಯಾಳಂ ನಟ ಶೈನ್ ಟಾಮ್ ಚಾಕೊ ಸೇರಿದಂತೆ ಹಲವು ಖ್ಯಾತ ತಾರೆಯರ ಬಳಗವಿದೆ.
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಕೂಡ ತಾರಾಗಣಕ್ಕೆ ಸೇರಬಹುದು ಎಂಬ ಸುದ್ದಿಯಿದೆ.
ಅಭಿಮಾನಿಗಳ ಮೂಲಕ ಚಿತ್ರಕ್ಕೆ ಕ್ಲಾಪ್ ಮಾಡಿಲುವ ಮೂಲಕ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.
ಚಿತ್ರದಲ್ಲಿ ಛಾಯಾಗ್ರಹಣವನ್ನು ರಾಜೀವ್ ರವಿ ನಿರ್ವಹಿಸಲಿದ್ದಾರೆ.