ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರು ತಮ್ಮ ತಂದೆ ಡಾ.ರಾಜಕುಮಾರ್ ಅವರ ಹುಟ್ಟಿ ಬೆಳೆದ ತಾಳವಾಡಿ ಸಮೀಪದ ದೊಡ್ಡಗಾಜನೂರಿನಲ್ಲಿ ಸಾಕ್ಷ್ಯ ಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ವರದಿ: ಗುಳಿಪುರ ನಂದೀಶ
ಮೇರುನಟ ರಾಜಕುಮಾರ್ ಅವರಿಗೆ ಅತ್ಯಂತ ಇಷ್ಟವಾದ ಸ್ಥಳಗಳಾದ ಅವರ ಹುಟ್ಟಿದ ಮನೆ, ಜಮೀನಿನಲ್ಲಿರುವ ಆಲದ ಮರ ಹಾಗೂ ವಿಶ್ರಾಂತ ಜೀವನ ಕಳೆಯಲೆಂದು ನಿರ್ಮಿಸಿದ್ದ ಹೊಸಮನೆ ಹಾಗೂ ಅವರು ಓಡಾಡುತ್ತಿದ್ದ ಸ್ಥಳಗಳಲ್ಲಿ ಈ ಚಿತ್ರೀಕರಣ ನಡೆಯಿತು.ಕಳೆದ ಎರಡು ದಿನಗಳಿಂದ ದೊಡ್ಡಗಾಜನೂರಿನ ಹೊಸಮನೆಯಲ್ಲೆ ತಮ್ಮ ಸ್ನೇಹಿತರ ಜೊತೆ ವಾಸ್ತವ್ಯ ಹೂಡಿದ್ದ ಪುನೀತ್ ರಾಜ್‌ಕುಮಾರ್ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ(ಬಿ.ಆರ್.ಟಿ) ಹುಲಿ ಸಂರಕ್ಷಿತ ಪ್ರದೇಶದ ವಿವಿಧೆಡೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.ಪುನೀತ್ ರಾಜ್‌ಕುಮಾರ್ ಅವರು ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಸಾಕ್ಷಚಿತ್ರವೊಂದನ್ನು ನಿರ್ಮಿಸುತ್ತಿದ್ದು, ಇದಕ್ಕಾಗಿ ಅರಣ್ಯ ಇಲಾಖೆಯ ಅನುಮತಿ ಪಡೆದು ಚಿತ್ರೀಕರಣ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈಗಾಗಲೇ ದಾಂಡೇಲಿ ಅರಣ್ಯ ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರೀಕರಣ ಮುಗಿಸಿರುವ ಪುನೀತ್‌ರಾಜ್‌ಕುಮಾರ್ ಮಂಗಳವಾರ ಜಿಲ್ಲೆಯ ಬಿ.ಆರ್.ಟಿ. ಹುಲಿಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಬಳಿಕ ತಮಿಳುನಾಡಿಗೆ ಸೇರಿದ ತಾಳವಾಡಿ ಸಮೀಪದ ದೊಡ್ಡ ಗಾಜನೂರಿಗೆ ತೆರಳಿ ಅವರು ವಾಸ್ತವ್ಯ ಹೂಡಿದ್ದರು.ಬಿ.ಆರ್.ಟಿ. ಹುಲಿಸಂರಕ್ಷಿತ ಪ್ರದೇಶದಲ್ಲಿ ಮಂಗಳವಾರದಿಂದ ಗುರುವಾರದವರೆಗೆ ಮೂರುದಿನಗಳ ಕಾಲ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಅರಣ್ಯ ಪ್ರದೇಶದ ಬೂದಿಪಡಗ, ಕುಳ್ಳೂರು ಹಾಗು ಬೂದಿಪಡಗದಲ್ಲಿರುವ ಕಾಡುಗಳ್ಳ ವೀರಪ್ಪನ್ ತಪ್ಪಿಸಿಕೊಂಡಿದ್ದ ಅರಣ್ಯ ಇಲಾಖೆಯ ಗೆಸ್ಟ್ ಹೌಸ್ ರಾಗಿಕಲ್ಲುಮಡುವಿನ ರಸ್ತೆ ಸೇರಿದFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos