ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಕೆಲ ಆ್ಯಪ್ ಗಳ ಮೂಲಕ ಅವುಗಳ ಪ್ರಸರಣ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರ ಬಂಧನ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.
ವಿವಾದಾತ್ಮಕ ಮಾಡೆಲ್-ನಟಿ ಗೆಹಾನಾ ವಸಿಷ್ಠ ಅಲಿಯಾಸ್ ವಂದನಾ ತಿವಾರಿ ಕೆನ್ರಿನ್ ಪ್ರೊಡಕ್ಷನ್ ಹೌಸ್ ಮತ್ತು ಈ ಕಂಪನಿಯ ಅಧ್ಯಕ್ಷರಾಗಿರುವ ಪ್ರದೀಪ್ ಬಕ್ಷಿ ಮತ್ತು ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ತಯಾರಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.ನಾವು ಪೋರ್ನ್ ಚಿತ್ರಗಳನ್ನು ಮಾಡುವುದಿಲ್ಲ, ಇದು ಸಾಮಾನ್ಯ ಶೃಂಗಾರವಾಗಿದೆ. ಇದು ಏಕ್ತಾ ಕಪೂರ್ ಅವರು ನಿರ್ಮಿಸಿದ್ದ ಗಂಧಿ ಬಾತ್‌ನಂತೆಯೇ ಇದೆ. ಮೊದಲು ಈ ವೀಡಿಯೊಗಳನ್ನು ನೋಡಿ ನಂತರ ತೀರ್ಪು ನೀಡುವಂತೆ ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ಒಂದು ವೀಡಿಯೊ ಕೂಡ ಪೋರ್ನ್ ವಿಭಾಗದಲ್ಲಿ ಬರುವುದಿಲ್ಲ. ನನಗೆ ಮುಂರಾಜ್ ಕುಂದ್ರಾ ಅವರ ಮಾಜಿ ಪಿಎ(ವೈಯಕ್ತಿಕ ಸಹಾಯಕ) ಉಮೇಶ್ ಕಾಮತ್ ಅವರು ಭಾರತದ ಕೆನ್ರಿನ್ ಪ್ರೊಡಕ್ಷನ್ ಹೌಸ್ ನ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಈ ಕಂಪನಿಯು ಅಶ್ಲೀಲ ಚಿತ್ರಗಳಿಗಾಗಿ ಅನೇಕ ಏಜೆಂಟರಿಗೆ ಒಪ್ಪಂದಗಳನ್ನು ನೀಡಿತು ಮತ್ತು ಧನಸಹಾಯವನ್ನು ಒದಗಿಸಿತು ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ, ಗೆಹಾನಾ ವಶಿಷ್ಠಾ ಮತ್ತು ಉಮೇಶ್ ಕಾಮತ್ ಅಶ್ಲೀಲ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದನ್ನು ಕೆನ್ರಿನ್ ಪ್ರೊಡಕ್ಷನ್ ಹೌಸ್ ಬ್ಯಾಂಕ್ರೊಲ್ ಮಾಡಿದೆ. ಅದೇ ಕಂಪನಿಯು ವಿಭಿನ್ನ ರೀತಿಯ ಅಶ್ಲೀಲ ಚಿತ್ರಗಳನ್ನು ಮಾಡುವ ಸಲುವಾಗಿ ಕೆಲವರಿಗೆ ಮುಂಗಡವಾಗಿ ಪಾವತಿ ಮಾಡಿದೆ ಎಂದು ಹೇಳಿದೆ.ಪ್ರಕರಣ ಸಂಬಂಧ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸೋಮವಾರ ರಾತ್ರಿ(ಜುಲೈ 19, 2021) ಅಶ್ಲೀಲ ಚಿತ್ರಗಳ ರಚನೆ ಮತ್ತು ಕೆಲವು ಆ್ಯಪ್‌ಗಳ ಮೂಲಕ ಪ್ರಕಟಿಸಿದ ಪ್ರಕರಣದಲ್ಲಿ ಅವರನ್ನು ಮುಂಬೈ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ.ಗೆಹಾನಾ ವಸಿಷ್ಠಗೆಹಾನಾ ವಸಿಷ್ಠಗೆಹಾನಾ ವಸಿಷ್ಠಗೆಹಾನಾ ವಸಿಷ್ಠFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos