ಕಿರಿಕ್ ಮಾಡಿದರೆ ಹೊಡಿಯೋಕೂ ಸೈ, ಪ್ರೀತಿ ಮಾಡೋರಿಗೆ ಜೀವ ಕೊಡೋಕೂ ಸೈ ಎನ್ನುವ ಮುದ್ದು ಹುಡುಗಿ 'ಗೀತಾ'.. ಈಗ ದೊಡ್ಡಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. 'ಗೀತಾ' ಧಾರಾವಾಹಿಯ ನಟಿ ಭವ್ಯಾಗೌಡ 'ಡಿಯರ್ ಕಣ್ಮಣಿ' ಸಿನಿಮಾದಲ್ಲಿ ಮುಖ್ಯವಾದ ಪಾತ್ರವೊಂದಕ್ಕೆ ಬಣ್ಣಹಚ್ಚಲಿದ್ದಾರೆ.
ಈಗಾಗಲೇ ಈ ಸಿನಿಮಾದಲ್ಲಿ ಬಿಗ್‍ಬಾಸ್ ಖ್ಯಾತಿಯ ಕಿಶನ್, ರೇಖಾದಾಸ್ ಅವರ ಮಗಳು ಸಾತ್ವಿಕಾ ಹಾಗೂ ಕ್ರಿಕೆಟಿಗ ಪ್ರವೀಣ್ ನಟಿಸುವ ಬಗ್ಗೆ ಸಿನಿಮಾ ತಂಡ ಘೋಷಿಸಿತ್ತು. ಈಗ ಇನ್ನೊಂದು ಮುಖ್ಯ ಪಾತ್ರದಲ್ಲಿ ಭವ್ಯಾ ಗೌಡ ನಟಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.'ಇದು ತ್ರಿಕೋನ ಪ್ರೇಮ ಕಥೆ ಅಲ್ಲ. ಈ ಸಿನಿಮಾದಲ್ಲಿ ನಾಲ್ವರು ನಟರು ಇದ್ದಾರೆ. ಸಿನಿಮಾದ ಕಥೆ ಕೂಡ ಅಷ್ಟೇ ಭಿನ್ನವಾಗಿದೆ. ನಾಲ್ವರು ನಟರಿಗೂ ಸಮಾನ ಪ್ರಮಾಣದ ಆದ್ಯತೆ ಸಿನಿಮಾದಲ್ಲಿ ಇದೆ' ಎಂದು ಸಿನಿಮಾದ ನಿರ್ದೇಶಕಿ ಹಾಗೂ ನಿರ್ಮಾಪಕಿ ವಿಸ್ಮಯಾ ಗೌಡ ಹೇಳಿದರು.ಭವ್ಯಾ ಗೌಡ ಅವರ ಪಾತ್ರದ ಬಗ್ಗೆ ಮಾತನಾಡಿದ ಅವರು, 'ಕಿರುತೆರೆಗಿಂತ ಭವ್ಯಾ ಇಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ನೀವು ಈ ಮೊದಲು ನೋಡಲು ಸಾಧ್ಯವಾಗಿರದಷ್ಟು ಬೇರೆ ರೀತಿಯಲ್ಲೇ ಭವ್ಯಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ' ಎಂದು ವಿಸ್ಮಯಾ ಹೇಳಿದರು.ಭವ್ಯಾ ಗೌಡ ಪಾತ್ರ ನಿಜ ಜೀವನಕ್ಕಿಂತ 8 ವರ್ಷ ದೊಡ್ಡವಳಾದ ಪಾತ್ರದಲ್ಲಿ ಭವ್ಯಾ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಗೀತಾ ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದ ಅವರು ಈ ಸಿನಿಮಾದಲ್ಲಿ ಸ್ವಲ್ಪ ಆಧುನಿಕವಾಗಿಯೂ ಕಾಣಲಿದ್ದಾರೆ.'ನಾನು ಗಗನಸಖಿ ಆಗಬೇಕು ಎಂದು ಕನಸು ಕಂಡಿದ್ದೆ. ಅದಕ್ಕಾಗಿ ಅರ್ಜಿಯನ್ನೂ ಹಾಕಿದ್ದೆ. ಅಷ್ಟರಲ್ಲಿ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬರಲು ಶುರುವಾಯಿತು. ನಟನೆಯನ್ನೇ ವೃತ್ತಿ ಮಾಡಿಕೊಳ್ಳಬೇಕು ಎಂದು ಅಂದುಕೊಂಡೆ. ಆದರೆ ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಲು ಅಮ್ಮ ಒಪ್ಪಲಿಲ್ಲ. ಗೀತಾ ಧಾರಾವಾಹಿ ನನಗೆ ಕನ್ನಡದ'ಇಲ್ಲಿವರೆಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿಲ್ಲ ಅಂತೇನಿಲ್ಲ. ಆದರೆ ನನಗೆ ಇಷ್ಟವಾಗುವ ಪಾತ್ರ ಸಿಕ್ಕಿಲ್ಲ. ಇಲ್ಲಿ ಗಟ್ಟಿಯಾದ ಒಂದು ಪಾತ್ರ ಇದೆ. ಚಾಲೆಂಜಿಂಗ್ ಆಗಿದೆ. ಇದರಲ್ಲಿರುವ ಪಾತ್ರ ಎಷ್ಟು ಇಷ್ಟ ಆಯಿತು ಅಂದ್ರೆ ಒಂದರೆಡು ದಿನ ನಾನು ಆ ಗುಂಗಿನಲ್ಲೇ ಇದ್ದೆ. ನಿಜ ಹೇಳಬೇಕು ಅಂದ್ರೆ ನನಗೆ ಈ ಸಿನಿಮಾಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡುವ ಖುಷಿಯೇ ಬೇರೆ. ಅದರಲ್ಲೂ ನನ್ನ ಧಾರಾವಾಹಿಯ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ಅವರು ಡೇಟ್ ಹೊಂದಿಸುವುದಾಗಿ ಹೇಳಿದ್ದು ತುಂಬಾ ಖುಷಿಯಾಯಿತು. ತುಂಬಾ ಪ್ರೀತಿಯಿಂದ ಈ ಸಿನಿಮಾ ಒಪ್ಪಿಕೊಂಡು ಮಾಡುತ್ತಿದ್ದೇನೆ' ಎಂದರು ಭವ್ಯಾ.'ಈ ಸಿನಿಮಾದ ಕಥೆ ಚೆನ್ನಾಗಿದೆ. ತಂಡ ಕೂಡ ಅಷ್ಟೇ ಶ್ರಮದಿಂದ ಕೆಲಸ ಮಾಡುತ್ತಿದೆ. 'ಡಿಯರ್ ಕಣ್ಮಣಿ'ಯ ಭಾಗವಾಗಿರುವ ಬಗ್ಗೆ ನನಗೆ ಖುಷಿಯಿದೆ. ಇಂತಹ ಪಾತ್ರ ಸಿಕ್ಕಾಗ ಎರಡು ಕಡೆ ಕೆಲಸ ಮಾಡಿದರೂ ಸಾರ್ಥಕತೆ ಸಿಗುತ್ತದೆ. ಗೀತಾ ತಂಡ ಕೂಡ ನನಗೆ ಬೆಂಬಲ ನೀಡುತ್ತಿದೆ. ಈ ಸಿನಿಮಾ ನನ್ನ ವೃತ್ತಿ ಬದುಕಿಗೆ ಬ್ರೇಕ್ ಕೊಡಲಿದನಟಿ ಭವ್ಯಾಗೌಡFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos