ಕನ್ನಡ ಚಿತ್ರರಂಗಕ್ಕೆ ಅಕ್ಷರಶ: ಬರ ಸಿಡಿಲು ಅಪ್ಪಳಿಸಿದೆ. ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಅನೇಕ ಕಲಾವಿದರನ್ನು ಕಳೆದುಕೊಂಡಿದ್ದ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿ ಬಿದ್ದಿದೆ. ದೊಡ್ಮನೆ ಕುಟುಂಬದ ಮೇರು ಪರ್ವತವೊಂದು ಕುಸಿದಿದ್ದು, ಅಭಿಮಾನಿಗಳನ್ನು ಕಣ್ಣೀರಲ್ಲಿ ಮುಳುಗಿಸಿದೆ. ನಾಡಿನಾದ್ಯಂತ ಶೋಕ ಸಾಗರ ಮಡ
ಇನ್ನೂ ಬಾಳಿ ಬದುಕಬೇಕಿದ್ದ, ಕನ್ನಡ ಚಿತ್ರರಂಗದಲ್ಲಿ ಮಿನುಗಬೇಕಾಗಿದ್ದ ಡಾ. ರಾಜ್ ಕುಮಾರ್ ಅವರ ತೃತೀಯ ಪುತ್ರ, ಪವರ್ ಸ್ಟಾರ್, ಕನ್ನಡದ ರಾಜಕುಮಾರ, ಯುವರಾಜ, ಅಪ್ಪು, ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಅಸ್ತಂಗತರಾಗಿದ್ದಾರೆ.1975 ಮಾರ್ಚ್ 17ರಂದು ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಮೂರನೇ ಪುತ್ರನಾಗಿ ಜನಿಸಿದ ಪುನೀತ್ ರಾಜ್ ಕುಮಾರ್, ಅಪ್ಪನ ನೆರಳಿನಲ್ಲಿ ಬೆಳೆದು ಬಂದು, ಚಿತ್ರನಟ, ಹಿನ್ನೆಲೆ ಗಾಯಕ, ನಿರೂಪಕರಾಗಿ ಖ್ಯಾತಿಗಳಿಸುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಪಡೆದಿದ್ದರು.ಸುಮಾರು 29 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಪುನೀತ್, ಬಾಲ ನಟನಾಗಿಯೇ ರಾಷ್ಟ್ರಪ್ರಶಸ್ತಿ ಪಡೆದಿದ್ದರು.ಬೆಟ್ಟದ ಹೂವು ಚಿತ್ರವನ್ನು ಯಾರು ತಾನೆ ಮರೆಯಲು ಸಾಧ್ಯ ಹೇಳಿ? ಈ ಸಿನಿಮಾದ ಬಿಸಿಲೇ ಇರಲಿ. ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೇ, ಹಾಡಲ್ಲಿ ಬಾಲನಟನಾಗಿ ಪುನೀತ್ ಅಭಿನಯಿಸಿದ್ದಂತೂ ಅದ್ಭುತ. ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದರು.ತನ್ನ ತಂದೆ ರಾಜ್ ಕುಮಾರ್ ಅವರ ಅಭಿನಯದ ವಸಂತ ಗೀತ (1980) ಭಾಗ್ಯದಾತ (1981) ಚಲಿಸುವ ಮೋಡಗಳು (1982) ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಶಿವಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಭಕ್ತ ಪ್ರಹ್ಲಾದ ಚಿತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ಮೆಚ್ಚುಗೆ ಪಡೆದಿದ್ದರು.ನಟ ಪುನೀತ್ ರಾಜ್ ಕುಮಾರ್ ಇತ್ತೀಚೆಗೆ ಮಾಡಿದ ಟ್ವೀಟ್ ವೊಂದು ಬಾರಿ ಕುತೂಹಲ ಮೂಡಿಸಿತ್ತು. ತಮ್ಮ ಹೋಮ್ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಮುಂದಿನ ಸಿನಿಮಾ ತಯಾರಾಗಲಿದೆ ಎಂದು ತಿಳಿಸಿದ್ದರು.2002ರಲ್ಲಿ ಅವರು ಮೊದಲ ಬಾರಿಗೆ ಅಪ್ಪು ಚಿತ್ರದ ಮೂಲಕ ನಾಯಕ, ನಟನಾಗಿ ಕಾಣಿಸಿಕೊಂಡಿದ್ದರು. ನಂತರ ಅವರ ಅಭಿ (2003) ವೀರ ಕನ್ನಡಿಗ (2004) ಮೌರ್ಯ ( 2004) ಆಕಾಶ್ (2005) ನಮ್ಮ ಬಸವ (2005) ಅಜಯ್ ( 2006) ಅರಸು (2007) ಚಿತ್ರಗಳು ಶತದಿನೋತ್ಸವ ಆಚರಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸಿದ್ಜಾಕೀ (2010) ಹುಡುಗರು (2011) ಪರಮಾತ್ಮ (2011) ಅಣ್ಣಾ ಬಾಂಡ್ (2012) ಯಾರೇ ಕೂಗಾಡಲಿ (2012) ನಿನ್ನಿಂದಲೇ (2014) ಮೈತ್ರಿ (2015) ಪವರ್ ಸ್ಟಾರ್ (2015) ಧೀರ ರಣ ವಿಕ್ರಮ, ಚಕ್ರವ್ಯೂಹ, ದೊಡ್ಮನೆ ಹುಡುಗ, ರಾಜಕುಮಾರ (2017) ಅಂಜನಿ ಪುತ್ರ, ನಟಸಾರ್ವಭೌಮ (2019) ಸೇರಿದಂತೆ ಇನ್ನಿತರ ಯಶಸ್ವಿ ಚಿತ್ರಗಳಲನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ಪುನೀತ್ ಅವರ ವೆಬ್ ಸೈಟ್ ಉದ್ಘಾಟನೆ ಆಗಬೇಕಿತ್ತು. ಆದರೆ, ದುರಾದೃಷ್ಟವಶಾತ್ ಪುನೀತ್ ರಾಜ್ ಕುಮಾರ್ ಬಾರದ ಲೋಕಕ್ಕೆ ತೆರಳಿದ್ದು, ಇನ್ನೂ ಅವರು ನೆನಪು ಮಾತ್ರ. ಮತ್ತೆ ಕನ್ನಡ ನಾಡಲ್ಲಿ ಹುಟ್ಟಿ ಬಾ ಅಪ್ಪು.ಕನ್ನಡದ ಕೋಟ್ಯಾಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟಿವಿ ಶೋನಲ್ಲಿ ಆಕರ್ಷಕ ನಿರೂಪಣೆ ಮೂಲಕ ಕನ್ನಡಿಗರ ಜನ ಮನ ಗೆದ್ದಿದ್ದರು. ಪತ್ನಿ ಅಶ್ವಿತಿ ರೇವಂತ್ ಹಾಗೂ ಇಬ್ಬರು ಪುತ್ರಿಯರಾದ ದ್ರಿತಿ, ವಂದಿತಾ ಹಾಗೂ ಸಹೋದರರಾದ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಕೋಟ್ಯಂತಪುನೀತ್ ರಾಜಕುಮಾರ್ ಕುಟುಂಬಪ್ರಧಾನಿ ಮೋದಿ ಜೊತೆ ಪುನೀತ್ಯಶ್, ಶಿವಣ್ಣ ಜೊತೆ ಪುನೀತ್