ಬಾಲಿವುಡ್ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಸುದ್ದಿಯಾಗಿದ್ದ ಕನ್ನಡದ ವರ್ಷಧಾರೆ ಚಿತ್ರದಲ್ಲಿ ನಟಿಸಿದ್ದ ಪಾಯಲ್ ಘೋಷ್ ಮೇಲೆ ದಾಳಿ ನಡೆಸಲಾಗಿದೆ.
ಮುಸುಕು ಹಾಕಿ ಕೊಂಡ ಗುಂಪೊಂದು ತಮ್ಮ ಮೇಲೆ ದಾಳಿ ನಡೆಸಿದೆ ಎಂದು ಪಾಯಲ್ ಹೇಳಿದ್ದಾರೆ. ಮುಂಬೈನಲ್ಲಿ ಮಳಿಗೆಯೊಂದರಿಂದ ಔಷಧಿ ಖರೀದಿಸಿ ವಾಪಸಾಗುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ ತಮ್ಮ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ವೀಡಿಯೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಅದರಲ್ಲಿ, ತಾವು ಕಾರಿನಲ್ಲಿ ತೆರಳುತ್ತಿದ್ದಾಗ ಕೆಲ ಮಂದಿ ಮುಸುಕು ಧರಿಸಿದ ವ್ಯಕ್ತಿಗಳು ರಾಡ್‌ನಿಂದ ದಾಳಿ ನಡೆಸಿದ್ದಾರೆ. ಅವರ ಕೈಯಲ್ಲಿ ಬಾಟಲಿ ಕೂಡಾ ಇತ್ತು. ಅದು ಆಸಿಡ್ ಎಂದು ತಾನು ಭಾವಿಸಿದ್ದಾಗಿ, ಆದರೆ, ತಾನು ದಾಳಿಯಿಂದ ಪಾರಾಗಿದ್ದಾಗಿ, ಎಡಗೈಗೆ ಸಣ್ಣ ಗಾಯವಾಗಿದೆ. ದಾಳಿಯ ಸಮಯದಲ್ಲಿ ಜೋರಾಗಿ ಕಿರುಚಿಕೊಂಡಇಂತಹ ಘಟನೆ ತನ್ನ ಜೀವನದಲ್ಲಿ ಎಂದೂ ನಡೆದಿರಲಿಲ್ಲ ಇದೇ ಮೊದಲು ಎಂದು ಪಾಯಲ್ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್ ಪ್ರಕರಣ ದಾಖಲಿಸಿದ್ದೇನೆ. ಈ ದಾಳಿಗೆ ಸಂಬಂಧಿಸಿದಂತೆ ಯಾರ ಮೇಲಾದರೂ ಅನುಮಾನವಿದೆಯೇ ಎಂಬ ಬಗ್ಗೆ ಮಾತನಾಡಿ, ಸ್ಪಷ್ಟವಾಗಿ ಗೊತ್ತಿರುವವರು ಈ ಕೃತ್ಯ ಎಸಗಿಲ್ಲ ಯೋಜನೆ ಪ್ರಕಾರ ನಡೆಸಿದ್ದಾರೆ. ಈ ಬಗ್ಗೆನಟಿಯನ್ನು ಭೇಟಿ ಮಾಡಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ನಟಿಗೆ ಪೊಲೀಸ್ ಭದ್ರತೆ ನೀಡುವಂತೆ ಆಗ್ರಹಿಸಿದ್ದಾರೆ.ಪಾಯಲ್ ಘೋಷ್ಪಾಯಲ್ ಘೋಷ್ಪಾಯಲ್ ಘೋಷ್ಪಾಯಲ್ ಘೋಷ್ಪಾಯಲ್ ಘೋಷ್