೫ ದಶಕಗಳ ಕಾಲ ಶ್ರೋತೃಗಳನ್ನು ರಂಜಿಸಿದ ಅವರ ಸಾಧನೆಯನ್ನು ಸರಿಗಟ್ಟುವುದು ಕಷ್ಟಸಾಧ್ಯ. ಕೊರೊನಾಗೆ ತುತ್ತಾಗಿ ನಿಧನರಾದ ಈ ಅದಮ್ಯ ಚೇತನಕ್ಕೆ ಚಿತ್ರ ನಮನ ಸಲ್ಲಿಸುವ ಪ್ರಯತ್ನ. 
ಸಿನಿಮಾ

40,000 ಹಾಡುಗಳು, 16 ಭಾಷೆಗಳು: ಗಾಂಧರ್ವ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಅಪರೂಪದ ಚಿತ್ರಗಳು 

5 ದಶಕಗಳ ಕಾಲ ಶ್ರೋತೃಗಳನ್ನು ರಂಜಿಸಿದ ಅವರ ಸಾಧನೆಯನ್ನು ಸರಿಗಟ್ಟುವುದು ಕಷ್ಟಸಾಧ್ಯ. ಕೊರೊನಾಗೆ ತುತ್ತಾಗಿ ನಿಧನರಾದ ಈ ಅದಮ್ಯ ಚೇತನಕ್ಕೆ ಚಿತ್ರ ನಮನ ಸಲ್ಲಿಸುವ ಪ್ರಯತ್ನ.

ಅವರು ಹುಟ್ಟಿದ್ದು 4, ಜೂನ್, 1946 ಮದ್ರಾಸ್ ನಲ್ಲಿ. ಚಿಕ್ಕ ವಯಸ್ಸಿನಲ್ಲೇ ಎಸ್ ಪಿ ಬಿ ಸಂಗೀತಾಭ್ಯಾಸ ಶುರು ಮಾಡಿದ್ದರು. 1966ರಲ್ಲಿ ತೆಲುಗು ಸಿನಿಮಾಗೆ ಹಾಡುವುದರೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದರು.
ಎಸ್ ಪಿ ಬಿ ಅವರಿಗೆ ಮೊದಲು ಬ್ರೇಕ್ ನೀಡಿದ್ದು ತಮಿಳು ನತ ಎಂಜಿಆರ್. 1969ರಲ್ಲಿ ತಮ್ಮ 'ಆದಿಪೆಣ್ಣೈ' ಸಿನಿಮಾಗೆ ಎಸ್ ಪಿ ಬಿ ಹಾಡಬೇಕೆಂದು ಅಪೇಕ್ಷೆ ಪಟ್ಟು ಅವರೇ ಕರೆಸಿದ್ದರು. ಆ ಸಿನಿಮಾದಲ್ಲಿ ಅವರು ಹಾಡಿದ 'ಆಯಿರಂ ನಿಲವೇ ವಾ' ಹಾಡು ಸೂಪರ್ ಹಿಟ್ ಆಯಿತು.
ಎಂಜಿಆರ್ ಹಾಡು ಹಿಟ್ ಆದ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. 40,000 ಹಾಡುಗಳವರೆಗೆ ಅವರ ಪಯನ ಸಾಗಿತು.
ಒಂದೇ ದಿನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕ ಎನ್ನುವ ರೆಕಾರ್ಡ್ ಎಸ್ ಪಿ ಬಿ ಅವರ ಹೆಸರಲ್ಲಿದೆ. ಅವರು ಫೆ.8, 1981ರಲ್ಲಿ ಕನ್ನಡ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರಿಗಾಗಿ ಒಂದೇ ದಿನದಲ್ಲಿ 21 ಹಾಡುಗಳನ್ನು ಹಾಡಿದ್ದರು.
ಎಸ್ ಪಿ ಬಿ ಇದುವರೆಗೂ 6 ನ್ಯಾಷನಲ್ ಅವಾರ್ಡ್ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಚಿತ್ರದಲ್ಲಿ ಆಂಧ್ರ ಪ್ರದೇಶ ಸಿ.ಎಂ ಆಗಿದ್ದ ಎನ್ ಟಿ ಆರ್ ಅವರಿಂದ ಸಂಗೀತ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ.
1981ರಲ್ಲಿ ಅವರು ಎಕ್ ದೂಜೆ ಕೆ ಲಿಯೆ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ತರು. ಕಮಲ್ ಹಾಸನ್ ಅವರಿಗೆ ಬ್ರೇಕ್ ನೀಡಿದ ಸಿನಿಮಾ ಅದು. ಚಿತ್ರದಲ್ಲಿ ನಟ ಕಮಲ್ ಹಾಸನ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ.
2001ರಲ್ಲಿ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾದರು. ಚಿತ್ರದಲ್ಲಿ ಎಸ್ ಪಿ ಪಕ್ಕದಲ್ಲಿ ಕೂಲಿತಿರುವವರು ಅವರ ಪತ್ನಿ ಸಾವಿತ್ರಿ.
ಎಸ್ ಪಿ ಮತ್ತು ಇಳಯರಾಜಾ ಕಾಂಬಿನೇಷನ್ ಎಂದರೆ ಸೂಪರ್ ಹಿಟ್ ಎನ್ನುವ ನಂಬಿಕೆ ಒಂದು ಕಾಲದಲ್ಲಿ ಮನೆಮಾತಾಗಿತ್ತು.
1996ರಲ್ಲಿ ಎ ಆರ್ ರಹಮಾನ್ ಅವರು ಸಂಯೋಜಿಸಿದ ತಮಿಳು ಹಾಡಿಗೆ ಎಸ್ ಪಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದರು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ.
ತೆಲುಗು ಸಿನಿಮಾದ ದಿಗ್ಗಜ ಎಲ್ ವಿ ಪ್ರಸಾದ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಬಾಲು
ಗಾಯಕಿ ಪಿ.ಸುಶೀಲಾ ಅವರಿಂದ ಆಶೀರ್ವಾದ ಪಡೆಯುತ್ತಿರುವ ಎಸ್ ಪಿ.
ಚಿತ್ರರಂಗಕ್ಕೆ ಬಂಡು 50 ವಸಂತ ಪೂರೈಸಿದ ಸಂದರ್ಭ ಗಾಯಕ ಜೇಸುದಾಸ್ ಆವರ ಪಾದ ಪೂಜೆ ಮಾಡುತ್ತಿರುವ ಎಸ್ ಪಿ ಬಿ ದಂಪತಿ.
ಎಸ್ ಪಿ ಬಿ ಜೊತೆ ಕರ್ನಾಟಕ ಸಂಗೀತ ಗಾಯಕ ಬಾಲಮುರಳಿಕೃಷ್ಣ, ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್ ಮತ್ತು ಗೀತ ರಚನೆಕಾರ ವಾಲಿ
ಲತಾ ಮಂಗೇಷ್ಕರ್ ಅವರಿಗೆ ಕರುಣಾನಿಧಿ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಸಂದರ್ಭ, ವೇದಿಕೆ ಮೇಲೆ ಎಸ್ಪಿ, ರಜಿನಿ ಕಾಂತ್ ಮತ್ತು ಕಮಲ್ ಹಾಸನ್
5 ತಲೆಮಾರುಗಳ ಜನರಿಗೆ ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಹಾಗೆ ವಿವಿಧ ಬಗೆಯ ಹಾಡುಗಲನ್ನು ನೀಡಿದ ಎಸ್ ಪಿ ಬಿ ಸೆಪ್ತೆಂಬರ್ 25, 2020ರಂದು ವಿಧಿವಶರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT