ಮಿಸ್ ವರ್ಲ್ಡ್ 2021 ಸ್ಪರ್ಧೆಯಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಅವರು ಮೊದಲ ರನ್ನರ್ ಆಪ್ ಸ್ಥಾನ ಪಡೆದಿದ್ದಾರೆ. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ) 
ಸಿನಿಮಾ

ಮಿಸ್ ವರ್ಲ್ಡ್ 2021: ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಮೊದಲ ರನ್ನರ್ ಆಪ್ ಸ್ಥಾನ!

ಮಿಸ್ ವರ್ಲ್ಡ್ 2021 ಸ್ಪರ್ಧೆಯಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಅವರು ಮೊದಲ ರನ್ನರ್ ಆಪ್ ಸ್ಥಾನ ಪಡೆದಿದ್ದು, ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ಪ್ರಶಸ್ತಿಯನ್ನು ಜಯಿಸಿದ್ದಾರೆ.

ಮಿಸ್ ವರ್ಲ್ಡ್ 2021 ಸ್ಪರ್ಧೆಯಲ್ಲಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ಪ್ರಶಸ್ತಿಯನ್ನು ಜಯಿಸಿದ್ದಾರೆ. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)
ಕೋವಿಡ್-19 ಕಾರಣದಿಂದಾಗಿ 2020 ರಲ್ಲಿ ನಡೆಯಬೇಕಿದ್ದ ಮಿಸ್ ವರ್ಲ್ಡ್ 2021 ಸ್ಪರ್ಧೆ ತಡವಾಗಿ ಆಯೋಜನೆಯಾಗಿದ್ದು, ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿ ಮಾರ್ಚ್ 16 ರಂದು (ಮಾರ್ಚ್ 17 IST) ಪ್ರದರ್ಶನ ನಡೆಯಿತು. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)
ಈ ಸ್ಪರ್ಧೆಯಲ್ಲಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ವಿಶ್ವ ಸುಂದರಿ 2021 ಪ್ರಶಸ್ತಿಯನ್ನು ಗೆದ್ದಿದ್ದಾರೆ. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)
ಉಳಿದಂತೆ ಅಮೆರಿಕವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಶ್ರೀ ಸೈನಿ ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದರೆ ಕೋಟ್ ಡಿ'ಐವೊರ್‌ನ ಒಲಿವಿಯಾ ಯೇಸ್ ಎರಡನೇ ರನ್ನರ್ ಅಪ್ ಆದರು.
ಈ ಸ್ಪರ್ಧೆಯಲ್ಲಿ ಭಾರತದಿಂದ ಈ ಹಿಂದೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಆಗಿದ್ದ ಮಾನಸಾ ವಾರಣಾಸಿ ಅವರು ಸ್ಪರ್ದಿಸಿಸಿದ್ದರು. ಅವರು ಟಾಪ್ 13 ಸ್ಪರ್ಧಿಗಳನ್ನು ತಲುಪಿ, ಟಾಪ್ 6 ಫೈನಲಿಸ್ಟ್‌ಗಳಿಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)
ಕೊನೆಯದಾಗಿ ವಿಶ್ವ ಸುಂದರಿ ಕಿರೀಟವನ್ನು ಜಮೈಕಾದ 2019 ರ ವಿಶ್ವ ಸುಂದರಿ ಟೋನಿ-ಆನ್ ಸಿಂಗ್ ಪಡೆದಿದ್ದರು. ಭಾರತವು ಕೊನೆಯ ಬಾರಿಗೆ 2017 ರಲ್ಲಿ ಮಾನುಷಿ ಚಿಲ್ಲರ್ ಅವರ ಮೂಲಕ ಮಿಸ್ ವರ್ಲ್ಡ್ ಕಿರೀಟವನ್ನು ಗೆದ್ದುಕೊಂಡಿತು. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)
ಶ್ರೀ ಸೈನಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT