ಸಿನಿಮಾ

ಕಾನ್ ಚಲನಚಿತ್ರೋತ್ಸವ 2022: ರೆಡ್ ಕಾರ್ಪೆಟ್ ಮೇಲೆ 'ಅತ್ಯಾಚಾರ' ನಿಲ್ಲಿಸುವಂತೆ ಮಹಿಳೆಯಿಂದ ಅರೆ ನಗ್ನ ಪ್ರತಿಭಟನೆ!

Vishwanath S
ಮಹಿಳೆಯೊಬ್ಬರು ಕಾನ್ ಚಲನಚಿತ್ರೋತ್ಸವದಲ್ಲಿ ಕೆಂಪು ಕಾರ್ಪೆಟ್‌ನಲ್ಲಿ ತನ್ನ ದೇಹವನ್ನು ಉಕ್ರೇನಿಯನ್ ಧ್ವಜದ ಬಣ್ಣಗಳಲ್ಲಿ 'ಸ್ಟಾಪ್ ರೇಪಿಂಗ್ ಅಸ್' ಎಂದು ಬರೆದುಕೊಂಡು ಪ್ರತಿಭಟನೆ ನಡೆಸಿದರು.
ಮಹಿಳೆಯೊಬ್ಬರು ಕಾನ್ ಚಲನಚಿತ್ರೋತ್ಸವದಲ್ಲಿ ಕೆಂಪು ಕಾರ್ಪೆಟ್‌ನಲ್ಲಿ ತನ್ನ ದೇಹವನ್ನು ಉಕ್ರೇನಿಯನ್ ಧ್ವಜದ ಬಣ್ಣಗಳಲ್ಲಿ 'ಸ್ಟಾಪ್ ರೇಪಿಂಗ್ ಅಸ್' ಎಂದು ಬರೆದುಕೊಂಡು ಪ್ರತಿಭಟನೆ ನಡೆಸಿದರು.
ಟಾಪ್ ಲೆಸ್ ಆಗಿದ್ದ ಮಹಿಳೆಯು ಉಕ್ರೇನ್ ಧ್ವಜದ ಬಣ್ಣಗಳಲ್ಲಿ ತನ್ನ ದೇಹದ ಮೇಲೆ ನಮ್ಮ ಮೇಲಿನ ಅತ್ಯಾಚಾರವನ್ನು ನಿಲ್ಲಿಸಿ ಎಂದು ಬರೆದುಕೊಂಡು ಪ್ರತಿಭಟಿಸಿದರು. ತಕ್ಷಣ ಸೆಕ್ಯುರಿಟಿ ಗಾರ್ಡ್‌ ಅವರನ್ನು ಸ್ಥಳದಿಂದ ಕರೆದೊಯ್ದರು.
ಜಾರ್ಜ್ ಮಿಲ್ಲರ್ ಅವರ ಚಲನಚಿತ್ರ 'ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್' ನ ಪ್ರಥಮ ಪ್ರದರ್ಶನದಲ್ಲಿ ಭಾಗವಹಿಸಿದ ಟಿಲ್ಡಾ ಸ್ವಿಂಟನ್ ಮತ್ತು ಇಡ್ರಿಸ್ ಎಲ್ಬಾ ಸೇರಿದಂತೆ ಹಲವು ಅತಿಥಿಗಳ ರೆಡ್ ಕಾರ್ಪೆಟ್ ಪ್ರದರ್ಶನಕ್ಕೆ ಈ ಘಟನೆ ಅಡ್ಡಿಯುಂಟು ಮಾಡಿತು.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದ ಸೈನ್ಯವು ಈ ಹಿಂದೆ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ನೂರಾರು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಇದರಲ್ಲಿ ಸಣ್ಣ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯಗಳು ನಡೆದಿವೆ ಎಂದು ವರದಿಯಾಗಿದೆ ಎಂದಿದ್ದರು.
ಪ್ರತಿಭಟನೆ ನಿರತ ಮಹಿಳೆ
ಪ್ರತಿಭಟನೆ ನಿರತ ಮಹಿಳೆ
SCROLL FOR NEXT