ಡಿಸೆಂಬರ್ 14 ರ ಗುರುವಾರ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ತಮ್ಮ ಪುತ್ರಿ ಸುಹಾನಾ ಖಾನ್ ಮತ್ತು ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ತೆರಳಿ ಶಿರಡಿಯ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇವೆ ಸಲ್ಲಿಸಿದರು. 
ಸಿನಿಮಾ

'ಡಂಕಿ' ಚಿತ್ರ ಬಿಡುಗಡೆಗೆ ಸಜ್ಜು: ಶಿರಡಿ ಸಾಯಿಬಾಬಾ ಮುಂದೆ ಶಾರೂಕ್ ಖಾನ್ ಪ್ರಾರ್ಥನೆ

ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ತಮ್ಮ ಪುತ್ರಿ ಸುಹಾನಾ ಖಾನ್ ಮತ್ತು ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ತೆರಳಿ ಶಿರಡಿಯ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಕ್ರಿಸ್ ಮಸ್ ಹಬ್ಬಕ್ಕೆ ಶಾರೂಕ್ ಖಾನ್ ಅಭಿನಯದ ಡಂಕಿ ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಅವರು ಸಾಯಿಬಾಬಾನ ಆಶೀರ್ವಾದ ಪಡೆಯಲು ಬಂದಿದ್ದಾರೆ. ಡಿಸೆಂಬರ್ 21 ರಂದು ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಆಕ್ಷನ್-ಪ್ಯಾಕ್ಡ್ ಸಲಾರ್ ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ.
ಶಾರೂಕ್ ಪುತ್ರಿ ಸುಹಾನಾ ಅವರ ವೃತ್ತಿಜೀವನವು ಜೋಯಾ ಅಖ್ತರ್ ಅವರ ಚಲನಚಿತ್ರ ದಿ ಆರ್ಚೀಸ್‌ನಲ್ಲಿ ವೆರೋನಿಕಾ ಪಾತ್ರ ಮೂಲಕ ಪ್ರಾರಂಭವಾಗಿದೆ.
ಕಳೆದ ಮಂಗಳವಾರ ಶಾರುಖ್ ಖಾನ್ ಜಮ್ಮುವಿನ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವರ್ಷ ನಟ ತಮ್ಮ ಬ್ಲಾಕ್‌ಬಸ್ಟರ್ ಚಿತ್ರಗಳಾದ ಪಠಾನ್ ಮತ್ತು ಜವಾನ್ ಬಿಡುಗಡೆಗೂ ಮುನ್ನ ಈ ದೇವಾಲಯಕ್ಕೆ ಭೇಟಿ ನೀಡಿದ್ದರು.
ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಚಿತ್ರದಲ್ಲಿ ಬೊಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಅವರಂತಹ ಖ್ಯಾತ ಕಲಾವಿದರು ಇದ್ದಾರೆ.
ಅಭಿಜತ್ ಜೋಶಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಬರೆದಿರುವ ಡಂಕಿ ಚಿತ್ರ ನಾಲ್ಕು ಸ್ನೇಹಿತರ ಮತ್ತು ಲಂಡನ್ ತಲುಪುವ ಅವರ ಅನ್ವೇಷಣೆಯ ಹೃದಯಸ್ಪರ್ಶಿ ಕಥೆಯಾಗಿದೆ.
ಹಾಗಾದರೆ 2023 ವರ್ಷದ ಕೊನೆ ಶಾರೂಕ್ ಗೆ ಸಿಹಿಯಾಗಲಿದೆಯೇ, ಕಹಿಯಾಗಲಿದೆಯೇ ಎಂದು ನೋಡಬೇಕು.
ಶಾರೂಕ್ ಖಾನ್ ಗೆ ಸಾಯಿಬಾಬಾನ ಫೋಟೋ ಮತ್ತು ಪುಸ್ತಕ ಉಡುಗೊರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel